ಪ್ರಧಾನಿ ಮೋದಿ ಅವರು ತಮ್ಮ X ಖಾತೆಯಲ್ಲಿ ಪೋಸ್ಟ್ ಹಾಕುವ ಮೂಲಕ ವಿಜಯದಶಮಿ ಶುಭಾಶಯ ಕೋರಿದ್ದಾರೆ. ನಕಾರಾತ್ಮಕತೆ ಮೇಲೆ ಸಕಾರಾತ್ಮಕತೆಯನ್ನು ಸಂಕೇತಿಸುವ ಹಬ್ಬವೇ ವಿಜಯದಶಮಿ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದ್ದಾರೆ. ವಿಜಯ ದಶಮಿ ಎಂಬುದು ದುಷ್ಟತನ ಹಾಗೂ ಸುಳ್ಳಿನ ಮೇಲೆ ಒಳ್ಳೆಯದು ಹಾಗೂ ಸತ್ಯದ ವಿಜಯ ಎಂದು ಸಹ ಪ್ರಧಾನಿ ಪೋಸ್ಟ್ ಮಾಡಿದ್ದಾರೆ.
ಹಬ್ಬದ ಶುಭ ಸಂದರ್ಭವು ಧೈರ್ಯ, ಬುದ್ಧಿವಂತಿಕೆ ಹಾಗೂ ಭಕ್ತಿಯ ಹಾದಿಯಲ್ಲಿ ನಡೆಯಲು ಎಲ್ಲರಿಗೂ ಸ್ಫೂರ್ತಿ ನೀಡಲಿ ಶುಭಾಶಯಗಳು ಎಂದು ಬರೆದಿದ್ದಾರೆ. ಇಂದು ಗಾಂಧಿ ಜಯಂತಿಯನ್ನು ದೇಶಾದ್ಯಂತ ಆಚರಿಸಲಾಗುತ್ತಿದ್ದು, ಮಹಾತ್ಮ ಗಾಂಧೀಜಿಯನ್ನು ಮೋದಿ ಈ ಸಂದರ್ಭದಲ್ಲಿ ಸ್ಮರಿಸಿದ್ದಾರೆ. ದೇಶದ ಬದಲಾವಣೆಗೆ ಸರಳತೆ, ಧೈರ್ಯಗಳು ಸಾಧನವಾಗಿ ಹೇಗೆ ಕಾರಣವಾಗಬಲ್ಲವು ಎಂಬುದನ್ನು ಗಾಂಧೀಜಿ ಅವರನ್ನು ನೋಡಿ ಕಲಿಯಬೇಕು. ಅಹಿಂಸೆ, ಕರುಣೆ, ಸೇವೆ ಜನಸಮುದಾಯವನ್ನು ಸಬಲೀಕರಣಗೊಳಿಸುವ ಪ್ರಮುಖ ಸಾಧನಗಳು ಎಂದು ಅವರು ನಂಬಿದ್ದರು. ಭಾರತದ ವಿಕಸಿತೆಗೆ ಅವರ ಹಾದಿಯನ್ನೇ ಅನುಸರಿಸುತ್ತೇವೆ ಎಂದು ಬರೆದುಕೊಂಡಿದ್ದಾರೆ.
‘ಜೈ ಜವಾನ್ ಜೈ ಕಿಸಾನ್’ ಎಂಬ ಧ್ಯೆಯದೊಂದಿಗೆ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ದೇಶಪ್ರೇಮ ಹುಟ್ಟುಹಾಕಿದರು. ಅಸಾಧಾರಣ ರಾಜಕಾರಣಿಯಾಗಿದ್ದು, ಅವರ ಸಮಗ್ರತೆ, ನಮ್ರತೆ ಮತ್ತು ದೃಢಸಂಕಲ್ಪವು ಸವಾಲಿನ ಸಮಯದಲ್ಲೂ ಭಾರತವನ್ನು ಬಲಪಡಿಸಿದೆ. ಅನುಕರಣೀಯ ನಾಯಕತ್ವ, ಶಕ್ತಿ ಮತ್ತು ನಿರ್ಣಾಯಕ ಕ್ರಿಯೆಯ ವ್ಯಕ್ತಿತ್ವವನ್ನು ಹೊಂದಿದ್ದರು ಎಂದು ಸಹ ಮೋದಿ ನೆನೆದಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







