ಬೆಂಗಳೂರು: ಐವಿಎಫ್ ಮೂಲಕ ಮಗು ಪಡೆದುಕೊಂಡಿರುವ ಸ್ಯಾಂಡಲ್ ವುಡ್ ನ ನಟಿ ಭಾವನಾ ರಾಮಣ್ಣ ಮೊದಲ ಬಾರಿಗೆ ತನ್ನ ಮಗುವಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.ಈ ಕುರಿತು ಇನ್ಸಾಟಾಗ್ರಾಮ್ ನಲ್ಲಿ ಬರೆದುಕೊಂಡಿರುವ ಅವರು, ದೊಡ್ಡ ಮನೆ, ಪುಟ್ಟ ಕುಟುಂಬ. ನಾನು ಮತ್ತು ನನ್ನ ತಂದೆ, ಬೆಳದ್ದೆ ಎದ್ದು ಮನೆಯಂಗಳದಲ್ಲಿ ಕಾಫಿ ಹೀರುತ್ತಾ ಕೂತರೆ, ಇಲ್ಲಿ ಹಕ್ಕಿಗಳದ್ದೇ ನಾದ ನಿನಾದ… ಕು ಕು ಮೈನಾ, ಕಿಚಿ ಪಿಚಿ ಗುಬ್ಬಚ್ಚಿ, ನಿತ್ಯವೂ ಬರೀ ಹಕ್ಕಿಗಳದ್ದೇ ಕಲರವ. ಹಕ್ಕಿ ಪಿಕ್ಕಿಗಳ ಹಾಡು ಪಾಡು ಕೇಳುತ್ತಿದ್ದ ಮನೆಯಲ್ಲೀಗ ಹೊಸದೊಂದು ಪುಟ್ಟ ಹಕ್ಕಿಯ ಸರಿಗಮ ಎಂದಿದ್ದಾರೆ.ಮನೆಯ ಗೂಡಲ್ಲಿ ಚುಯ್ ಚುಯ್ ಸದ್ದು ಮಾಡುತ್ತಿರುವ ಈ ಪುಟ್ಟ ಹಕ್ಕಿಗೆ ಏನೆಂದು ಹೆಸರಿಡುವುದು..? ನಮ್ಮನ್ನು ನಯವಾಗಿ ಬಂಧಿಸಿದ ಸುಂದರ ಬಲೆ, ಇದು ಹೊಸ ಪ್ರೀತಿಯ ಅಲೆ ತಂದುಕೊಟ್ಟಿದೆ. ಈ ವಿನೂತನ ವಿಸ್ಮಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ ಎಂದಿದ್ದಾರೆ.ಐವಿಎಫ್ ತಂತ್ರಜ್ಞಾನದ ಮೂಲಕ ಅವಳಿ ಮಕ್ಕಳಿಗೆ ತಾಯಿಯಾಗುತ್ತಿರುವ ಬಗ್ಗೆ ಮಾಹಿತಿ ಹಂಚಿಕೊಂಡು ಸೀಮಂತ ಶಾಸ್ತ್ರ ಕೂಡಾ ಮಾಡಿಸಿಕೊಂಡಿದ್ದರು. ಆದರೆ ಹೆರಿಗೆ ವೇಳೆ ಒಂದು ಮಗು ಮೃತಪಟ್ಟಿದೆ ಎಂದು ಸುದ್ದಿಯಾಗಿತ್ತು. ಆದರೆ, ಈ ಬಗ್ಗೆ ಭಾವನಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







