ನವದೆಹಲಿ: ಕಳೆದ ಎರಡೂವರೆ ದಶಕದಲ್ಲಿ ಉದ್ಯಾನ ನಗರಿ ಬೆಂಗಳೂರಿನಲ್ಲಿ ವಾಯು ಮಾಲಿನ್ಯ ಗಂಭೀರ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಪ್ರಸಕ್ತ ಐಟಿ ಸಿಟಿಯಲ್ಲಿನ ವಾಯು ಮಾಲಿನ್ಯವು ಪ್ರತಿ ನಾಗರಿಕರ ಆಯುಷ್ಯವನ್ನು 2 ವರ್ಷದಷ್ಟು ಕಡಿತ ಮಾಡುತ್ತಿದೆ ಎಂದು ವರದಿಯೊಂದು ಎಚ್ಚರಿಸಿದೆ.ಅಮೆರಿಕದ ಷಿಕಾಗೋ ವಿವಿಯ ‘ವಾಯು ಗುಣಮಟ್ಟ ಜೀವನ ಸೂಚ್ಯಂಕ’ವರದಿಯಲ್ಲಿ ಈ ಆತಂಕಕಾರಿ ಅಂಶಗಳಿವೆ. ವರದಿ ಅನ್ವಯ, 25 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಇದ್ದ ವಾಯು ಮಾಲಿನ್ಯವು ಜನರ ಆಯುಷ್ಯವನ್ನು ಸರಾಸರಿ 8 ತಿಂಗಳು ಕಡಿಮೆ ಮಾಡುತ್ತಿತ್ತು. ಆದರೆ ಆ ಪ್ರಮಾಣ ಇದೀಗ 2 ವರ್ಷಕ್ಕೆ ಏರಿಕೆ ಕಂಡಿದೆ.ಮಾಹಿತಿ ತಂತ್ರಜ್ಞಾನ ವಲಯ ಭಾರೀ ಅಭಿವೃದ್ಧಿ ಕಾಣುವುದಕ್ಕಿಂತ ಮೊದಲಿನ ಸಮಯವಾದ 1998ರಲ್ಲಿ ಬೆಂಗಳೂರಿನಲ್ಲಿ ಪಿಎಂ 2.5 ಪ್ರಮಾಣವು ಪ್ರತಿ ಕ್ಯೂಬಿಕ್ ಮೀಟರ್ ಪ್ರದೇಶದಲ್ಲಿ 13.1 ಮೈಕ್ರೋ ಗ್ರಾಂ ಇತ್ತು. 2023ರಲ್ಲಿ ಅದು 26.21 ಮೈಕ್ರೋಗ್ರಾಂಗೆ ಏರಿದೆ. ಅಂದರೆ 25 ವರ್ಷದಲ್ಲಿ ಮಾಲಿನ್ಯ ದ್ವಿಗುಣವಾಗಿದೆ.
ಎಲ್ಲೆಲ್ಲಿ ಎಷ್ಟು ಮಾಲಿನ್ಯ
ಬೆಂಗಳೂರು
26.21 ಮೈಕ್ರೋಗ್ರಾಂ
ಕಲಬುರಗಿ
28.31 ಮೈಕ್ರೋಗ್ರಾಂ
ಬೀದರ್
25.01 ಮೈಕ್ರೋಗ್ರಾಂ
ಬೆಳಗಾವಿ
23.72 ಮೈಕ್ರೋಗ್ರಾಂ
ಬೆಂಗಳೂರು ಮಾತ್ರವಲ್ಲದೇ ಇತರೆ ಹಲವು ಜಿಲ್ಲೆಗಳಲ್ಲೂ ಮಾಲಿನ್ಯ ಗಂಭೀರ ಪ್ರಮಾಣದಲ್ಲಿ ಏರಿದೆ. ಉದಾಹರಣೆಗೆ ಕಲಬುರಗಿಯಲ್ಲಿ 26.31, ಬೀದರ್ನಲ್ಲಿ 25.01, ಬೆಳಗಾವಿಯಲ್ಲಿ 23.72 ಮೈಕ್ರೋ ಗ್ರಾಂ ದಾಖಲಾಗಿದೆ ಎಂದು ವರದಿ ಹೇಳಿದೆ.ಬೆಂಗಳೂರು ಮಾತ್ರವಲ್ಲದೇ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲೂ ಪಿಎಂ 2.5 ಪ್ರಮಾಣವು ದ್ವಿಗುಣಗೊಂಡಿದೆ ಎಂದಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







