ನವದೆಹಲಿ: ಭಾರತದ ಸರಕುಗಳ ಮೇಲೆ ಶೇ. 50ರಷ್ಟು ಸುಂಕ ವಿಧಿಸಿರುವ ಅಮೆರಿಕದ ಕ್ರಮವನ್ನು ದಬ್ಬಾಳಿಕೆ, ಬೆದರಿಕೆ, ಸರ್ವಾಧಿಕಾರ ಪ್ರವೃತ್ತಿ ಎಂದು ಯೋಗ ಗುರು ಬಾಬಾ ರಾಮದೇವ್ (Baba Ramdev) ಆಕ್ರೋಶ ವ್ಯಕ್ತಪಡಿಸಿದ್ದು, ಅಮೆರಿಕನ್ ಉತ್ಪನ್ನಗಳನ್ನು ಬಾಯ್ಕಾಟ್ ಮಾಡುವಂತೆ ಭಾರತೀಯರಿಗೆ ಕರೆ ನೀಡಿದ್ದಾರೆ. ಭಾರತದಲ್ಲಿ ಪೆಪ್ಸಿ, ಕೋಕಾ ಕೋಲಾ, ಕೆಎಫ್ಸಿ, ಮೆಕ್ಡೊನಾಲ್ಡ್ಸ್ ಮತ್ತಿತರ ಅಮೆರಿಕನ್ ಕಂಪನಿಗಳ ಉತ್ಪನ್ನಗಳನ್ನು ಖರೀದಿಸುವುದನ್ನು ನಿಲ್ಲಿಸಿದಲ್ಲಿ ಅಮೆರಿಕ ದೇಶ ತತ್ತರಿಸುತ್ತದೆ ಎಂದು ಪತಂಜಲಿ ಸಂಸ್ಥೆಯ ಸಹ-ಸಂಸ್ಥಾಪಕರಾದ ರಾಮದೇವ್ ಅಭಿಪ್ರಾಯಪಟ್ಟಿದ್ದಾರೆ.ಎಎನ್ಐ ಸುದ್ದಿ ಸಂಸ್ಥೆ ಜೊತೆ ಮಾತನಾಡುತ್ತಿದ್ದ ಬಾಬಾ ರಾಮದೇವ್, ಅಮೆರಿಕದ ಶೇ. 50 ಟ್ಯಾರಿಫ್ ಹೇರಿಕೆಗೆ ಪ್ರತಿಯಾಗಿ ಎಲ್ಲಾ ಅಮೆರಿಕನ್ ಉತ್ಪನ್ನ ಮತ್ತು ಕಂಪನಿಗಳನ್ನು ಬಾಯ್ಕಾಟ್ ಮಾಡಬೇಕು. ಆಗ ಟ್ರಂಪ್ ಟ್ಯಾರಿಫ್ ವಾಪಸ್ ತೆಗೆದುಕೊಳ್ಳುತ್ತಾರೆ ಎಂದಿದ್ದಾರೆ.‘ಭಾರತದ ವಿರುದ್ಧ ಸೆಟೆದು ನಿಂತು ಟ್ರಂಪ್ ಘೋರ ತಪ್ಪು ಮಾಡಿದ್ದಾರೆ. ಪೆಪ್ಸಿ, ಕೋಕಾ ಕೋಲಾ, ಸಬ್ವೇ, ಕೆಎಫ್ಸಿ, ಮೆಕ್ಡೊನಾಲ್ಡ್ಸ್ ಅನ್ನು ಯಾರೂ ಖರೀದಿಸಬಾರದು. ವ್ಯಾಪಕವಾಗಿ ಬಾಯ್ಕಾಟ್ ನಡೆಯಬೇಕು. ಇದೇನಾದರೂ ಆದಲ್ಲಿ ಅಮೆರಿಕದಲ್ಲಿ ಗಲಿಬಿಲಿಯಾಗುತ್ತದೆ. ಅಲ್ಲಿ ಹಣದುಬ್ಬರ ಹೆಚ್ಚಳಗೊಂಡು ಟ್ರಂಪ್ ಸರಿದಾರಿಗೆ ಬರುವಂತಾಗುತ್ತದೆ’ ಎಂದು ಬಾಬಾ ರಾಮದೇವ್ ವಿವರಿಸಿದ್ದಾರೆ.
ಭಾರತದ ಮೇಲೆ ಡಬಲ್ ಟ್ಯಾರಿಫ್ ಹಾಕಲು ಏನು ಕಾರಣ?
ಭಾರತದ ಮೇಲೆ ಅಮೆರಿಕ ಶೇ. 50ರಷ್ಟು ಟ್ಯಾರಿಫ್ ಹಾಕುವುದರ ಹಿಂದೆ ಎರಡು ಸ್ಪಷ್ಟ ಕಾರಣಗಳು ಕಾಣಿಸುತ್ತಿವೆ. ಮೊದಲಿಗೆ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ಮಾತ್ರವಲ್ಲ, ಬಹುತೇಕ ಎಲ್ಲಾ ದೇಶಗಳ ಮೇಲೆ ಮೂಲ ತೆರಿಗೆಯನ್ನು ಹಾಕಿದ್ದಾರೆ. ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಂಡ ದೇಶಗಳಿಗೆ ಕಡಿಮೆ ಟ್ಯಾರಿಫ್ ಹಾಕಿದ್ದಾರೆ. ಒಪ್ಪಂದ ಮಾಡಿಕೊಳ್ಳದೇ ಇರುವ ದೇಶಗಳಿಗೆ ಅಧಿಕ ಟ್ಯಾರಿಫ್ ಹಾಕಿದ್ದಾರೆ.ರಷ್ಯನ್ ತೈಲ ಖರೀದಿಸುತ್ತಿದೆ ಎನ್ನುವ ಕಾರಣಕ್ಕೆ ಭಾರತದ ಮೇಲೆ ಹೆಚ್ಚುವರಿ ಟ್ಯಾರಿಫ್ ಹಾಕಲಾಗಿದೆ. ಇವೆರಡೂ ಸೇರಿ ಒಟ್ಟಾರೆ ಶೇ. 50ರಷ್ಟು ಟ್ಯಾರಿಫ್ ಭಾರತೀಯ ಉತ್ಪನ್ನಗಳ ಮೇಲೆ ಹಾಕಲಾಗುತ್ತಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







