ನಟ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲು ಸೇರಿದ್ದರು. ಆಗ ಅವರು ಬೆನ್ನು ನೋವಿನ ಕಾರಣ ಹೇಳಿ ಮಧ್ಯಂತರ ಜಾಮೀನು ಪಡೆದಿದ್ದರು. ಈ ಅವಧಿಯಲ್ಲಿ ಅವರು ಆಸ್ಪತ್ರೆಯಲ್ಲೇ ಇದ್ದರು. ಆಪರೇಷನ್ ಅಗತ್ಯವಿದೆ ಎಂದು ಪರೀಕ್ಷಿಸಿದ ವೈದ್ಯರು ಹೇಳಿದ್ದರು. ಆದರೆ, ಸಂಪೂರ್ಣ ಜಾಮೀನು ಸಿಕ್ಕ ಬಳಿಕ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದರು. ಈವರೆಗೆ ಅವರು ಆಪರೇಷನ್ ಮಾಡಿಸಿಕೊಂಡಿಲ್ಲ. ಅವರು ಆ ಬಳಿಕ ಹಾಯಾಗಿ ಸುತ್ತಾಡಿಕೊಂಡಿದ್ದರು. ಕ್ಯಾಮೆರಾ ಕಂಡಾಗ ಅವರು ನಾಟಕ ಮಾಡುತ್ತಾರೆ ಎಂದೆಲ್ಲ ಹೇಳಲಾಯಿತು. ಈಗ ವಿಡಿಯೋ ಒಂದು ವೈರಲ್ ಆಗಿದೆ. ‘ಡೆವಿಲ್’ ಸಿನಿಮಾ ಶೂಟ್ ಸಂದರ್ಭದಲ್ಲಿ ಮಾಡಿದ ವಿಡಿಯೋ ಇದಾಗಿದೆ.ದರ್ಶನ್ ಅವರಿಗೆ ನಿಜಕ್ಕೂ ಬೆನ್ನು ನೋವು ಇದೆಯಂತೆ. ಅದನ್ನು ತೋರಿಸುವಂತಹ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ಶೂಟಿಂಗ್ ವೇಳೆ ಬೆನ್ನು ನೋವು ತಾಳಲಾರದೆ ಮಲಗಿರೋದು ಕಂಡು ಬರುತ್ತದೆ. ಅವರು ಶೂಟಿಂಗ್ ವೇಳೆ ಬೆನ್ನು ನೋವು ತಾಳಲಾರದೆ ನರಳಾಡಿದ್ದಾರೆ.ಈ ಬಗ್ಗೆ ‘ಕನ್ನಡ ಪಿಚ್ಚರ್’ ಯೂಟ್ಯೂಬ್ ಚಾನೆಲ್ ಜೊತೆ ಮಾತನಾಡಿದ ‘ಡೆವಿಲ್’ ಬರಹಗಾರ ಕಾಂತರಾಜ್, ‘ಹುಡುಗಿಯನ್ನು ಎತ್ತಿಕೊಳ್ಳಬೇಕಿತ್ತು. ಅವರು ಎತ್ತಿಕೊಂಡರು. ಅವಳಿಗೆ ನೋವಾಗಬಾರದು ಎಂದು ನಿಧಾನಕ್ಕೆ ಕೆಳಕ್ಕೆ ಇಳಿಸಿ, ಆ ಬಳಿಕ ಬೆನ್ನು ಹಿಡಿದುಕೊಂಡರು’ ಎಂದು ಹೇಳಿದ್ದಾರೆ.‘ಫೈಟ್ ದೃಶ್ಯ ಇತ್ತು. ಬೆನ್ನು ನೋವು ಇತ್ತು. ಡ್ಯೂಪ್ ಹಾಕೋಣ ಎಂದು ಮಾಸ್ಟರ್ ಹೇಳಿದರು. ನಾನು ಮಾಡ್ತೀನಿ ಎಂದು ಸುಮಾರು ದೂರ ಹೋಗಿ ಬೆನ್ನು ಹಿಡಿದುಕೊಂಡರು. ಒಂದು ಶಾಟ್ ತೆಗೆದುಕೊಳ್ಳುತ್ತಾ ಇದ್ದೆವು. ಅವರು ಕೆಳಗೆ ಮಲಗಿ ಬೆನ್ನು ಹಿಡಿದುಕೊಂಡರು. ಸೋಶಿಯಲ್ ಮೀಡಿಯಾದಲ್ಲಿ ಕ್ಯಾಮೆರಾ ಕಂಡಾಗ ಬೆನ್ನು ಹಿಡಿದುಕೊಳ್ಳೋದು ಕಂಡು ಬರುತ್ತದೆ. ಅದು ಫೇಕ್ ಅಲ್ಲ, ಹತ್ತಿರದಿಂದ ನೋಡಿದ್ರೆ ಗೊತ್ತಾಗುತ್ತೆ, ಅವರಿಗೆ ನಿಜಕ್ಕೂ ಬೆನ್ನು ನೋವು ಇದೆ’ ಎಂದು ಅವರು ಹೇಳಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







