ಚಿತ್ರದುರ್ಗ: ರಾಜ್ಯ ಸರ್ಕಾರ ನಿನ್ನೆಯಿಂದ ಪ್ರಾರಂಭ ಮಾಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿಯಲ್ಲಿ ನಮ್ಮ ಸಮುದಾಯದವರು ಜಾತಿ
ಕಾಲಂನಲ್ಲಿ ಸವಿತಾ ಎಂದು ನಮೂದಿಸಿ, ಧರ್ಮದ ಕಾಲಂನಲ್ಲಿ ಹಿಂದೂ ಎಂದು ನಮೂದಿಸುವಂತೆ ಸವಿತಾ ಸಮಾಜದಮುಖಂಡರಾದ ಎನ್.ಡಿ ಕುಮಾರ್ ತಿಳಿಸಿದ್ದಾರೆ.ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಮ್ಮ ಸಮುದಾಯದವರು ಕ್ಷೌರಿಕ, ಡೋಲು ಬಾರಿಸುವುದು ನಾಟಿ ವೈದ್ಯರಾಗಿ ಕೆಲಸವನ್ನು ಮಾಡುತ್ತಿದ್ದಾರೆ.ಸರ್ಕಾರ ಗಣತಿ ಮಾಡುತ್ತಿರುವ ಬಗ್ಗೆ ನಮ್ಮ ಸಮುದಾಯಕ್ಕೆ ಮಾಹಿತಿ ಇಲ್ಲ ಇದರ ಬಗ್ಗೆ ತಿಳಿಸುವಂತ ಕಾರ್ಯವನ್ನು ನಮ್ಮ ಸಮಾಜದ ವತಿಯಿಂದ ಮಾಡಲಾಗುತ್ತದೆ. ನಮ್ಮಲ್ಲಿ ನೆರೆ ರಾಜ್ಯ ಆಂಧ್ರದಿಂದಲೂ ಸಹ ಬಹಳಷ್ಟು ಜನ ವಲಸೆ ಬಂದಿದ್ದಾರೆ ಇದ್ದಲ್ಲದೆ ನಮ್ಮಲ್ಲಿಯೇ ಬಹಳಷ್ಟು ಜನ ಇದ್ದಾರೆ ಈ ಹಿನ್ನೆಲೆಯಲ್ಲಿ ಭಾಷೆಯ ಬಗ್ಗೆ ಬರೆಯುವಾಗ ಕನ್ನಡ ಅಥವಾ ತೆಲುಗ ಎಂದು ಬರೆಸುವಂತೆ ತಿಳಿಸಿದ್ದಾರೆ.ರಾಜ್ಯ ಸರ್ಕಾರ ಕುರುಬರನ್ನು ಹಾಗೂ ಯಾದವರನ್ನು ಎಸ್.ಟಿ.ಗೆ ಸೇರಿಸಲು ಮುಂದಾಗಿದೆ ಇದೇ ರೀತಿ ನಮ್ಮ ಸಮುದಾಯವನ್ನು ರಾಜ್ಯ ಸರ್ಕಾರ ಎಸ್ಸಿಗೆ ಸೇರಿಸುವಂತೆ ಆಗ್ರಹಿಸಿದ್ದು ಇದರ ಬಗ್ಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಸರ್ಕಾರವನ್ನು ಕುಮಾರ್ ಆಗ್ರಹಿಸಿದ್ದಾರೆ.ಸವಿತಾ ಸಮಾಜದ ರಾಜ್ಯ ಪ್ರತಿನಿಧಿಯಾದ ತಿಪ್ಪೇಸ್ವಾಮಿ ಸಂಪಿಗೆ ಮಾತನಾಡಿ, ನಮ್ಮ ಸಮುದಾಯದಲ್ಲಿ 27 ಉಪ ಪಂಗಡಗಳಿಇವೆ. ಇದನ್ನು ಬರೆಸುವ ಬದಲು ಎಲ್ಲರು ಸಹ ಸವಿತಾ ಎಂದು ಬರೆಯಿಸುವುದರ ಮೂಲಕ ನಮ್ಮ ಒಗ್ಗಟ್ಟನ್ನು ಪ್ರದರ್ಶನ ಮಾಡಬೇಕಿದೆ. ಇದರಿಂದ ಮುಂದಿನ ದಿನಮಾನದಲ್ಲಿ ಸರ್ಕಾರದ ವಿವಿಧ ರೀತಿಯ ಸೌಲಭ್ಯ ಹಾಗೂ ಮೀಸಲಾತಿಯನ್ನು ಪಡೆಯಲು ಅನುಕೂಲವಾಗುತ್ತದೆ ಎಂದಿದ್ದಾರೆ.ಗೋಷ್ಟಿಯಲ್ಲಿ ಕಾರ್ಯದರ್ಶಿ ಶ್ರೀನಿವಾಸ್, ಉಪಾಧ್ಯಕ್ಷರಾದ ಹನುಮಂತಪ್ಪ, ಗಾ,ನ ಲಿಂಗರಾಜು, ಹೊಳಲ್ಕೆರೆ ಅಧ್ಯಕ್ಷ ಗೀರೀಶ್,ಹಿರಿಯೂರು ಅಧ್ಯಕ್ಷ ಧನುಂಜಯ, ರಜತ್, ನಾಗರಾಜ್, ಘನಶ್ಯಾಂ, ದ್ಯಾಮಣ್ಣ ಸೇರಿದಂತೆ ಇತರರು ಭಾಗವಹಿಸಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







