ಚಿತ್ರದುರ್ಗ: ಕಣ್ಣುಗಳನ್ನು ದಾನ ಮಾಡಿದರೆ ಅದರಿಂದ ಮತ್ತೊಬ್ಬ ವ್ಯಕ್ತಿಗೆ ದೃಷ್ಟಿ ಸಿಗುತ್ತದೆ ಕಣ್ಣುಗಳು ಅತ್ಯಮೂಲ್ಯ ಅವುಗಳನ್ನು ಜಾಗೃತೆಯಿಂದ ಕಾಪಾಡಿಕೊಳ್ಳಬೇಕು ಎಂದು ಬಸವೇಶ್ವರ ಮೆಡಿಕಲ್ ಕಾಲೇಜಿನ ಡಾಕ್ಟರ್ ಅಶ್ವಿನಿ ತಿಳಿಸಿದರು.40ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಸಪ್ತಾಹದ ಅಂಗವಾಗಿ ಎಸ್ಜೆಎಂ ಕಾನೂನು ಮಹಾ ವಿದ್ಯಾಲಯದಲ್ಲಿ ನಡೆದಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿ ವರ್ಷ ಲಕ್ಷಗಟ್ಟಲೆ ಜನ ಮರಣ ಹೊಂದುತ್ತಾರೆ. ಆದರೆ ಅವರ ಕಣ್ಣುಗಳು ಅತಿ ಮುಖ್ಯವಾಗಿರುತ್ತವೆ ಅವುಗಳನ್ನು ಅಂತ್ಯ ಸಂಸ್ಕಾರ ಮಾಡುವ ಸಂದರ್ಭದಲ್ಲಿ ಬೇರೆಯವರಿಗೆ ದಾನ ಮಾಡಿದರೆ ಅದರಿಂದ ಮತ್ತೊಬ್ಬರಿಗೆ ಉಪಯೋಗವಾಗುತ್ತದೆ ಇದರ ಬಗ್ಗೆ ಸರಿಯಾದ ಜಾಗೃತಿ ಮೂಡಿಸುವುದು ಅತೀ ಅಗತ್ಯ ಈ ರೀತಿ ಕಣ್ಣನ್ನು ವ್ಯಕ್ತಿಗಳು ತಾನು ಜೀವಂತ ಇದ್ದಾಗಲೇ ದಾನವನ್ನು ಮಾಡುವ ವಾಗ್ದಾನ ಮಾಡಬಹುದಾಗಿದೆ. ಇದಾದ ನಂತರ ಮರಣ ಹೊಂದಿದ ಆರು ಗಂಟೆಯ ಒಳಗೆ ಮೃತರ ಸಂಬಂಧಿಕರು ದಾನ ಮಾಡಲು ಇಚ್ಛಿಸಿದಲ್ಲಿ ಅದನ್ನು ವ್ಯವಸ್ಥಿತವಾಗಿ ಪಡೆದುಕೊಂಡು ದೃಷ್ಟಿ ಹೀನರಿಗೆ ಅದನ್ನು ಶಸ್ತ್ರಚಿಕಿತ್ಸೆಯ ಮೂಲಕ ಅಳವಡಿಸಲಾಗುತ್ತದೆ ಇದರಿಂದ ಒಬ್ಬ ವ್ಯಕ್ತಿಯ ಬಾಳಿಗೆ ಬೆಳಕಾಗುತ್ತದೆ ಎಂದು ಹೇಳಿದರು.ಬಸವೇಶ್ವರ ಪುನರ್ ಜ್ಯೋತಿ ಐ ಬ್ಯಾಂಕಿನ ಅಧ್ಯಕ್ಷ ಎಸ್. ವೀರೇಶ್ ಮಾತನಾಡಿ ಕಣ್ಣು ಕಸಿ ಮಾಡುವ ಶಸ್ತ್ರ ಚಿಕಿತ್ಸೆ ಮುಂದಿನ ದಿನದಲ್ಲಿ ಲಭ್ಯವಿದೆ ಅದನ್ನು ಉಪಯೋಗಿಸಿಕೊಳ್ಳಬಹುದು ಎಂದರು.ರೋಟರಿಯನ್ ಕನಕ ರಾಜ್ ಮಾತನಾಡಿ ರೋಟರಿ ಕ್ಲಬ್ ಚಿತ್ರದುರ್ಗದಲ್ಲಿ ಎಸ್.ಆರ್.ಬಿ.ಎಂ.ಎಸ್ ವತಿಯಿಂದ ಸೇವಾ ಕೇಂದ್ರವಾದ ಡಯಾಲಿಸಿಸ್ ಸೇವೆಯನ್ನು ಆರಂಭಿಸಲಾಗಿದೆ. ಇಲ್ಲಿ ಕಡಿಮೆ ದರದಲ್ಲಿ ಹಾಗೂ ಬಡವರಿಗೆ ಉಚಿತವಾಗಿ ಚಿಕಿತ್ಸೆಯನ್ನು ನೀಡಲಾಗುತ್ತದೆ ಇದರ ಉಪಯೋಗವನ್ನು ಪಡೆಯುವಂತೆ ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ನ ಸದಸ್ಯ ಎಸ್.ವಿ ಗುರುಮೂರ್ತಿ, ಎಸ್ಜೆಎಂ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯರಾದ. ಡಾ.ಎಸ್. ದಿನೇಶ್, ಉಮಾದೇವಿ, ಹರೀಶ್ , ರೋಟರಿ ಕ್ಲಬ್ನ ರೋ ದಿಲ್ ಶಾದ್ ಉನ್ನಿಸ, ಮಾಳಗಿ
ಪ್ರಮೋದ್ ಹಾಗೂವಿದ್ಯಾರ್ಥಿಗಳು ಹಾಜರಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







