ಹೊಳಲ್ಕೆರೆ: ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗ ದಳದ ನೇತೃತ್ವದಲ್ಲಿ ಪಟ್ಟಣದಲ್ಲಿ ಪ್ರಾತಿಷ್ಠಾಪಿಸಿದ್ದ 12ನೇ ವರ್ಷದ ಹಿಂದೂ ಮಹಾಗಣಪತಿ ವಿಸರ್ಜನಾ ಕಾರ್ಯಕ್ರಮದ ಅಂಗವಾಗಿ ಕೈಗೊಂಡಿದ್ದ ಬೃಹತ್ ಶೋಭಾಯಾತ್ರೆ ಸಾವಿರಾರು ಗಣಪತಿ ಭಕ್ತರ ಸಮುಖದಲ್ಲಿ ಪಟ್ಟಣದ ರಾಜ ಬೀದಿಗಳಲ್ಲಿ ನಾನಾ ಜಾನಪದ ಕಲಾ ತಂಡಗಳ ಸಹಯೋಗದಲ್ಲಿ ಅದ್ಧೂರಿಯಾಗಿ ಶೋಭಾಯಾತ್ರಾ ಮೆರವಣಿಗೆ ಬಳಿಕ ಪಟ್ಟಣದ ತೋಟದ ಮನೆ ಹೊಂಡದಲ್ಲಿ ವಿಸರ್ಜಿಲಾಯಿತ್ತು.ಬೆಳಿಗ್ಗೆ 10 ಗಂಟೆಗೆ ಹಿಂದೂ ಮಹಾಗಣಪತಿಗೆ ಮಹಾ ಮಂಗಳಾರತಿ, ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ, ಹೊಸದುರ್ಗದ ಕುಂಚಿಟಿಗ ಮಠದ ಶ್ರೀ ಶಾಂತವೀರಸ್ವಾಮಿಜಿ, ಭಗೀರಥ ಗುರುಪೀಠದ ಪುರುಷೋತ್ತಮಾನಂದಪುರಿ ಸ್ವಾಮಿಜಿ, ಹರಿಹರದ ಪಂಚಮಸಾಲಿ ಗುರುಪೀಠದ ವಚನಾನಂದಸ್ವಾಮಿಜಿ, ಯಾದವ ಮಹಾಸಂಸ್ಥಾನದ ಕೃಷ್ಣಯಾದವಾನಂದ ಸ್ವಾಮಿಜಿ, ಲಂಬಾಣಿ ಗುರುಪೀಠದ ಸೇವಾಲಾಲ್ ಸ್ವಾಮಿಜಿ ಹಾಗೂ ವಿಶ್ವ ಹಿಂದೂ ಪರಿಷತ್ ಮುಖಂಡ ಸರ್ಯನಾರಾಯನ್, ಸಂಘಟಕ ಚಂದ್ರಶೇಖರ್, ಶಾಸಕ ಎಂ.ಚಂದ್ರಪ್ಪ, ಸಮಿತಿ ಅಧ್ಯಕ್ಷ ಅಜಯ್ ಹಾಗೂ ಸಮಿತಿ ಸದಸ್ಯರು ಶೋಭಾಯಾತ್ರೆ ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು.ಕಳೆದ ಹತ್ತು ದಿನಗಳಿಂದ ಪ್ರತಿಸ್ಟಾಪಿಸಿದ್ದ ಹಿಂದೂ ಮಾಹಾಗಣಪನಿಗೆ ವಿಶೇಷ ಪೂಜಾದಿಗಳನ್ನು ಸಲ್ಲಿಸಿದ ಬಳಿಕ ಪ್ರತಿಷ್ಟಾಪನಾ ಮಂಟಪ ದಿಂದ ವಿವಿಧ ವರ್ಣಮಯ ಹೂವುಗಳಿಂದ ಅಲಂಕರಿಸಿದ ಟ್ಯಾಕ್ಟರ್ನಲ್ಲಿ ಕೂರಿಸಲಾಗಿತ್ತು. ಬಳಿಕ ಜಾನಪದ ಕಲಾ ತಂಡಗಳಾದ ಚಮಡಿ ವಾದ್ಯ, ತಮಟೆ ವಾದ್ಯ, ವೀರಗಾಸೆ, ಗೊಂಬೆ ಕುಣಿತಗಳ ವಾದ್ಯಕ್ಕೆ ಹಾಗೂ ಹಾಡುಗಳಿಗೆ ಯುವಕರು, ಮಕ್ಕಳು, ಮಹಿಳೆಯರು, ಯುವತಿಯರು ಹೆಜ್ಜೆ ಹಾಕಿ ಭಕ್ತಿ ಪ್ರದರ್ಶಿಸಿದರು.
ಪುರ್ಪ್ಪಾಚನೆ : ಪಟ್ಟಣದ ಮೇಲಿನ ಸ್ಟಾಂಡ್ ನಿಂದ ಹೊರಟ ಹಿಂದೂ ಮಹಾಗಣಪತಿ ಶೋಭಾಯಾತ್ರೆ ಪಟ್ಟಣದ ರಾಜಬೀದಿಗಳಾದ ಶಿವಮೊಗ್ಗ ಚಿತ್ರದುರ್ಗ ಮುಖ್ಯ ರಸ್ತೆ, ಬಸ್ ನಿಲ್ದಾಣ ರಸ್ತೆಗಳಲ್ಲಿ ಸಾಗಿತ್ತು. ಹಾಗಾಗಿ ಶೋಭಾಯಾತ್ರೆಯುದ್ದಕ್ಕು ಭಕ್ತರು ಗಣಪತಿ ಮೇಲೆ ಪುರ್ಪ್ಪಾಚನೆೆ ಮಾಡಿದರೂ. ಇನ್ನು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದ ಭಕ್ತರಿಗೆ ಸ್ಥಳೀಯರು ನೀರು, ಪಾನಕ, ಹಸಿಕಾಳು, ತಿಂಡಿತಿನಿಸುಗಳನ್ನು ನೀಡಿ ಪ್ರೋತ್ಸಾಹ ನೀಡಿದರು.
ಸ್ವಾಮೀಜಿಗಳ ಭಾಷಣ
ಗಣಪತಿ ಹಬ್ಬ ನಮ್ಮ ಧರ್ಮ ಮತ್ತು ಸಂಸ್ಕೃತಿಯ ಪ್ರೇರಕ. ಇತ್ತಿಚಿನ ದಿನಗಳಲ್ಲಿ ಪಿಒಪಿ ಗಣಪತಿ ತಂದು ಪೂಜಿಸಿ ಎಲ್ಲೇಂದರಲ್ಲಿ ವಿಸರ್ಜಿಸಿ, ನಮ್ಮ ಧರ್ಮದ ಮರಿಯಾದೆ ಕಳೆಯಲಾಗುತ್ತಿದೆ. ಹಳ್ಳಕೊಳ್ಳದಲ್ಲಿ ಬಿದ್ದಿರುವ ಪಿಓಪಿ ಗಣಪತಿಗಳು ಮುರಿದು, ತೇಲಿ ವಿಕೃತವಾಗಿ ಕಾಣುತ್ತಿವೆ. ಅವುಗಳು ಸಾಮಾಜೀಕ ಜಾಲತಾಣಗಳಲ್ಲಿ ಪ್ರಸಾರವಾಗಿ ನಮ್ಮ ಧರ್ಮವನ್ನು ಅನ್ಯರು ಹಣಕಿಸುವಂತೆ ಮಾಡುತ್ತಿದೆ. ಪ್ರಕೃತಿ ಸ್ನೇಹಿ ಮಣ್ಣಿನ ಗಣಪತಿ ಪೂಜಿನೀಯ. ಮುಂದಿನ ದಿನಗಳಲ್ಲಿ ಪಿಒಪಿ ಗಣಪತಿ ಪೂಜಿಸುವ ಕಾರ್ಯಕ್ರಮಕ್ಕೆ ಸ್ವಾಮಿಜಿಗಳು ಹೊಗಬಾರದು. ಹಣ ಕೇಳಲು ಬರುವ ಸಂಘಟಕರಿಗೆ, ರಾಜಕಾರಣಿಗಳು ಹಣ ಕೊಡದೆ ಮಣ್ಣಿನ ಗಣಪತಿ ಕೊಂಡಿಸಬೇಕು. ಇವತ್ತು ಗಣಪತಿ ಹಬ್ಬ ಎಂದರೇ ಡಿಜೆ ಹಾಕಿ, ಅದರ ಮುಂದೆ ಕುಡಿದು ಕುಣಿಯುವುದು. ಇಂತ ವಿಕಾರ ಮನೋಸ್ಥಿತಿ ವ್ಯವಸ್ಥೆ ಇಟ್ಟುಕೊಂಡು ಧರ್ಮ ದೇವರ ಹೆಸರಲ್ಲಿ ಹಣ ಖರ್ಚು ಮಾಡಿದರೇ ಧರ್ಮ ಜಾಗೃತವಾಗಲ್ಲ. ಧರ್ಮ,ಸಂಸ್ಕೃತಿ,ಸಂಸ್ಕಾರ, ಸಂಘಟನೆಗೆ ಧಕ್ಕೆಯಾಗದಂತೆ ನಮ್ಮ ಆಚರಣೆಗಳನ್ನು ಜಾರಿಗೆ ತರಬೇಕು ಎಂದು ಕುಂಚಿಟಿಗ ಮಠದ ಶ್ರೀ ಶಾಂತವೀರ ಸ್ವಾಮೀಜಿ ಹೇಳಿದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







