ತಮಿಳಿನ ಸ್ಟಾರ್ ನಟ ಅಜಿತ್ ಕುಮಾರ್ ಅವರಿಗೆ ಸಿನಿಮಾ ಪ್ರವೃತ್ತಿಯಾಗಿದೆ, ವೃತ್ತಿ ರೇಸಿಂಗ್ ಆಗಿದೆ. ಕಳೆದ ಕೆಲ ವರ್ಷಗಳಲ್ಲಿ ಅಜಿತ್ ಅವರು ಸಿನಿಮಾ ಸೆಟ್ಗಿಂತಲೂ ಹೆಚ್ಚು ರೇಸಿಂಗ್ ಟ್ರ್ಯಾಕ್ ಮೇಲೆ ಹೆಚ್ಚು ಸಮಯ ಕಳೆದಿದ್ದಾರೆ. ರೇಸಿಂಗ್ ಅನ್ನೇ ವೃತ್ತಿಯಾಗಿರುವ ಸ್ವೀಕರಿಸಿರುವ ಅಜಿತ್ ಅವರು ಅಜಿತ್ ಕಾರ್ ರೇಸಿಂಗ್ ಹೆಸರಿನ ತಂಡವೊಂದನ್ನು ಕಟ್ಟಿಕೊಂಡು ವಿಶ್ವದ ನಾನಾ ದೇಶಗಳಲ್ಲಿ ಕಾರು ರೇಸಿಂಗ್ನಲ್ಲಿ ಭಾಗಿ ಆಗುತ್ತಿದ್ದಾರೆ. ಕಾರುಗಳ ಮೇಲೆ ಅಪಾರ ಪ್ರೀತಿಯುಳ್ಳ ಅಜಿತ್ ಅವರು ಹಲವು ಅತ್ಯುತ್ತಮ ಕಾರುಗಳನ್ನು ಖರೀದಿಸಿದ್ದಾರೆ. ಇದೀಗ ಹೊಸದೊಂದು ಕಾರನ್ನು ಅಜಿತ್ ಖರೀದಿ ಮಾಡಿದ್ದಾರೆ.ಅಜಿತ್ ಬಳಿ ಈಗಾಗಲೇ ಸುಮಾರು ಹತ್ತಕ್ಕೂ ಹೆಚ್ಚು ವಿಶ್ವದ ಅತ್ಯುತ್ತಮ ಕಾರುಗಳಿವೆ. ಲ್ಯಾಂಬೊರ್ಗಿನಿ ಜಿಟಿ, ಮೆಕ್ಲ್ಯಾರನ್ ಸೆನ್ನಾ, ಫೆರಾರಿ ಎಸ್ಎಫ್90, ಪೋರ್ಶೆ ಗಿಟಿ3 ಆರ್ಎಸ್, ಬಿಎಂಡಬ್ಲು 740 ಎಲ್ಐ, ಮರ್ಸಿಡೀಸ್ ಬೆಂಜ್ 350 ಜಿಎಲ್ಎಸ್, ಫೆರಾರಿ 458 ಇಟಾಲಿಯಾ, ಹೋಂಡಾ ಅಕಾರ್ಡ್ ವಿ6 ಸೇರಿದಂತೆ ಇನ್ನೂ ಕೆಲವು ವಿಶ್ವದ ಬಲು ವೇಗದ ಮತ್ತು ಅತ್ಯಾಧುನಿಕ ಐಶಾರಾಮಿ ಸೌಲಭ್ಯಗಳನ್ನು ಒಳಗೊಂಡ ಬಲು ದುಬಾರಿ ಕಾರುಗಳು ಇವೆ. ಇದೀಗ ಈ ಕಾರು ಸಂಗ್ರಹಕ್ಕೆ ಮತ್ತೊಂದು ಕಾರನ್ನು ಅಜಿತ್ ಸೇರ್ಪಡೆಗೊಳಿಸಿದ್ದಾರೆ.ಅಜಿತ್ ಅವರ ಕಲೆಕ್ಷನ್ನಲ್ಲಿ ಫೋರ್ಡ್ ಸಂಸ್ಥೆಯ ಕಾರು ಇರಲಿಲ್ಲ. ಇದೀಗ ಫೋರ್ಡ್ ಕಂಪೆನಿಯ ಪಿಕಪ್ ಟ್ರಕ್ ಒಂದನ್ನು ಖರೀದಿ ಮಾಡಿದ್ದಾರೆ ಅಜಿತ್. ಫೋರ್ಡ್ ಎಫ್150 ಪಿಕಪ್ ಟ್ರಕ್ ಮಾದರಿ ಕಾರನ್ನು ಅಜಿತ್ ಖರೀದಿ ಮಾಡಿದ್ದಾರೆ. ಈ ಕಾರು ತಮ್ಮ ಮಾಚೋ ಲುಕ್ನ ಜೊತೆಗೆ ತಮ್ಮ ಶಕ್ತಿ ಮತ್ತು ಸಾಮರ್ಥ್ಯದಿಂದ ಹೆಸರು ಮಾಡಿದೆ. ಅತ್ಯಂತ ಶಕ್ತಿಯುತ ಕಾರುಗಳಲ್ಲಿ ಇದು ಸಹ ಒಂದಾಗಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







