ನನ್ನ ಅಮ್ಮನಿಗೊಂದು ಕನಸಿತ್ತು. ಉಡುಪಿ ಶ್ರೀಕೃಷ್ಣನ ದರ್ಶನ ಮಾಡಬೇಕು ಎಂಬುದು. ನಾನು ಮತ್ತು ಅಮ್ಮ ಉಡುಪಿಗೆ ಹೋದಾಗ ತನ್ನ ಕುಟುಂಬದಂತೆ ನೋಡಿಕೊಂಡು ನನ್ನ ಅಮ್ಮನ ಕನಸನ್ನು ನನಸು ಮಾಡಿದ್ದಾರೆ ರಿಷಬ್ ಶೆಟ್ಟಿ.ಹೀಗೆ ಹೇಳಿದ್ದು ಜೂ.ಎನ್ಟಿಆರ್. ಹೈದರಾಬಾದ್ನಲ್ಲಿ ನಡೆದ ‘ಕಾಂತಾರ ಚಾಪ್ಟರ್ 1’ ಪ್ರೀ ರಿಲೀಸ್ ಈವೆಂಟ್ನಲ್ಲಿ ಮಾತನಾಡಿದ ಅವರು, ‘ನಾನು ಚಿಕ್ಕಂದಿನಲ್ಲಿ ಕೇಳಿದ ಗುಳಿಗ, ಪಂಜುರ್ಲಿ ಕತೆಯನ್ನು ಸಿನಿಮಾ ಆಗಿ ನೋಡುತ್ತೇನೆ ಎಂದು ಯಾವತ್ತೂ ಅಂದುಕೊಂಡಿರಲಿಲ್ಲ. ಆ ಕತೆಯನ್ನು ಸ್ಟೀನ್ ಮೇಲೆ ನೋಡಿದಾಗ ರ * ಮೇಲೆ ನೋಡಿದಾಗ ರೋಮಾಂಚಿತನಾದೆ. ರಿಷಬ್ ಒಬ್ಬ ಅಪರೂಪದ ನಟ, ನಿರ್ದೇಶಕ. ಅವರು ಈ ಚಿತ್ರಕ್ಕಾಗಿ ಎಷ್ಟು ಕಷ್ಟಪಟ್ಟಿದ್ದಾರೆ ಅಂತ ನನಗೆ ಗೊತ್ತು. ಸಿನಿಮಾದ ಎಲ್ಲಾ ಡಿಪಾರ್ಟ್ ಮೆಂಟ್ಗಳೂ ಅವರಿಗೆ ಗೊತ್ತು. ಅವರಿಲ್ಲದಿದ್ದರೆ ಈ ಕಾಂತಾರ 1 ಸಿನಿಮಾ ಆಗುತ್ತಿರಲಿಲ್ಲ’ ಎಂದು ಹೇಳಿದ್ದಾರೆ.ರಿಷಬ್ ಶೆಟ್ಟಿ ಮಾತನಾಡಿ, ‘ಜೂ.ಎನ್ಟಿಆರ್ ಅವರಿಗೆ ನಾನು ಒಳ್ಳೆಯ ಆತಿಥ್ಯ ನೀಡಬೇಕು ಎಂದು ಆಸೆ ಪಟ್ಟಿದ್ದೆ. ಆದರೆ ಕುಂದಾಪುರಕ್ಕೆ ಬಂದಾಗ ಅವರೇ ನಮಗೆ ನಾಟಿಕೋಳಿ ಸಾರು ಮಾಡಿ ಬಡಿಸಿದರು’ ಎಂದರು. ಪ್ರೀ ರಿಲೀಸ್ಗೆ ಸಾವಿರಾರು ಮಂದಿ ಆಗಮಿಸಿದ್ದರು ಎಂದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







