‘ಕಾಂತಾರ: ಚಾಪ್ಟರ್ 1’ (Kantara Chapter 1) ಸಿನಿಮಾ ಭಾರತದ ಈಗಿನ ಅತ್ಯಂತ ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದೆ. ಸಿನಿಮಾಕ್ಕೆ ಕರ್ನಾಟಕದಲ್ಲಿ ಮಾತ್ರವೇ ಅಲ್ಲದೆ ಹಲವು ರಾಜ್ಯಗಳಲ್ಲಿ ಅದ್ಭುತವಾದ ಹೈಪ್ ಸೃಷ್ಟಿಯಾಗಿದೆ. ನೆರೆಯ ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಂತೂ ‘ಕಾಂತಾರ’ದ ಬಗ್ಗೆ ಭಾರಿ ನಿರೀಕ್ಷೆಗಳಿದೆ. ಇದೇ ಕಾರಣಕ್ಕೆ ಆಂಧ್ರ ಪ್ರದೇಶದಲ್ಲಿ ‘ಕಾಂತಾರ’ ಸಿನಿಮಾದ ವಿತರಣೆ ಹಕ್ಕು ಖರೀದಿಗೆ ನೂಕು-ನುಗ್ಗಲು ಉಂಟಾಗಿತ್ತು. ಕೊನೆಗೆ ಆಂಧ್ರದ ಆರು ವಿತರಕರಿಗೆ ಸಿನಿಮಾ ವಿತರಣೆ ಹಕ್ಕು ಮಾರಾಟ ಮಾಡಲಾಗಿದೆ. ಇದೀಗ ತೆಲುಗಿನ ಸೂಪರ್ ಸ್ಟಾರ್ ನಟರೂ ಸಹ, ‘ಕಾಂತಾರ’ ಕ್ರೇಜ್ ಅನ್ನು ತಮ್ಮ ಸಿನಿಮಾದ ಪ್ರಚಾರಕ್ಕೆ ಬಳಸಿಕೊಳ್ಳಲು ಮುಂದಾಗಿದ್ದಾರೆ.ತೆಲುಗಿನ ಸ್ಟಾರ್ ನಟ ಪ್ರಭಾಸ್, ಅವರ ನಟನೆಯ ‘ದಿ ರಾಜಾ ಸಾಬ್’ ಸಿನಿಮಾ ಬಿಡುಗಡೆಯನ್ನು ಹಲವು ಬಾರಿ ಮುಂದೂಡಿದೆ, ಸಿನಿಮಾದ ಟೀಸರ್ ಈಗಾಗಲೇ ಬಿಡುಗಡೆ ಆಗಿದ್ದು, ‘ಬಾಹುಬಲಿ’ಗೂ ಮುಂಚಿನ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ರೀತಿ ಪ್ರಭಾಸ್ ಆ ಸಿನಿಮಾನಲ್ಲಿ ಕಾಣಿಸಿಕೊಂಡಿದ್ದಾರೆ. ಆಕ್ಷನ್ ಹೀರೋ ರೀತಿ ಅಲ್ಲದೆ ಫನ್ನಿ ಲವ್ವರ್ ಬಾಯ್ ರೀತಿ ಪ್ರಭಾಸ್ ‘ದಿ ರಾಜಾ ಸಾಬ್’ ಸಿನಿಮಾನಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಬಿಡುಗಡೆ ಈಗಾಗಲೇ ಮೂರು ಬಾರಿ ಮುಂದೆ ಹೋಗಿದೆ. ಇದೀಗ ಸಿನಿಮಾದ ಟ್ರೈಲರ್ ಬಿಡುಗಡೆಗೆ ಮುಂದಾಗಿದ್ದು, ‘ದಿ ರಾಜಾ ಸಾಬ್’ ಟ್ರೈಲರ್ ಹಾಗೂ ‘ಕಾಂತಾರ: ಚಾಪ್ಟರ್ 1’ಗೂ ಲಿಂಕ್ ಇದೆ.
‘ಕಾಂತಾರ: ಚಾಪ್ಟರ್ 1’ ಸಿನಿಮಾ ಅಕ್ಟೋಬರ್ 02 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಆ ಸಿನಿಮಾದ ಜೊತೆಗೆ ‘ದಿ ರಾಜಾ ಸಾಬ್’ ಟ್ರೈಲರ್ ಅನ್ನು ಅಟ್ಯಾಚ್ ಮಾಡಲಾಗುತ್ತಿದೆ. ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಇಂಟರ್ವೆಲ್ನಲ್ಲಿ ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಸಿನಿಮಾದ ಟ್ರೈಲರ್ ಅನ್ನು ಪ್ರದರ್ಶನ ಮಾಡಲಾಗತ್ತಿದೆ. ತೆಲಂಗಾಣ ಮತ್ತು ಆಂಧ್ರ ಪ್ರದೇಶದಲ್ಲಿ ಮಾತ್ರವಾ ಅಥವಾ ಸಿನಿಮಾ ಎಲ್ಲೆಲ್ಲಿ ಬಿಡುಗಡೆ ಆಗುತ್ತದೆಯೋ ಅಲ್ಲೆಲ್ಲ ಟ್ರೈಲರ್ ಪ್ರದರ್ಶನ ಮಾಡಲಾಗುತ್ತದೆಯೋ ಎಂಬ ಬಗ್ಗೆ ಖಾತ್ರಿ ಇಲ್ಲ.ಪ್ರಭಾಸ್ ಹಾಗೂ ‘ಕಾಂತಾರ’ ನಿರ್ಮಾಣ ಮಾಡಿರುವ ಹೊಂಬಾಳೆ ನಡುವೆ ಬಹಳ ಆತ್ಮೀಯ ಬಂಧವಿದ್ದು, ಹೊಂಬಾಳೆ ಜೊತೆಗೆ ಮೂರು ಸಿನಿಮಾಗಳ ಒಟ್ಟು ಒಪ್ಪಂದವನ್ನು ಪ್ರಭಾಸ್ ಈಗಾಗಲೇ ಮಾಡಿಕೊಂಡಿದ್ದಾರೆ. ಈಗ ‘ಕಾಂತಾರ’ ಸಿನಿಮಾದ ಜೊತೆಗೆ ಪ್ರಭಾಸ್ ಅವರ ‘ದಿ ರಾಜಾ ಸಾಬ್’ ಟ್ರೈಲರ್ ಅಟ್ಯಾಚ್ ಮಾಡುವುದರಿಂದ ಇಬ್ಬರಿಗೂ ಅನುಕೂಲ ಆಗಲಿದೆ. ಪ್ರಭಾಸ್ ಟ್ರೈಲರ್ ನೋಡಲೆಂದು ಕೆಲವರು ಸಿನಿಮಾಕ್ಕೆ ಬಂದರೆ, ಸಿನಿಮಾ ನೋಡಲು ಬಂದವರಿಗೆ ಟ್ರೈಲರ್ ತೋರಿಸುವ ಮೂಲಕ ಸಿನಿಮಾದ ಪ್ರಚಾರ ಮಾಡಬಹುದಾಗಿದೆ. ಒಟ್ಟಿನಲ್ಲಿ ಈ ಯೋಜನೆಯಿಂದ ಎರಡೂ ಸಿನಿಮಾಗಳಿಗೂ ಒಳಿತೆ ಆಗಲಿದೆ.‘ದಿ ರಾಜಾ ಸಾಬ್’ ಸಿನಿಮಾ, ಹಾರರ್ ಕಾಮಿಡಿ ಸಿನಿಮಾ ಆಗಿದೆ. ಸಿನಿಮಾ ಅನ್ನು ಮಾರುತಿ ನಿರ್ದೇಶನ ಮಾಡಿದ್ದಾರೆ. ಸಿನಿಮಾನಲ್ಲಿ ಮಾಳವಿಕ ಮೋಹನನ್, ನಿಧಿ ಅಗರ್ವಾಲ್ ಮತ್ತು ರಿಧಿ ಕುಮಾರ್ ನಾಯಕಿ. ಈ ಸಿನಿಮಾನಲ್ಲಿ ಪ್ರಭಾಸ್ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ತಾತ ಮತ್ತು ಮೊಮ್ಮಗನ ಪಾತ್ರದಲ್ಲಿ ಪ್ರಭಾಸ್ ಕಾಣಿಸಿಕೊಂಡಿದ್ದಾರೆ. ಸಿನಿಮಾನಲ್ಲಿ ಬಾಲಿವುಡ್ ನಟ ಬೊಮನ್ ಇರಾನಿ, ತಮಿಳಿನ ಯೋಗಿ ಬಾಬು, ಹಾಸ್ಯ ನಟ ವೆನ್ನೆಲ ಕಿಶೋರ್ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾ ಮುಂದಿನ ವರ್ಷ ಜನವರಿಯಲ್ಲಿ ತೆರೆಗೆ ಬರಲಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







