ಪತ್ನಿ ಮನೆಗೆಲಸದಾಕೆಯಲ್ಲ: ಸುಪ್ರೀಂ ಕೋರ್ಟ್
ಪತ್ನಿಯಷ್ಟೇ ಪತಿ ಕೂಡಾ ಮನೆಕೆಲಸ ಮಾಡಬೇಕು: ಸುಪ್ರೀಂ ಅಭಿಮತ
ನವದೆಹಲಿ: ‘ಪತಿಯಾದವನು ಮನೆಯಲ್ಲಿ ಅಡುಗೆ, ಸ್ವಚ್ಛತೆ, ಬಟ್ಟೆ ಒಗೆಯುವುದು ಮೊದಲಾದ ಕೆಲಸಗಳಲ್ಲಿ ಹೆಂಡತಿಯಷ್ಟೇ ಸಮಾನವಾಗಿ ತೊಡಗಿಕೊಳ್ಳಬೇಕು. ಆಕೆಂದರೆ ಆತ ಮನೆ ಕೆಲಸದಾಕೆಯನ್ನು ಮದುವೆಯಾ ಗಿಲ್ಲ, ಜೀವನ ಸಂಗಾತಿಯನ್ನು ಮದುವೆಯಾಗಿದ್ದಾನೆ’ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.
ಪತ್ನಿ ಸರಿಯಾಗಿ ಆಹಾರ ತಯಾರಿಸುತ್ತಿಲ್ಲ ಮತ್ತು ಪತಿಯ ಮೇಲೆ ಕ್ರೌರ್ಯ ತೋರುತ್ತಿದ್ದಾಳೆ ಎಂಬ ಕಾರ ಣಕ್ಕೆ ವ್ಯಕ್ತಿಯೊಬ್ಬನಿಗೆ ವಿಚಾರಣಾ ಕೋರ್ಟ್ ವಿಚ್ಛೇದನ ಮಂಜೂರು ಮಾಡಿತ್ತು. ಆದರೆ, ಕರ್ನಾಟಕ ಹೈಕೋರ್ಟ್ ಈ ಆದೇಶವನ್ನು ರದ್ದುಪಡಿಸಿತ್ತು. ಇದನ್ನು ಪ್ರಶ್ನಿಸಿ ಪತಿ ಸುಪ್ರೀಂಗೆ ಮೇಲ್ಮನವಿ ಸಲ್ಲಿಸಿದ್ದ. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ವಿಕ್ರಮ್ ನಾಥ್ ಹಾಗೂ ನ್ಯಾ. ಸಂದೀಪ್ ಮೆಹ್ರಾ ಅವರಿದ್ದ ಪೀಠ, ‘ಅಡುಗೆ, ಸ್ವಚ್ಛತೆ, ಬಟ್ಟೆ ಒಗೆಯುವುದು.. ಹೀಗೆ ಎಲ್ಲ ಕೆಲಸಗಳಲ್ಲೂ ಪತಿ ಸಮಾನವಾಗಿ ಪಾಲ್ಗೊಳ್ಳಬೇಕು.
ಗಂಡ ಮನೆಗೆಲಸದವಳನ್ನು ಮದುವೆಯಾಗಿರುವುದಿಲ್ಲ, ಬದಲಾಗಿ ಜೀವನ ಸಂಗಾತಿಯನ್ನು ಮದುವೆಯಾಗಿರುತ್ತಾನೆ’ ಎಂದು ತಿಳಿಹೇಳಿತು.
