ಚಿತ್ರದುರ್ಗ:ಹಿರಿಯೂರು ತಾಲ್ಲೂಕು ಕಛೇರಿ ಆವರಣದಲ್ಲಿ ಸೆ.17 ರಂದು ಪಹಣಿ ತಿದ್ದುಪಡಿ ಅಭಿಯಾನದ ಅಂಗವಾಗಿ ಅ ಮತ್ತು ಬ ಖರಾಬು, ಬಿನ್/ಕೋಂ, ಹಿಸ್ಸಾ, ಪಹಣಿ ಕಾಲಂ 3 ಮತ್ತು 9 ವ್ಯತ್ಯಾಸ (ವಿಸ್ತೀರ್ಣ), ಎಂ.ಆರ್. ಸೇರಿದಂತೆ ಇತರೆ ಪಹಣಿ ತಿದ್ದು ಪಡಿಗಳ ಕಾರ್ಯ ಉಪವಿಭಾಗಾಧಿಕಾರಿ ಮಹಿಬೂಬ್ ಜಿಲಾನಿ ಖುರೇಷಿ ಅವರ ಸಮ್ಮುಖದಲ್ಲಿ ಜರುಗಿತು.ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೆ.01 ರಿಂದ 15 ದಿನಗಳ ಕಾಲ ಪಹಣಿಯಲ್ಲಿರುವ ಸಣ್ಣಪುಟ್ಟ ತಿದ್ದುಪಡಿ ಕೈಗೊಳ್ಳಲು ಅಭಿಯಾನ ಹಮ್ಮಿಕೊಳ್ಳುವಂತೆ ನಿರ್ದೇಶನ ನೀಡಿರುತ್ತಾರೆ. ಈ ಹಿನ್ನಲೆಯಲ್ಲಿ ಸೆ.17 ರಂದು ಹಿರಿಯೂರು ತಾಲ್ಲೂಕಿಗೆ ಸಂಬಂಧಿಸಿದಂತೆ ಒಟ್ಟು 250 ಪಹಣಿ ತಿದ್ದುಪಡಿ ಪ್ರಕರಣಗಳನ್ನು ಸರಿಪಡಿಸಿ ಅನುಮೋದಿಸಲಾಗಿದೆ.ಈ ಸಂಧರ್ಭದಲ್ಲಿ ತಹಶೀಲ್ದಾರ್ ಎಂ.ಸಿದ್ದೇಶ್, ಭೂ ದಾಖಲೆಗಳ ಸಹಾಯಕ ನಿರ್ದೇಶಕ ಲಕ್ಷ್ಮೀನರಸಿಂಹಯ್ಯ ಸೇರಿದಂತೆ ತಾಲ್ಲೂಕಿನ ರೈತರು ಹಾಜರಿದ್ದು ವಿಶೇಷ ಪಹಣಿ ತಿದ್ದುಪಡಿ ಅಭಿಯಾನದ ಪ್ರಯೋಜನ ಪಡೆದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







