ಚಿತ್ರದುರ್ಗ : ಗಣೇಶ ಹಬ್ಬದಲ್ಲಿ ನಾಲ್ಕು ಬಾಕ್ಸ್ ಗಳನ್ನು ಬಳಸಲು ಅನುಮತಿ ನೀಡುವಂತೆ ಜಿಲ್ಲಾ ಷಾಮಿಯಾನ ಡೆಕೋರೇಷನ್ ಧ್ವನಿಮತ್ತು ದೀಪಾಲಂಕಾರ ಮಾಲೀಕರ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿ ಪ್ರಭಾರ ಕಚೇರಿಸಹಾಯಕರಿಗೆ ಮನವಿ ಸಲ್ಲಿಸಲಾಯಿತು.ಮಾಲೀಕರು ಲಕ್ಷಾಂತರ ರೂ.ಗಳ ಬಂಡವಾಳ ಹೂಡಿ ಡಿಜೆ ಖರೀಧಿಸಿರುತ್ತಾರೆ. ಪ್ರತಿ ವರ್ಷದಂತೆ ಈ ಬಾರಿಯೂ ಗಣೇಶನ ಹಬ್ಬಕ್ಕೆನಾಲ್ಕು ಬಾಕ್ಸ್ಗಳನ್ನು ಬಳಸಲು
ಅನುಮತಿ ಕೊಡಬೇಕು. ಇಲ್ಲದಿದ್ದರೆ ನಮ್ಮ ಬದುಕು ಕಷ್ಟವಾಗುತ್ತದೆಂದು ಷಾಮಿಯಾನ ಡೆಕೊರೇಷನ್ ಧ್ವನಿ ಮತ್ತು ದೀಪಾಲಂಕಾರಮಾಲೀಕರು ತಮ್ಮ ಅಳಲು ತೋಡಿಕೊಂಡರು.ಸಂಘದ ಅಧ್ಯಕ್ಷ ಈ.ಗಂಗಾಧರ, ಉಪಾಧ್ಯಕ್ಷ ವಿ.ರಂಗಸ್ವಾಮಿ, ಪ್ರಧಾನ ಕಾರ್ಯದರ್ಶಿ ಕೆ.ಎನ್.ತಿಪ್ಪೇಸ್ವಾಮಿ, ಕಾರ್ಯದರ್ಶಿಎಜಾಜ್ ಅಹಮದ್, ಖಜಾಂಚಿ ಸಣ್ಣತಿಮ್ಮಪ್ಪಸಂತೋಷ್, ರಾಮಚಂದ್ರಪ್ಪ, ಸಿದ್ದಲಿಂಗೇಶ್ವರಸ್ವಾಮಿ, ಪರಶುರಾಮಪ್ಪ, ತಿಪ್ಪೆಸ್ವಾಮಿ ಎನ್.ಟಿ. ರಾಮಮೂರ್ತಿ, ಡಿ.ರಾಜು,
ಶಿವಪ್ರಕಾಶ್, ಶ್ರೀನಿವಾಸ್, ಪರಮೇಶ್, ಶಶಿಧರ್ಮನೋಹರ್, ಫಯಾಜ್, ಚಿದಾನಂದಮೂರ್ತಿ ಇವರುಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







