ಅರಸೊತ್ತಿಗೆ ಕಾಲದಿಂದಲೂ ಆಯುರ್ವೇದ ಪಂಡಿತರಿಂದ ಹಿಡಿದು ಸಾಮಾನ್ಯ ಮನುಷ್ಯರವರೆಗೂ ನುಗ್ಗೆ ಸೊಪ್ಪು ತನ್ನ ಮಹತ್ವದ ಕಾರಣಕ್ಕೆ ಪ್ರಮುಖ ಔಷಧಿಯಾಗಿಯು ಬಳಕೆಯಾಗಿದೆ. ವೈಜ್ಞಾನಿಕ ದೃಷ್ಟಿಯಿಂದ ನಾವು ಎಷ್ಟೇ ಎತ್ತರದಲ್ಲಿದ್ದರೂ ಕೆಲವೊಂದು ಕಾಯಿಲೆಯ ವಿಷಯ ಬಂದಾಗ ಇಂತಹ ವಿಶೇಷ ಸತ್ವ ಉಳ್ಳಂತಹ ನಿಸರ್ಗದ ಕೊಡುಗೆಗಳನ್ನು ಗಮನಿಸಲೇಬೇಕಿದೆ.
ನುಗ್ಗೆ ಸೊಪ್ಪಿನಲ್ಲಿ ಯಥೇಚ್ಛವಾದ ಆಂಟಿ – ಆಕ್ಸಿಡೆಂಟ್ ಗಳು, ವಿಟಮಿನ್ ‘ ಸಿ ‘, ಜಿಂಕ್ ಮತ್ತು ಇತರ ಸಕ್ರಿಯವಾಗಿ ಕೆಲಸ ಮಾಡುವ ಸತ್ವಗಳಿವೆ. ಕ್ಯಾನ್ಸರ್ ಕಾಯಿಲೆಗೆ ಕಾರಣವಾಗುವಂತಹ ಫ್ರೀ ರ್ಯಾಡಿಕಲ್ ಗಳ ವಿರುದ್ಧ ಹೋರಾಡಿ ದೇಹದ ಕೋಶಗಳ ಒಳಗೆ ಡಿ ಎನ್ ಎ ಗಳ ನಾಶಕ್ಕೆ ಕಾರಣವಾಗುವುದನ್ನು ಇದು ತಪ್ಪಿಸುತ್ತದೆ.
ಮಾನವನ ದೇಹದಲ್ಲಿ ಲಿವರ್ ನ ಅತಿ ಮುಖ್ಯ ಕೆಲಸ ಜೀರ್ಣಾಂಗದಿಂದ ದೇಹದ ಇತರ ಅಂಗಗಳಿಗೆ ರಕ್ತವನ್ನು ಹರಿಸುವ ಮೊದಲು ಅದನ್ನು ಶೋಧಿಸುವುದು. ಶೋಧಿಸಿ ಅದರಲ್ಲಿನ ರಾಸಾಯನಿಕಗಳನ್ನು ನಿರ್ವಿಷಗೊಳಿಸಿ ಔಷಧಿಗಳನ್ನು ಚಯಾಪಚಯಗೊಳಿಸುವಂತೆ ಮಾಡುವಲ್ಲಿ ನುಗ್ಗೆ ಸೊಪ್ಪು ಪ್ರಮುಖ ಪಾತ್ರ ವಹಿಸುತ್ತದೆ. ಒಂದು ವೇಳೆ ಪಿತ್ತಜನಕಾಂಗಕ್ಕೆ ಸಮಸ್ಯೆ ಉಂಟಾದಲ್ಲಿ ಈ ಎಲ್ಲಾ ಕೆಲಸಗಳು ಸ್ಥಗಿತಗೊಳ್ಳುತ್ತವೆ. ಆದ್ದರಿಂದಲೇ ನಮ್ಮ ದೇಹದ ಆರೋಗ್ಯದ ಜೊತೆಗೆ ನಮ್ಮ ದೇಹದ ಒಳಗಿರುವ ಅಂಗಾಂಶಗಳ ಆರೋಗ್ಯದ ಕಡೆಗೆ ಕೂಡ ನಾವು ಒತ್ತು ಕೊಡಬೇಕು. ನಮ್ಮ ದೇಹದಲ್ಲಿ ಲಿವರ್ ನ ಆರೋಗ್ಯ ಚೆನ್ನಾಗಿರಬೇಕಾದರೆ ಹೇರಳವಾಗಿ ಜಮೀನು ಭಾಗದಲ್ಲಿ ಸಿಗುವ ನುಗ್ಗೆ ಸೊಪ್ಪನ್ನು ಆಗಾಗ ತಿನ್ನುತ್ತಿರಬೇಕು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







