ಚಿತ್ರದುರ್ಗ: ಕೆನರಾ ಬ್ಯಾಂಕ್ ಹಾಗೂ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವತಿಯಿಂದ ಚಿತ್ರದುರ್ಗ ತಾಲ್ಲೂಕಿನ ಸಿರಿಗೆರೆ ಸಮುದಾಯ ಭವನ ಹಾಗೂ ಭರಮಸಾಗರದ ಸಮುದಾಯದ ಭವನದಲ್ಲಿ “ಗ್ರಾಮ ಪಂಚಾಯಿತಿ ಪರಿಪೂರ್ಣತಾ ಅಭಿಯಾನ” ನಡೆಸಲಾಯಿತು.ಈ ವೇಳೆ ಕೆನರಾ ಬ್ಯಾಂಕ್ ಪ್ರಧಾನ ಕಚೇರಿಯ ಜನರಲ್ ಮ್ಯಾನೇಜರ್ ಸಿ.ಜಯಪ್ರಕಾಶ್ ಮಾತನಾಡಿ, ಸಾಮಾಜಿಕ ಭದ್ರತಾ ಯೋಜನೆಗಳಾದ ಪಿಎಂಜೆಜೆಬಿವೈ, ಪಿಎಂಎಸ್ಬಿವೈ ಹಾಗೂ ಎಪಿವೈ ಯೋಜನೆಗಳ ಬಗ್ಗೆ ಹಾಗೂ ಗ್ರಾಹಕರ ಖಾತೆಗಳಿಗೆ “Re kyc” ಹಾಗೂ ನಾಮನಿರ್ದೇಶನ ಮತ್ತು ಡಿಜಿಟಲ್ ಮೋಸಗಳ ಬಗ್ಗೆ ವಿಚಾರಗಳನ್ನು ಗ್ರಾಹಕರಿಗೆ ಹಾಗೂ ಗ್ರಾಮದ ನಾಗರೀಕರಿಗೆ ತಿಳಿಸಲಾಯಿತು.ಅಭಿಯಾನದಲ್ಲಿ ಸ್ಥಳದಲ್ಲಿಯೇ “Re kyc” ಹಾಗೂ ಪಿಎಂಜೆಜೆಬಿವೈ, ಪಿಎಂಎಸ್ಬಿವೈ ನೋಂದಣಿ ಕಾರ್ಯಗಳನ್ನು ಮಾಡಲಾಯಿತು.ಈ ಸಂದರ್ಭದಲ್ಲಿ ಕೆನರಾ ಬ್ಯಾಂಕ್ ದಾವಣಗೆರೆ ಪ್ರಾದೇಶಿಕ ಕಚೇರಿಯ ಡಿಜಿಎಂ ತನ್ಮಯ ದಾಸ್ ಹಾಗೂ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಪ್ರಬಂಧಕ ಎಂ.ರಾಘವೇಂದ್ರ, ಕೆನರಾ ಬ್ಯಾಂಕ್ ಸಿರಿಗೆರೆ ಶಾಖೆಯ ಹಿರಿಯ ಪ್ರಬಂಧಕ ಅರುಣ್, ಭರಮಸಾಗರ ಹಿರಿಯ ಪ್ರಬಂಧಕ ಎಚ್.ಪ್ರಶಾಂತ್, ಪಿಡಿಒ ಹೇಮಾವತಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ರುದ್ರಮುನಿ, ಸಿರಿಗೆರೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮಾರುತಿ, ಎನ್ಆರ್ಎಲ್ಎಂ ಕೋ ಆರ್ಡಿನೇಟರ್ ದೇವರಾಜ್, ಸೂಪರ್ವೈಸರ್ ರಂಜಿನಿ, ತರಳಬಾಳು ಸಂಜೀವಿನಿ ಸಂಘದ ಅಧ್ಯಕ್ಷ ಶಶಿಕಲಾ ಸೇರಿದಂತೆ ಮತ್ತಿತರರು ಇದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







