ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಭಾನುವಾರ ಮುರುಘಾ ಮಠದ ಅನುಭವ ಮಂಟಪದಲ್ಲಿ ಆಯೋಜಿಸಿದ್ದ ವಚನ ಝೇಂಕಾರ ಕಾರ್ಯಕ್ರಮದಲ್ಲಿ ತೋಟಪ್ಪ ಉತ್ತಂಗಿ ಅವರ ಗಾನಸುಧೆಯಲ್ಲಿ ಏಕಕಾಲಕ್ಕೆ ಸುಮಾರು 500ಕ್ಕೂ ಹೆಚ್ಚು ಬಸವಭಕ್ತರಿಂದ ವಚನ ಝೇಂಕಾರ ನಡೆಯಿತು.12ನೇ ಶತಮಾನದ ವಚನಕಾರರ ವಚನಗಳನ್ನು ಒಮ್ಮೆಲೇ ಸ್ವರ್ಗವೇ ಕೆಳಗಿಳಿದಂತೆ ಭಕ್ತಿ ಪೂರ್ವಕವಾಗಿ ಹಾಡಿದರು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು, ಸಾವಿರಾರು ಮಹಿಳೆಯರು, ಸಾಹಿತಿಗಳು, ವಾಣಿಜ್ಯೋದ್ಯಮಿಗಳು, ವಿದ್ಯಾರ್ಥಿಗಳು, ವಿವಿಧ ಶಾಲಾ ಕಾಲೇಜುಗಳ ಸಿಬ್ಬಂದಿ ವರ್ಗದವರು,
ಹರಗುರು ಚರಮೂರ್ತಿಗಳು ಭಾಗವಹಿಸಿ ಈ ವಚನ ಝೇಂಕಾರ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.ಕಾರ್ಯಕ್ರಮದಲ್ಲಿ ಚಿತ್ರದುರ್ಗದ ಶಿವಶರಣ ಮಾದಾರ ಚೆನ್ನಯ್ಯಗುರು ಪೀಠದ ಶ್ರೀ ಬಸವಮೂರ್ತಿ ಮಾದರಚೆನ್ನಯ್ಯ ಸ್ವಾಮಿಗಳು ಪ್ರಸ್ತಾವಿಕ ನುಡಿಗಳಾಡುತ್ತಾ, ಹಿಮಾಲಯ ಪರ್ವತ ಇಲ್ಲದ ಭಾರತ ಕಲ್ಪನೆ ಮಾಡಿಕೊಳ್ಳಲು ಹೇಗೆ ಸಾಧ್ಯವಿಲ್ಲವೋ, ಹಾಗೆ ಬಸವ ಸಂಸ್ಕೃತಿ ಇಲ್ಲದ ಭಾರತವನ್ನು ಕಲ್ಪಿಸಿಕೊಳ್ಳುವುದು ಅಸಾದ್ಯ ಅನಿಸುತ್ತದೆ. ಇಂದು ನೂರಾರು ಸ್ವಾಮೀಜಿಗಳು ಇಲ್ಲಿ ಭಾಗವಹಿಸಿದ್ದಾರೆ. ಕರ್ನಾಟಕ ಸರ್ಕಾರ ಬಸವಣ್ಣನವರಿಗೆ ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಕರೆದಿರುವುದು ಅತ್ಯಂತ
ಸಂತಸದ ವಿಷಯವಾಗಿದೆ.ಚಿತ್ರದುರ್ಗದಲ್ಲಿ ಬಸವಣ್ಣನವರಿಗೆ ಸಿಕ್ಕ ಗೌರವ ಅತ್ಯಂತ ದೊಡ್ಡದು. ಜಗತ್ತಿನಲ್ಲಿ ಬಹಳಷ್ಟು ಜನ ಸಂಶೋಧಕರು, ದಾರ್ಶನಿಕರು ಇದ್ದಾರೆ. ಕೆಲವೊಂದು ಆವಿಷ್ಕಾರಗಳು ಆಯಾ ಕಾಲಘಟ್ಟಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಆದರೆ ಬಸವಣ್ಣನವರ ತತ್ವ ಸಿದ್ಧಾಂತ ಏನೆಂದೆಂದಿಗೂ ಪ್ರಸ್ತುತ ಬಸವಧರ್ಮ ಮತ್ತೊಮ್ಮೆ ಮೇಲೆದ್ದು ಬರುತ್ತಿದೆ. ಕೇವಲ ಅದರ ವಿಜೃಂಭಣೆ ಮಾಡಿದರೆ ಸಾಲದು, ಬಸವಣ್ಣನವರ ತತ್ವ ಸಿದ್ಧಾಂತಗಳು ಎಲ್ಲರ ಮನೆ ಮನಗಳಲ್ಲಿ ಬೆಳೆಸಬೇಕು. ಮುಂದಿನ ದಿನಗಳಲ್ಲಿ ಬಸವಣ್ಣನ ಅನುಯಾಯಿಗಳು ಏನು ಎಂಬುದನ್ನು ಜನರಿಗೆ ತಿಳಿಸಬೇಕಾಗಿದೆ. ಕರ್ನಾಟಕದಲ್ಲಿ ಶೂನ್ಯ ಪೀಠದ ಪರಂಪರೆ ಮುರುಘಾ ಮಠಕ್ಕೆ ಮಾತ್ರ ಇದೆ. ಈ ಪೀಠದಲ್ಲಿ ಬಂದ ಅನೇಕ ಸ್ವಾಮೀಜಿಗಳು ವಿದ್ಯೆ, ಅನ್ನ, ವಸತಿ ದಾಸೋಹಕ್ಕೆ ಪ್ರಾಶಸ್ತ್ಯ ನೀಡಿದವರಾಗಿದ್ದಾರೆ. ಸಾವಿರಾರು ನಾಯಕರನ್ನು ಉದ್ಧಾರ ಮಾಡಿದ್ದು ಶ್ರೀ ಮುರುಘಾಮಠ ಎಂದು ನುಡಿದರು.
ಸಾಣೆಹಳ್ಳಿ ಶ್ರೀ ತರಳಬಾಳು ಬೃಹನ್ಮಠ ಶಾಖೆಯ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಒಬ್ಬ ವ್ಯಕ್ತಿ ಧರ್ಮದ ಮಾರ್ಗದಲ್ಲಿ ನಡೆಯಬೇಕಾದರೆ ಅವನು ದಯಾವಂತನಾಗಿರಬೇಕು. ಪ್ರೀತಿ, ಕರುಣೆ, ಅನುಕಂಪ ಇದ್ದರೆ ಮಾತ್ರ ಧೈರ್ಯವಂತ ಮನುಷ್ಯನಾಗಲು ಸಾಧ್ಯ. 12ನೇ
ಶತಮಾನದಲ್ಲಿ ಈ ಅಂಶಗಳು ಪ್ರಮುಖವಾಗಿದ್ದವು. ನಾವು ಪ್ರಾದೇಶಿಕವಾಗಿ ಹಿಂದುಗಳು, ಜೈನ, ಬೌದ್ಧ, ಕ್ರೈಸ್ತ ಮೊದಲಾದ ಧರ್ಮಗಳ ಇದ್ದ ಹಾಗೇ ಬಸವ ಧರ್ಮವೂ ಇದೆ. ಧಾರ್ಮಿಕ ವಿಚಾರವಾಗಿ ಬಂದರೆ ಬಸವನ್ಣನವರು ನಮಗೆ ಲಿಂಗಾಯತ ಧರ್ಮವನ್ನು ಕೊಟ್ಟವರು. ನಮ್ಮ ಕಲುಷಿತ ಭಾವನೆಗಳನ್ನು ದೂರ ತಳ್ಳಿ ತಲೆಎತ್ತಿ ನಾವು ಲಿಂಗವಂತರು,ಲಿಂಗಾಯಿತರು ಎಂದು ಹೇಳಬೇಕು. ಅದರ ಆಚರಣೆಯಲ್ಲಿ ಹಿಂದೆೆ ಇದ್ದೇವೆ. ಈ ಹಿಂದೆ ಅನೇಕ ಮಠಾಧೀಶರು,
ಬಸವಭಕ್ತರು, ಮಾನ್ಯ ಮುಖ್ಯಮಂತ್ರಿಗಳು ಎಲ್ಲರೂ ಒಟ್ಟಿಗೆ ಚರ್ಚೆ ಮಾಡಿ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿ ಇಲ್ಲಿಗೆ ಒಂದು ವರ್ಷವಾಯಿತು. ಅದಕ್ಕಾಗಿ ಲಿಂಗಾಯತ ಮಠಾಧೀಪತಿಗಳ ಒಕ್ಕೂಟ ಸೆಪ್ಟಂಬರ್ 1ರಂದು ಬಸವ ಸಂಸ್ಕೃತಿ ಅಭಿಯಾನ ಪ್ರಾರಂಭಿಸಿ ಅದು ಇಲ್ಲಿಯವರೆಗೆ ಬಂದು ಶ್ರೀ ಮಠದಲ್ಲಿ ನಿಂತಿದೆ. ಬಸವಸಂಸ್ಕೃತಿ ಅಭಿಯಾನವು ಬಸವನ ಬಾಗೇವಾಡಿಯಲ್ಲಿ ಪರಿಣಾಮಕಾರಿಯಾಗಿ ಆರಂಭವಾಗಿ ಇಂದು
ಚಿತ್ರದುರ್ಗ ಮುರುಘಾ ಮಠದಲ್ಲಿ ಅದರ ಎತ್ತರವನ್ನು ಕಂಡಿದೆ. ಬಸವಾದಿ ಶರಣರತತ್ವ ಸಿದ್ಧಾಂತಗಳನ್ನು ಜನಮನದಲ್ಲಿ ತುಂಬುವ ಕಾರ್ಯ ಮಾಡುವ ದೃಷ್ಟಿಯಿಂದ ಈ ಅಭಿಯಾನವನ್ನು ನಡೆಸಲಾಗುತ್ತಿದೆ. ಈ ಅಭಿಯಾನದ ಉದ್ದೇಶವೇನೆಂದರೆ, ನಾಡಿನ ಪ್ರಗತಿ ಮುಂತಾದ ವಿಚಾರಗಳಲ್ಲಿ ಮುಕ್ತವಾದ
ಪ್ರಶ್ನೆಗಳನ್ನು ಕೇಳಿ ಅವುಗಳಿಗೆ ಉತ್ತರವನ್ನು ಪಡೆಯುದಾಗಿದೆ. ನಮ್ಮ ಪಟ್ಟಾಭಿಷೇಕದ ಸಂದರ್ಭದಲ್ಲಿ ಸಿರಿಗೆರೆಯ ಶ್ರೀ. ಶಿವಕುಮಾರ ಮಹಾಸ್ವಾಮಿಗಳು ಹಾಗೂ ಶ್ರೀ. ಮಲ್ಲಿಕಾರ್ಜುನ ಮಹಾ ಸ್ವಾಮಿಗಳು ಒಂದಾದರು. ನಮ್ಮ ಅಭಿಯಾನದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ಮಾಡಲು ಇದೊಂದು ಅಪರೂಪದ ಅವಕಾಶ ಸಿಕ್ಕಂತಾಗಿದೆ. ಎಂದು ನುಡಿದರು. ಕಾರ್ಯಕ್ರಮದಲ್ಲಿ ಎಸ್.ಜೆ.ಎಂ ವಿದ್ಯಾಪೀಠ ಹಾಗೂ ಬೃಹನ್ಮಠದ ಅಧ್ಯಕ್ಷರಾದ ಶ್ರೀ. ಶಿವಯೋಗಿ ಸಿ. ಕಳಸದ, ಎಸ್.ಜೆ.ಎಂ ವಿದ್ಯಾಪೀಠ ಹಾಗೂ ಬೃಹನ್ಮಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ಎರೆಹೊಸಹಳ್ಳಿ ಶ್ರೀ.ಯೋಗಿ ವೇಮನ ಗುರುಪೀಠದ ಶ್ರೀ ಜಗದ್ಗುರು ವೇಮನಾನಂದ ಸ್ವಾಮಿಗಳು, ತಲಸಂಗದ ಶ್ರೀ. ಕುಂಬಾರ ಗುರುಪೀಠದ ಶ್ರೀ ಬಸವ ಕುಂಬಾರ ಗುಂಡಯ್ಯ ಸ್ವಾಮಿಗಳು, ದಾವಣಗೆರೆ ವಿರಕ್ತಮಠದ ಡಾ.ಬಸವ ಪ್ರಭುಸ್ವಾಮಿಗಳು, ಅಂಬಿಗರ ಚೌಡಯ್ಯ ಗುರುಪೀಠದ ಶ್ರೀ ಜಗದ್ಗುರು ಶಾಂತಭೀಷ್ಮ ಅಂಬಿಗರ
ಚೌಡಯ್ಯ ಮಹಾಸ್ವಾಮಿಗಳು, ಅಥಣಿಯ ಶ್ರೀ ಮೋಟಗಿ ಮಠದ ಶ್ರೀ ಪ್ರಭು ಚನ್ನಬಸವಸ್ವಾಮಿಗಳು, ಚಿತ್ರದುರ್ಗದ ಶ್ರೀ ಸದ್ಗುರು ಕಬೀರನಂದಾಶ್ರಮದ ಶ್ರೀ ಶಿವಲಿಂಗಾನಂದ ಮಹಾಸ್ವಾಮಿಗಳು, ಗದುಗಿನ ಶ್ರೀ ತೋಂಟದಾರ್ಯ ಮಠದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು, ಭಾಲ್ಕಿ ಹಿರೇಮಠ
ಸಂಸ್ಥಾನದ ಡಾ. ಬಸವಲಿಂಗ ಪಟ್ಟದೇವರು, ಚಿತ್ರದುರ್ಗದ ಛಲವಾದಿ ಗುರುಪೀಠದ ಶ್ರೀ ಬಸವನಾಗಿದೇವ ಶ್ರೀಗಳು, ಕೂಡಲಸಂಗಮದ ಗಂಗಾ ಮಾತಾಜಿ, ಹುಲಸೂರಿನ ಶಿವಾನಂದಸ್ವಾಮಿಗಳು ಕೂಡಲಸಂಗಮದ ರಾಜೇಶ್ವರಿ ಮಾತಾಜಿ, ಹರಿಹರದ ಹರಕ್ಷೇತ್ರದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಶ್ರೀ ಜಗದ್ಗುರು ವಚನಾನಂದ ಸ್ವಾಮಿಗಳು, ಭಾಲ್ಕಿ ಹಿರೇಮಠ ಸಂಸ್ಥಾನದ ಡಾ.ಬಸವಲಿಂಗ ಪಟ್ಟದೇವರು,
ಇಳಕಲ್ ಶ್ರೀ ವಿಜಯ ಮಹಾಂತೇಶ್ವರ ಮಠದ ಶ್ರೀ ಗುರುಮಹಾಂತ ಸ್ವಾಮಿಗಳು, ಹರಗುರು ಚರಮೂರ್ತಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮಿಗಳು ಸ್ವಾಗತಿಸಿದರು. ತೋಟಪ್ಪ
ಉತ್ತಂಗಿ ಬಳಗದಿಂದ ಬಸವ ಪ್ರಾರ್ಥನೆ ಸಲ್ಲಿಸಿದರು. ಶ್ರೀಮತಿ ಶೈಲಾಜ ಜಯಕುಮಾರ್ ನಿರೂಪಿಸಿ ವಂದನಾರ್ಪಣೆ ಸಲ್ಲಿಸಿದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







