ಚಿತ್ರದುರ್ಗ: ನಾವು ಹಿಂದೂಗಳ ಭಾಗ ಎಂದು ಹೇಳುವ ಪಂಚ ಪೀಠದವರು ಭಕ್ತರಿಗೆ ಜಾತಿ ಗಣತಿಯ ಧರ್ಮದ ಕಾಲಂನಲ್ಲಿ ವೀರಶೈವ ಲಿಂಗಾಯತ ಧರ್ಮ ಎಂದು ಬರೆಸಲು ಹೇಳುವ ಮೂಲಕ ಸಾಕಷ್ಟು ಗೊಂದಲ ಸೃಷ್ಠಿ ಮಾಡುತ್ತಿದ್ದಾರೆ ಎಂದು ಪಂಚಮಸಾಲಿ ಪೀಠದ ವಚನಾನಂದ ಶ್ರೀ ಕಿಡಿಕಾರಿದ್ದಾರೆ.ಚಿತ್ರದುರ್ಗದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಪೀಠದವರು ಎಲ್ಲರನ್ನು ಒಂದೇ ರೀತಿಯಲ್ಲಿ ನೋಡಬೇಕು ಆದರೆ ಇಲ್ಲಿ ಮಠಾಧೀಶರಿಗೆ ಒಂದು ಪಥ ಭಕ್ತರಿಗೊಂದು ಪಥವನ್ನು ಮಾಡಿದ್ದಾರೆ. ಮಾನ್ಯತೆ ಸಿಕ್ಕರೆ ಅಧಿಕೃತವಾಗಿ ಧರ್ಮ ಬರೆಸೋಣ, ಇತರೆ ಬರೆಸಿ ತೃತೀಯ ಲಿಂಗಿಗಳಾಗುವುದು ಬೇಡ ಎಂದು ವ್ಯಂಗ್ಯವಾಡಿದರು.ವೀರಶೈವ ಮಹಾಸಭಾ ಗೊಂದಲದಲ್ಲಿದ್ದು, ಜಾತಿ ಮತ್ತು ಧರ್ಮ ವೀರಶೈವ ಲಿಂಗಾಯತ ಎಂದು ಬರೆಸಲು ಹೇಳಿ ಜನರಲ್ಲು ಗೊಂದಲ ಸೃಷ್ಟಿಸುತ್ತಿದೆ. ಲಿಂಗಾಯತ ಧರ್ಮ ಚಳುವಳಿ ಮಾಡುವವರು ಕೇಂದ್ರ ಸರ್ಕಾರದ ಬಳಿ ಹೋಗಿ ಕೇಳಿಲ್ಲ. ಲಿಂಗಾಯತರಲ್ಲಿ ಬಹುತೇಕರು ಲಿಂಗ ಪೂಜೆಯನ್ನು ಬಿಟ್ಟಿದ್ದಾರೆ. ಅನೇಕರು ಮಾಂಸಹಾರ ಸೇವನೆ ಮಾಡುತ್ತಿದ್ದಾರೆ. ಅಂತಹವರಿಗೆ ನಾವು ಲಿಂಗಪೂಜೆ, ಅಹಿಂಸಾ ತತ್ವ ಪಾಲನೆ ಮಾಡಲು ಹೇಳಿಕೊಡಬೇಕಿದೆ ಎಂದರು.ಬಸವ ಐಡಿಯಾಲಜಿ ಜತೆ ಎಡಪಂಥೀಯ, ಕಮುನಿಷ್ಟ ತತ್ವ ಮಿಶ್ರಣ ಮಾಡಿದ್ದು, ಕೊರಳಲ್ಲಿ ಲಿಂಗವಿಲ್ಲದವರು ನಮಗೆ ತತ್ವ ಹೇಳಲು ಬಂದಿದ್ದಾರೆ. ಬಸವಣ್ಣನ ಹೆಸರಿನಲಿ ನಿಮಗೆ ತಿಳಿದಂತೆ ಹೇಳಬೇಡಿ ಎಂದು ತಿಳಿ ಹೇಳಿದರು.
ಕಳೆದ ಸಮೀಕ್ಷೆಯಲ್ಲಿ ಲಿಂಗಾಯತರ ಸಂಖ್ಯೆ ಕಡಿಮೆ ತೋರಿಸಿದ್ದರು. ಅದೇ ರೀತಿ ಈಗಲೂ ಹಿಂದುಳಿದ ಆಯೋಗದಿಂದ ಹಲವು ಜಾತಿಗಳ ಹೆಸರು ತಪ್ಪಾಗಿ ನೀಡಿ ಮತ್ತೇ ಗೊಂದಲ ಉಂಟು ಮಾಡಿದ್ದಾರೆ ಎಂದು ಹೇಳಿದ ಅವರು, ನಾಳೆ ಬೆಂಗಳೂರಿನಲ್ಲಿ 3 ಪಂಚಮಸಾಲಿ ಪೀಠದ ಶ್ರೀಗಳ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಜಾತಿ ಗಣತಿಯಲ್ಲಿ ಏನು ಬರೆಸಬೇಕೆಂಬ ಬಗ್ಗೆ ತೀರ್ಮಾನ ಮಾಡಲಾಗುವುದು. ಅಂತೇಯೆ ಧರ್ಮದ ಕಾಲಂನಲ್ಲಿ ಹಿಂದೂ ಎಂದೇ ಬರೆಸಬೇಕು ಎಂದು ಕರೆ ನೀಡಿದರು.ಬಸವ ಸಂಸ್ಕೃತಿ ಅಭಿಯಾನದಲ್ಲಿ ಬಸವಾದಿ ಶರಣರ ತತ್ವ ಹೇಳಲಿ, ಹಿಂದೂಗಳನ್ನು ಬೈಯುವುದು, ಗಣೇಶೋತ್ಸವ ಬೈಯುವುದು ಬೇಡ. ಚಿತ್ರದುರ್ಗದ ಹಿಂದೂ ಮಹಾಗಣಪತಿ ಉತ್ಸವ ನಾಡಿನ ಗಮನ ಸೆಳೆದಿದೆ. ಭಕ್ತಿ, ಶ್ರದ್ಧೆ, ಅನೇಕತೆಯಲ್ಲಿ ಏಕತೆಗೆ ಸಾಕ್ಷಿಯಾಗಿದೆ ಎಂದು ಹೇಳಿದ ಅವರು, ಹಿಂದೂ ಧರ್ಮದಲ್ಲಿ ನಮಗೆ ಎಲ್ಲವೂ ಸಿಗುತ್ತಿದೆ. ಆದರೂ ಹಿಂದೂಗಳ ವಿರುದ್ಧವೇ ಮಾತನಾಡುತ್ತ ಪ್ರತ್ಯೇಕ ಧರ್ಮ ಕೇಳುವುದು ಎಷ್ಟು ಸರಿ. ಈ ರೀತಿ ಮಾಡಿದರೆ ಲಿಂಗಾಯತ ಧರ್ಮದ ಮಾನ್ಯತೆ ಕೊಡುವವರು ಯಾರು ? ಇದು ಹಿಂದೂಗಳನ್ನು ಒಡೆಯುವ ಷಡ್ಯಂತ್ರವಾಗಿದೆ ಎಂದು ಹೇಳಿದರು.ಹುಬ್ಬಳ್ಳಿಯಲ್ಲಿ ಇಂದು ನಡೆಯುತ್ತಿರುವುದು ಏಕತಾ ಸಮಾವೇಶ ಅಲ್ಲ. ಅದನ್ನು ಬೇಡ ಜಂಗಮರ ಸಮಾವೇಶ ಎಂದು ಕರೆಯುತ್ತೇವೆ. ನಾವು, ಸಿರಿಗೆರೆ ಶ್ರೀಗಳು ಸೇರಿದಂತೆ ಬೇರೆ ಸಮಾಜದ ಶ್ರೀಗಳು ಸಹ ಅಲ್ಲಿಗೆ ಹೋಗುತ್ತಿಲ್ಲ ಎಂದು ತಿಳಿಸಿದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







