‘ಸು ಫ್ರಮ್ ಸೋ’ ಸಿನಿಮಾ ಮೂಲಕ ರಾಜ್ ಬಿ ಶೆಟ್ಟಿ ಎಲ್ಲ ಕಡೆಗಳಲ್ಲೂ ಫೇಮಸ್ ಆಗಿದ್ದಾರೆ. ಈ ಮೊದಲು ಅವರು ಮಾಡುತ್ತಿದ್ದ ಚಿತ್ರಗಳು ಕನ್ನಡದಲ್ಲಿ ಮಾತ್ರ ಗಮನ ಸೆಳೆಯುತ್ತಿದ್ದವು. ಈಗ ಪರಭಾಷೆಯಲ್ಲೂ ಅವರ ಸಿನಿಮಾ ಸದ್ದು ಮಾಡಿದೆ. ‘ಸು ಫ್ರಮ್ ಸೋ’ ಯಶಸ್ಸಿನ ಬಳಿಕ ಅನೇಕರು ಅದನ್ನೇ ಕಾಪಿ ಮಾಡುವ ಸಾಧ್ಯತೆ ಇರುತ್ತದೆ. ಅಂದರೆ ಈ ರೀತಿಯ ಸಿನಿಮಾಗಳು ಜನರಿಗೆ ಹೆಚ್ಚು ಇಷ್ಟು ಆಗುತ್ತವೆ ಎಂದು ಭಾವಿಸಿ ಇದೇ ಮಾದರಿಯ ಚಿತ್ರಗಳನ್ನು ಮಾಡಲು ಹೋಗುವ ಸಾಧ್ಯತೆ ಇದೆ. ಈ ವಿಚಾರಕ್ಕೆ ಸಂಬಂಧಿಸಿ ರಾಜ್ ಅವರು ಕಿವಿ ಮಾತು ಹೇಳಿದ್ದಾರೆ.‘ಕೆಜಿಎಫ್’ ಕನ್ನಡ ಚಿತ್ರರಂಗದ ಪಾಲಿಗೆ ಅತಿ ದೊಡ್ಡ ಹಿಟ್ ಆಗಿದೆ. ಈ ರೀತಿಯ ಚಿತ್ರಗಳನ್ನು ಜನರು ನೋಡುತ್ತಾರೆ ಎಂದು ಭಾವಿಸಿ ಅನೇಕರು ಇದೇ ಮಾದರಿಯ ಸಿನಿಮಾಗಳನ್ನು ಮಾಡಲು ಹೋಗಿ ಕೈ ಸುಟ್ಟುಕೊಂಡ ಉದಾಹರಣೆ ಇದೆ. ಇನ್ನೂ ಕೆಲವೊಮ್ಮೆ ಸಕ್ಸಸ್ ಫಾರ್ಮಲಾದಿಂದ ಹೊಸದೇನು ಬರೋದಿಲ್ಲ. ಆ ರೀತಿ ಆಗಬಾರದು ಎಂಬುದು ರಾಜ್ ಅವರ ಕಾಳಜಿ. ಹೀಗಾಗಿ, ಅವರು ಈ ಬಗ್ಗೆ ಮಾತನಾಡಿದ್ದಾರೆ.
ಕನ್ನಡ ಪಿಚ್ಚರ್ ಯೂಟ್ಯೂಬ್ ಚಾನೆಲ್ ಕ್ಲಿಪ್ನ ‘ಸಿನಿ ಚಿಂತಕ’ ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ‘ಇನ್ನುಮುಂದೆ ಒಳ್ಳೆಯ ಸಿನಿಮಾಗಳನ್ನು ಮಾಡುವ ಕೆಲಸ ಜಾರಿಯಲ್ಲಿ ಇರಲಿದೆ. ಇದೇ ರೀತಿಯ ಸಿನಿಮಾ ಕಡೊಬೇಕು ಎಂಬುದನ್ನು ನೀವು ನನ್ನಿಂದ ನಿರೀಕ್ಷಿಸಬಾರದು’ ಎಂದು ಷರತ್ತೊಂದನ್ನು ಹಾಕಿದ್ದಾರೆ.‘ಇದೇ ತರಹದ ಸಿನಿಮಾ ಎಂಬುದು ಬಂದಾಗ ನಾವು ಯಶಸ್ಸಿನ ಹಾದಿಯನ್ನು ಮಾತ್ರ ಹಿಡಿಯಲು ಸಾಧ್ಯ. ನಾವು ಯಶಸ್ಸಿನ ಸೂತ್ರದ ಹಿಂದೆ ಹೋದಂತೆ ಆಗುತ್ತದೆ. ಆಗ ನಮ್ಮ ಇಂಡಸ್ಟ್ರಿ ಕೆಳಗೆ ಹೋಗುತ್ತದೆ. ಪ್ರತಿ ಸಿನಿಮಾಗಳಲ್ಲೂ ಹೊಸದನ್ನು ಮಾಡಬೇಕು ಎಂಬುದು ನಮ್ಮ ಉದ್ದೇಶ. ಇದಕ್ಕೆ ನಿಮ್ಮ ಬೆಂಬಲ ಬೇಕು’ ಎಂದಿದ್ದಾರೆ ರಾಜ್ ಬಿ ಶೆಟ್ಟಿ.‘ಒಂದು ಸಿನಿಮಾ ಮಾಡಿದ ಬಳಿಕ ಎರಡನೇ ಪಾರ್ಟ್ ಮಾಡಿದರೆ ಒಳ್ಳೆಯ ಬಿಸ್ನೆಸ್ ಆಗುತ್ತದೆ. ಆದರೆ, ನಾವು ಇಲ್ಲಿ ಬಿಸ್ನೆಸ್ ಮಾಡೋಕೆ ಬಂದಿಲ್ಲ. ಒಳ್ಳೆಯ ಸಿನಿಮಾ ಕೊಡೋಕೆ ಬಂದಿದ್ದೇವೆ’ ಎಂದು ರಾಜ್ ಅವರು ಹೇಳಿದ್ದಾರೆ. ಅವರ ಈ ಮಾತನ್ನು ಅನೇಕರು ಒಪ್ಪಿಕೊಂಡಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







