ಜಾತಿ ಸಮೀಕ್ಷೆ ಕಾರ್ಯ ಪಾರದರ್ಶಕವಾಗಿ ನಡೆಯಲಿ ಹೆಚ್.ಆಂಜನೇಯ
ಚಿತ್ರದುರ್ಗ: ಹಿಂದುಳಿದ ವರ್ಗಗಳ ಆಯೋಗ ಕೈಗೊಂಡಿರುವ ಜಾತಿಗಣತಿ ಸಮೀಕ್ಷೆ ಕಾರ್ಯದಲ್ಲಿ ಪರಿಶಿಷ್ಟರಿಗೆ ಸೀಮಿತಗೊಳಿಸಿ ಕ್ರಿಶ್ಚಿಯನ್ ಪದಜೋಡಿಸಿರುವುದು ಅತ್ಯಂತ ಅಪಾಯಕಾರಿ ನಡೆಯಾಗಿದೆ ಎಂದು ಮಾಜಿ ಸಚಿವ ಹೆಚ್.ಆಂಜನೇಯ ಅಸಮಾಧಾನ ವ್ಯಕ್ತಪಡಿಸಿದರು.ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಂದುಳಿದ, ಮೇಲ್ವರ್ಗದ ಆಕ್ಷೇಪಗಳಿಗೆ ಮನ್ನಣೆನೀಡಿ ಅವರ ಜಾತಿ ಜೊತೆಗೆ ಕ್ರಿಶ್ಚಿಯನ್ ಪದ ಕೈಬಿಡಲಾಗಿದೆ. ಆದರೆ, ಪರಿಶಿಷ್ಟ ಜಾತಿ ವಿಷಯದಲ್ಲಿ ನಿರ್ಲಕ್ಷ್ಯ ವಹಿಸುವುದು ಅಕ್ಷಮ್ಯಅಪರಾಧ ಎಂದು ಆಕ್ರೋಶ ವ್ಯಕ್ತಪಡಿಸಿದರು.ಎಸ್ಸಿ ಜನರು ಎಲ್ಲ ರೀತಿಯಿಂದಲೂ ನಿರ್ಲಕ್ಷ್ಯಕ್ಕೆ ಒಳಗಾಗಿರುವ ವರ್ಗ. ಈ ಗುಂಪಿಗೆನ್ಯಾಯಯುತವಾಗಿ ಎಲ್ಲ ಹಕ್ಕುಗಳು, ಸೌಲಭ್ಯಗಳನ್ನು ನೀಡಲು ಸಮೀಕ್ಷೆ ಕಾರ್ಯಪಾರದರ್ಶಕವಾಗಿ ನಡೆಯಬೇಕು. ಈ ಕಾರಣಕ್ಕೆ ನ್ಯಾ.ನಾಗಮೋಹನ್ ದಾಸ್ ಆಯೋಗ ನಡೆಸಿದ ಗಣತಿಯಲ್ಲಿ ಧರ್ಮದ ಕಾಲಂಇರಲಿಲ್ಲ. ಆದರೆ, ಈಗ ಧರ್ಮದ ಕಲಂ ಸೇರಿಸಿರುವುದೇ ತಪ್ಪು. ಮೀಸಲಾತಿ ಜಾತಿ ಆಧಾರಿತವಾಗಿದ್ದು, ಧರ್ಮ ಕೇಳುವ ಅಗತ್ಯವೇ ಇರಲಿಲ್ಲ ಎಂದರು.ಒಂದೆಡೆ ಹಿಂದೂ ಎಂದು ಬರೆಸುವಂತೆ ಬಿಜೆಪಿ ಬೊಬ್ಬೆ ಹಾಕುತ್ತಿದೆ. ಈ ಮಧ್ಯೆ ಆಯೋಗ ಮಾದಿಗ ಕ್ರಿಶ್ಚಿಯನ್, ಛಲವಾದಿ ಕ್ರಿಶ್ಚಿಯನ್ಹೀಗೆ ಪರಿಶಿಷ್ಟ ಜಾತಿಗಳನ್ನುಗುರುತಿಸುವ ಕೆಲಸ ಮಾಡುತ್ತಿದೆ. ಇದು ಎಸ್ಸಿಗಳ ಜನಸಂಖ್ಯೆ ಕುಗ್ಗಿಸುವ ಕೆಲಸ ಆಗಲಿದೆ. ಒಂದೊಮ್ಮೆ ಯಾವುದೇಜಾತಿಯವರುಮತಾಂತರಗೊಂಡಿದ್ದರೇ ಅವರು ಆ ಧರ್ಮವನ್ನೇ ಬರೆಸುತ್ತಾರೆ. ಇಂತಹ ಸಂದರ್ಭ ಅನಗತ್ಯವಾಗಿ ಗೊಂದಲ ಉಂಟು ಮಾಡುವಕೆಲಸ ಆಯೋಗ ಮಾಡುತ್ತಿದೆ ಎಂದು ಆರೋಪಿಸಿದರು.ಈ ಕೂಡಲೇ ಪರಿಶಿಷ್ಟ ಜಾತಿ ಜೊತೆಗೆ ಕ್ರಿಶ್ಚಿಯನ್ ಪದ ತೆಗೆದು ಸಮೀಕ್ಷೆ ಕಾರ್ಯ ಆರಂಭಿಸಬೇಕು. ಇಲ್ಲದಿದ್ದರೇ ಆಯೋಗದ ವಿರುದ್ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಮಾದಿಗ, ಛಲವಾದಿಗಳು ಅಸ್ಪೃಶ್ಯದ ಸಂಕೋಲೆಯಿಂದ ತಪ್ಪಿಸಿಕೊಳ್ಳಲು ಚರ್ಚ್ಗೆ ಹೋಗಿ ಪ್ರಾರ್ಥನೆ ಮಾಡುವುದು, ಕ್ರಿಶ್ಚಿಯನ್ಧರ್ಮ ಆಚರಣೆ ಮಾಡುತ್ತಾರೆ. ಆದರೆ, ಅವರ್ಯಾರೂ ತಮ್ಮ ಮೂಲ ಜಾತಿಯಿಂದ ಹೊರಹೋಗಿರುವುದಿಲ್ಲ. ಅಂತವರನ್ನುಮೀಸಲಾತಿಯಿಂದಲೇ ಹೊರಗಿಡುವ ಕೆಲಸ ಆಯೋಗ ಮಾಡುತ್ತಿರುವುದು ಸರಿಯಲ್ಲ. ಅಸ್ಪೃಶ್ಯ ನೋವು ಅರಿತುಕೊಳ್ಳಬೇಕು.ಒಂದೊಮ್ಮೆ ಮತಾಂತರ ಆಗಿದ್ದರೇ ಅವರು ಕ್ರಿಶ್ಚಿಯನ್ ಎಂದೇ ಬರೆಸುತ್ತಾರೆ ಎಂದರು.ಈಗಲೂ ಮಾದಿಗರು ಬೆತ್ತಲೆ, ಬಸವಿ, ದೇವದಾಸಿ, ಉರುಳುಸೇವೆ ಅಂತಹ ಅನಿಷ್ಠ ಮೌಢ್ಯಆಚರಿಸುತ್ತಿದ್ದಾರೆ. ಇನ್ನೂ ಜಾತ್ರೆಗಳಹೆಸರಲ್ಲಿ ಪ್ರಾಣಿ ಬಲಿ ನೀಡಿ ಮಧ್ಯ-ಮಾಂಸ ಉಂಡು ಸಾಲದ ಸುಳಿಗೆ ಸಿಲುಕುತ್ತಿದ್ದಾರೆ. ಇಂತಹ ಜನರಲ್ಲಿ ಜಾಗೃತಿ ಮೂಡಿಸುವ ರೀತಿಆಯೋಗ ಕಾರ್ಯ ನಿರ್ವಹಿಸಬೇಕು. ಅವರನ್ನು ದಾರಿತಪ್ಪಿಸುವ ರೀತಿ ಮಾಡಬಾರದು ಎಂದು ತಿಳಿಸಿದರು.ಒಳಮೀಸಲಾತಿ ಸಂಬಂಧ ಈಚೆಗೆ ಪರಿಶಿಷ್ಟರಿಗೆ ಸೀಮಿತಗೊಳಿಸಿ ಸಮೀಕ್ಷೆ ನಡೆಸಿ, ಕೆಲವೇ ತಿಂಗಳು ಆಗಿವೆ. ಮೂರೇ ತಿಂಗಳಲ್ಲಿಜನಸಂಖ್ಯೆ ಏರುಪೇರು ಆಗಿರುವುದಿಲ್ಲ. ಈ ಕಾರಣಕ್ಕೆ ಎಸ್ಸಿಗಳನ್ನು ಹೊರಗಿಟ್ಟು ಸಮೀಕ್ಷೆ ನಡೆಸಿದ್ದರೇ ಸಿಬ್ಬಂದಿಗೆ ಕೆಲಸ, ಸರ್ಕಾರದಬೊಕ್ಕಸಕ್ಕೆ ಹೊರೆ ಕಡಿಮೆ ಆಗುತ್ತಿತ್ತು. ಆಯೋಗದಲ್ಲಿರುವವರು ಸ್ವಲ್ಪ ಜ್ಞಾನ ಬಳಕೆ ಮಾಡಬೇಕಾಗಿತ್ತು. ನ್ಯಾ.ನಾಗಮೋಹನ್ ದಾಸ್ಆಯೋಗ ವರದಿ ಕೊಡುವುದಕ್ಕಿಂತಲೂ ಮುಂಚೆ ಎಲ್ಲವೂ ಸರಿಯಿದೆ ಎನ್ನುತ್ತಿದ್ದವರು ಈಗ ತಕರಾರು ತೆಗೆದು ಕೋರ್ಟ್ ಮೊರೆಹೋಗುವ ಕೆಲಸ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.ಒಳಮೀಸಲಾತಿ ಹಂಚಿಕೆ ಜನಸಂಖ್ಯೆಗಿಂತಲೂ ಹಿಂದುಳಿಯುವಿಕೆ ಆಧಾರದಡಿ ನೀಡಲಾಗಿದೆ. ಛಲವಾದಿ ಸಮಾನಂತರಜಾತಿಯವರನ್ನು ಅವರ ನಿಕೃಷ್ಠ ಬದುಕಿನ ಕಾರಣಕ್ಕೆ ಮಾದಿಗ ಗುಂಪಿಗೆ ಸೇರಿಸಿದ್ದರು. ಇದನ್ನು ತಪ್ಪು ಅರ್ಥ ಮಾಡಿಕೊಂಡು ಗೊಂದಲದಹೇಳಿಕೆಗಳನ್ನು ನೀಡಲಾಯಿತು. ಪರಿಶಿಷ್ಟ ಜಾತಿಯ ಸಚಿವರೆಲ್ಲರೂ ಒಮ್ಮತದ ಚರ್ಚೆ ಬಳಿಕ ಒಳಮೀಸಲಾತಿ ಜಾರಿಗೊಂಡಿದ್ದು,ಮಾದಿಗರಿಗೆ ಶೇ.7 ಮೀಸಲಾತಿ ಸಿಗಬೇಕಿತ್ತು. ಆದರೂ ಏನೂ ಇಲ್ಲದ ನಮಗೆ ಶೇ.6 ಮೀಸಲಾತಿ ನೀಡಿರುವುದನ್ನೇಒಪ್ಪಿಕೊಂಡಿದ್ದೇವೆ. ಆದರೆ, ನಮಗಿಂತಲೂ ಆರ್ಥಿಕ, ಶೈಕ್ಷಣಿ, ಔದ್ಯೋಗಿಕವಾಗಿ ಹೆಚ್ಚು ಲಾಭ ಪಡೆದವರೇ ಈಗ ಅನಗತ್ಯವಾಗಿಹೇಳಿಕೆ ನೀಡುವ ಕೆಲಸ ಮಾಡುತ್ತಿದ್ದಾರೆ ಎಂದರು.ಸಾಹಿತಿ ದೇವನೂರು ಮಹಾದೇವ್ ಅಂತಹ ಹಿರಿಯರೇ ನಾಗಮೋಹನ್ ದಾಸ್ ಆಯೋಗದ ವರದಿ ವೈಜ್ಞಾನಿಕವಾಗಿದೆ ಎಂದುಹೇಳಿದ್ದರೂ, ಅಂಬೇಡ್ಕರ್ ವಾರಸುದಾರರಂತೆ ವರ್ತಿಸುವವರೇ ಸಂವಿಧಾನದ ಆಶಯದ ವಿರುದ್ಧ ಹೇಳಿಕೆ ನೀಡುತ್ತಿರುವುದುಸರಿಯಲ್ಲ. ನಾವೆಲ್ಲರೂ ಸಹೋದರರ ರೀತಿ ಬದುಕಬೇಕು. ಅಲೆಮಾರಿಗಳ ಬದುಕು ಉತ್ತಮಪಡಿಸಲು ಸರ್ಕಾರದ ಮೇಲೆ ಒತ್ತಡ ತರಬೇಕಿದೆ ಎಂದರು. 5 ಲಕ್ಷ ಜನರು ಆದಿಕನಾಟಕ, ಆದಿದ್ರಾವಿಡ, ಆದಿಆಂಧ್ರ ಎಂದು ಬರೆಯಿಸಿದ್ದೂ, ಅವರೆಲ್ಲರೂ ಮೀಸಲಾತಿಪಡೆಯಲು ತಮ್ಮ ಮೂಲ ಜಾತಿಯಲ್ಲಿ ಗುರುತಿಸಿಕೊಳ್ಳಬೇಕು. ಇಲ್ಲದಿದ್ದರೇ ಚಿಪ್ಪೇ ಗತಿ ಎಂದು ಆಂಜನೇಯ ಎಚ್ಚರಿಸಿದರು.ಈಗ ಜಾತಿಗಣತಿ ವೇಳೆಯಾದರೂ ಮೂಲ ಜಾತಿ ಬರೆಯಿಸಿ, ಒಳಮೀಸಲಾತಿ ಸೌಲಭ್ಯ ಪಡೆಯಬೇಕು. ಹಟ್ಟಿ, ಕಾಲೋನಿ, ನಗರ ಪ್ರದೇಶದಲ್ಲಿ ಇನ್ನಷ್ಟು ಅಭಿಯಾನ, ಜಾಗೃತಿ ನಡೆಸಿ ಜಾತಿ ಮಾದಿಗ, ಧರ್ಮ ಹಿಂದೂ ಎಂದೇ ಬರೆಯಿಸುವಂತೆಮಾಡಬೇಕು. ಈ ಮೂಲಕ ನಮ್ಮ ಜನಸಂಖ್ಯೆ ಕುಗ್ಗಿಸುವ ಷಡ್ಯಂತರಕ್ಕೆ ತಕ್ಕ ಉತ್ತರನೀಡಬೇಕೆಂದರು.ಪತ್ರಿಕಾಗೋಷ್ಠಿಯಲ್ಲಿ ವಕೀಲ ರವೀಂದ್ರ, ಜಿಪಂ ಮಾಜಿ ಸದಸ್ಯ ಆರ್.ನರಸಿಂಹರಾಜು ಇತರರಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







