ಚಿತ್ರದುರ್ಗ : ಹಕ್ಕುಪತ್ರಗಳನ್ನು ಸದ್ಯದಲ್ಲಿಯೇ ನೀಡಲಾಗುವುದು. ಅಲ್ಲಿಯವರೆಗೂ ಸಮಾಧಾನದಿಂದ ಇರುವಂತೆ ಎಂದು ಶಾಸಕಕೆ.ಸಿ.ವೀರೇಂದ್ರ ಪಪ್ಪಿ ಜನತೆಗೆ ಭರವಸೆ ನೀಡಿದರು.ಸಿಹಿನೀರು ಹೊಂಡದ ಏರಿ ಮೇಲಿರುವ ಅರಳಿ ಮರದ ನಾಗರಕಟ್ಟೆ ಆಂಜನೇಯಸ್ವಾಮಿ ದೇವಸ್ಥಾನದ ಕಾಂಪೌಂಡ್ ನಿರ್ಮಾಣಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿದ ಶಾಸಕ ಪಪ್ಪಿ ಈಗಾಗಲೆ ಒಂದು ಸಾವಿರ ಮನೆಗಳ ಮಂಜೂರಾಗಿದೆ. ಮನೆಗಳಬೇಡಿಕೆ ಹೆಚ್ಚಾಗಿರುವುದರಿಂದ ಇನ್ನು ಐದು ನೂರು ಮನೆಗಳನ್ನು ಮಂಜೂರು ಮಾಡಿಸಿ ನಿಜವಾದ ಬಡವರನ್ನು ಗುರುತಿಸಿಮನೆಗಳನ್ನು ನೀಡುತ್ತೇನೆ. ನೀವುಗಳು ಯಾರಿಗೂ ದುಡ್ಡು ಕೊಡುವುದು ಬೇಡ. ನಿಮ್ಮಗಳ ಸಮಸ್ಯೆಗಳು ಏನಿದ್ದರೂ ಹಂತಹಂತವಾಗಿ ಎಲ್ಲವನ್ನು ಬಗೆಹರಿಸುತ್ತೇನೆಂದು ಹೇಳಿದರು.
ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಮಂಜಪ್ಪ, ಮಾಜಿ ಸದಸ್ಯ ಶ್ರೀರಾಂ, ಪರಮೇಶ್, ಗುತ್ತಿಗೆದಾರ ಬ್ಯಾಲಾಳ್ ಜಯಪ್ಪ,
ಮರುಳಾರಾಧ್ಯ, ಯು.ಲಕ್ಷ್ಮಿಕಾಂತ್ ಇನ್ನು ಅನೇಕರು ಈ ಸಂದರ್ಭದಲ್ಲಿ ಹಾಜರಿದ್ದರು
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



