ಚಿತ್ರದುರ್ಗ: 1008 ಬಡ ರೈತರಿಗೆ ಉಚಿತವಾಗಿ ವಿವಾಹ ಮಾಡುತ್ತಿದ್ದೇವೆ ಎಂದು ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಬಿ. ಟಿ ಚಂದ್ರಶೇಖರ್ ಹೇಳಿದರು.ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಮಹಿಳೆಯರಿಗೆ ಮಾತ್ರ ಉಚಿತವಾಗಿ ನೀಡುತ್ತಿದೆ. ಅದರ ಬದಲಾಗಿ ರೈತರಿಗೆ, ರೈತರ ಮಕ್ಕಳಿಗೆ ಉಚಿತ ಯೋಜನೆಗಳನ್ನು ನೀಡಬೇಕು ಎಂದು ಒತ್ತಾಯಿಸಿದರು. ಇನ್ನುಇತ್ತೀಚಿನ ದಿನಗಳಲ್ಲಿ ರೈತರಿಗೆ ಯಾರು ಹೆಣ್ಣು ಕೊಡುತ್ತಿಲ್ಲ. ರೈತರ ಮಕ್ಕಳು ಮದುವೆ ಆಗೋದು ಕಷ್ಟ ಆಗಿದೆ. ಆದ್ದರಿಂದ ನಮ್ಮ ಸಂಘಟನೆಯಿಂದ 1008 ರೈತ ಜೋಡಿಗಳಿಗೆ ಚಿತ್ರದುರ್ಗದಲ್ಲಿ ಉಚಿತವಾಗಿ ಮದುವೆ ಮಾಡುವ ಮೂಲಕ ಮುನ್ನಡಿ ಬರೆಯಲು ಮುಂದಾಗಿದ್ದೇವೆ ಎಂದು ಹೇಳಿದರು. ಇದುವರೆಗೂ ರಾಜ್ಯಾದ್ಯಂತ ಓಡಾಟ ನಡೆಸಿ 800 ಜೋಡಿಗಳನ್ನು ಕಲೆ ಹಾಕಿದ್ದೇವೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ತುಂಬಾ ಕಡುಬಡತನದ ರೈತರ ಮಕ್ಕಳಿಗೆ ಮದುವೆ ಮಾಡುತ್ತಿದ್ದೇವೆ ಎಂದು ಹೇಳಿದರು.ಸರ್ಕಾರ ರೈತರ ಇಂತಹ ವಿಚಾರಗಳ ಬಗ್ಗೆ ಗಮನ ಹರಿಸಬೇಕು. ರೈತರಿಗೆ ಸರ್ಕಾರ ಕರೆಂಟ್, ನೀರು, ಮನೆಗಳನ್ನು ನೀಡಬೇಕು. ಆಗ ರೈತನೇ ಸರ್ಕಾರವನ್ನು ಪೋಷಿಸುವ ಕೆಲಸ ಮಾಡುತ್ತಾನೆ. ರೈತರ ಕಷ್ಟಗಳು ಏನು ಅನ್ನೋದು ಸರ್ಕಾರ ಗೊತ್ತಾಗಬೇಕು. ಬೆಳೆ ಬೆಳೆಯುವ ರೈತರಿಗೆ ಮೊದಲು ಗೌರವ ಕೊಡಿ ಎಂದು ಮನವಿ ಮಾಡಿದರು. ಈ ನಮ್ಮ ಕಾರ್ಯಕ್ರಮದ ಬಗ್ಗೆ ಶೃಂಗೇರಿ ಮಠದ ಗುರುಗಳ ಬಳಿ ಹೋಗಿ ಹೇಳಿದಾಗ, ಜಗದ್ಗುರು ಭಾರತಿ ತೀರ್ಥ ಮಹಾ ಸ್ವಾಮೀಜಿ ಹಾಗೂ ವಿಧು ಶೇಖರ್ ಭಾರತೀ ಮಹಾ ಸ್ವಾಮೀಜಿಯವರು ಮೆಚ್ಚುಗೆ ವ್ಯಕ್ತಪಡಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವುದಕ್ಕೆ ಒಪ್ಪಿದ್ದಾರೆ. ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರು 1008 ತಾಳಿಗಳನ್ನು ನೀಡಿದ್ದು, ವಿನಯ್ ಗುರೂಜಿ ಹಾಗೂ ಶ್ರೀಸಾಯಿ ಗೋಲ್ಡ್ ಮಾಲೀಕರಾದ ಶರವಣ ಅವರು 1008 ಸೀರೆ ನೀಡುವ ಮೂಲಕ ನಮ್ಮ ಕಾರ್ಯಕ್ರಮಕ್ಕೆ ಬೆಂಬಲ ನೀಡಿದ್ದಾರೆ ಎಂದು ಹೇಳಿದರು.ಇದೆ ವೇಳೆ ಚಂದ್ರಶೇಖರ್,ದೇವಮ್ಮ, ರಘುವೀರ್, ಓಬಳೇಶ್, ತಿಪ್ಪೇಶ್ ಮತ್ತಿತರು ಇದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







