ಚಿತ್ರದುರ್ಗ: ಹಾಲು ಗುಣಮಟ್ಟವಾಗಿದ್ದರೆ ಒಳ್ಳೆಯ ದರ ಕೊಡಬಹುದೆಂದು ಶಿವಮೊಗ್ಗ ಹಾಲು ಒಕ್ಕೂಟದ ಅಧ್ಕಕ್ಷ ವಿದ್ಯಾಧರ ಹೇಳಿದರು.ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವತಿಯಿಂದ ತಿರುಮಲ ಕಲ್ಯಾಣಮಂಟಪದಲ್ಲಿ ನಡೆದ ಚಿತ್ರದುರ್ಗ ವಿಭಾಗದ ಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗ, ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮುರು ತಾಲ್ಲೂಕಿನ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಪ್ರಾದೇಶಿಕ ಸಭೆ ಉದ್ಘಾಟಿಸಿಮಾತನಾಡಿದರು.ಶಿವಮೊಗ್ಗ ಹಾಲು ಒಕ್ಕೂಟ ಗುಣಮಟ್ಟದಲ್ಲಿ ಕರ್ನಾಟಕ ರಾಜ್ಯದಲ್ಲಿಯೇ ಎರಡನೆ ಸ್ಥಾನದಲ್ಲಿದೆ. ಹಾಲಿನ ಗುಣಮಟ್ಟ ಕಾಪಾಡಿದಾಗ ಬೇಡಿಕೆ ಹೆಚ್ಚುತ್ತದೆ. ಇಲ್ಲದಿದ್ದರೆ ಪ್ರೋತ್ಸಾಹ ಧನ ಬರಲ್ಲ. ರೈತರಿಗೆ 35 ಕೋಟಿ ರೂ.ಗಳ ಸಬ್ಸಿಡಿ ಕೊಡುತ್ತಿದ್ದೇವೆ.ಹಸುಗಳಿಗೆಇನ್ಶೂರೆನ್ಸ್,ರಬ್ಬರ್ಮ್ಯಾಟ್,ಮೇವುಕತ್ತರಿಸುವಯಂತ್ರಪೂರೈಸುತ್ತಿದ್ದೇವೆ. ಸಹಕಾರಿ ಸಂಘಗಳ ಜೊತೆ ಕೈಜೋಡಿಸಿ ಎಂದು ಮನವಿ ಮಾಡಿದರು.ಸಂಘಗಳ ನಿರ್ವಹಣೆ, ಏನಾದರೂ ಕುಂದುಕೊರತೆಗಳಿದ್ದರೆ ನಮ್ಮ ಗಮನಕ್ಕೆ ತನ್ನಿ. ಬೈಲಾ ಪ್ರಕಾರ ಹಾಲು ಒಕ್ಕೂಟದಲ್ಲಿ ಹಣಕಾಸುವ್ಯವಹಾರ ನಡೆಸುವಂತಿಲ್ಲ. ಹಾಗಾಗಿ ಹಸುಗಳ ಸಾಕಾಣಿಕೆಗೆ ಸಾಲ ಪಡೆಯಲು ಡಿ.ಸಿ.ಸಿ.ಬ್ಯಾಂಕನ್ನು ಸಂಪರ್ಕಿಸಿ. ನಾನು ಕೂಡಬೋರ್ಡ್ನಲ್ಲಿ ಈ ವಿಚಾರವನ್ನು ಚರ್ಚಿಸುತ್ತೇನೆ. ಶಿವಮೊಗ್ಗದಲ್ಲಿ ಡಿ.ಸಿ.ಸಿ. ಬ್ಯಾಂಕ್ನಿಂದ ಸಾಲ ಕೊಡುವ ವ್ಯವಸ್ಥೆಯಿದೆ ಎಂದುತಿಳಿಸಿದರು.ಶಿವಮೊಗ್ಗ ಹಾಲು ಒಕ್ಕೂಟದ ನಿರ್ದೇಶಕರುಗಳಾದ ಜಿ.ಪಿ.ರೇವಣಸಿದ್ದಪ್ಪ, ಬಿ.ಆರ್.ರವಿಕುಮಾರ್, ಜಿ.ಬಿ.ಶೇಖರ್,ಬಿ.ಸಿ.ಸಂಜೀವಮೂರ್ತಿ, ವ್ಯವಸ್ಥಾಪಕ ನಿರ್ದೇಶಕ ಶೇಖರ್
ವ್ಯವಸ್ಥಾಪಕ ನವೀನ್ಕುಮಾರ್, ಕುಮಾರಸ್ವಾಮಿ ಇವರುಗಳು ವೇದಿಕೆಯಲ್ಲಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







