ಕರ್ನಾಟಕ ಸರ್ಕಾರದ ಭೋವಿ ಅಭಿವೃದ್ದಿ ನಿಗಮಕ್ಕೆ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಮೈಸೂರಿನ ನೇರಲಗುಂಟೆ ಎಂ ರಾಮಪ್ಪರವರ ಪದಗ್ರಹಣ ಹಾಗೂ ಧಾರ್ಮಿಕ ಪೂಜಾ ಕೈಂಕರ್ಯವು ಚಿತ್ರದುರ್ಗ ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿರವರ ದಿವ್ಯ ಸಾನ್ನಿಧ್ಯದಲ್ಲಿ ಜರುಗಿತು.
ನಿಗಮದ ಅಧ್ಯಕ್ಷರಾಗಿ ಪದಗ್ರಹಣ ಮಾಡಿ ಮಾತನಾಡಿದ ಅವರು ನಾನು ಬಡತನದ ಹಿನ್ನೆಲೆಯಿಂದ ಬಂದಿದ್ದೇನೆ. ಬಡವರ ಕಷ್ಚಕಾರ್ಪಣ್ಯಗಳು ಹತ್ತಿರದಿಂದ ಅನುಭವಿಸಿದ್ದೇನೆ. ಕಟ್ಟಕಡೆಯ ಭೋವಿ ವ್ಯಕ್ತಿಯನ್ನು ಗುರುತಿಸಿ ಅಭಿವೃದ್ಧಿಯ ಕಡೆ ಕರೆದುಕೊಂಡು ಬರುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ರಾಜ್ಯ ಪ್ರವಾಸ ಮಾಡಿ ಸಮಾಜದ ಸ್ಥಿತಿಗಳನ್ನು ಸ್ವತಃ ಅರ್ಥೈಸಿಕೊಂಡು ಸ್ಪಂದಿಸುತ್ತೇನೆ. ಬಡವರು ಮುಗ್ದ ಜನರು ಯಾರ ಶಿಫಾರಸ್ಸು ಪಡೆಯದೆ ದಲ್ಲಾಳಿಗಳನ್ನು ಸಂಪರ್ಕಿಸಿದೆ ನೇರವಾಗಿ ನಿಗಮಕ್ಕೆ ಭೇಟಿ ನೀಡಿ, ಸಂವಿಧಾನದ ಅಡಿಯಲ್ಲಿ ಶಾಸಕರ ಸಚಿವರು ಗುರುತಿಸುವ ಅರ್ಹ ವ್ಯಕ್ತಿಗಳಿಗೂ ಹಾಗೂ ನಿರ್ಲಕ್ಷ್ಯಕ್ಕೆ ಒಳಪಟ್ಟ ಉತ್ಸಾಹಿ ಯುವಕರಿಗೆ ಸ್ಪಂದಿಸುವ ಕಾರ್ಯಕ್ಕೆ ಮೊದಲನೇ ಆದ್ಯತೆ ನೀಡುತ್ತೇನೆ ಎಂದರು.
ನಿಗಮಕ್ಕೆ ನೇಮಕಗೊಳ್ಳಲು ಕಾರಣೀಭೂತರಾದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಪಕ್ಷದ ಅಧ್ಯಕ್ಷರು ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ ಹಾಗೂ ಸಚಿವ ಶಿವರಾಜ ತಂಗಡಗಿಯವರಿಗೆ ಗೌರವ ತರುವಂತೆ ಘನವ್ಯಕ್ತಿತ್ವದಲ್ಲಿ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕರಾದ ಚಳ್ಳಕೆರೆ ಟಿ ರಘುಮೂರ್ತಿ, ಹೊಸದುರ್ಗ ಗೋವಿಂದಪ್ಪ, ಹೊಳಲ್ಕೆರೆ ಚಂದ್ರಪ್ಪ ಎಂ, ಗುಂಡ್ಲುಪೇಟೆಯ ಗಣೇಶ್ ಪ್ರಸಾದ್, ನಂಜನಗೂಡಿನ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿ.ಎಸ್. ಬಸವರಾಜ್, ಭೋವಿ ನಿಗಮದ ಮಾಜಿ ಅಧ್ಯಕ್ಷ ಜಿ.ವಿ.ಸೀತಾರಾಮ, ಹಾವೇರಿ ರವಿ ಪೂಜಾರಿ, ಕಲ್ಬುರ್ಗಿ ತಿಪ್ಪಣ್ಣ ಒಡೆಯರಾಜು, ಕೊರಮ ಕೊರಚ ನಿಗಮ ಅಧ್ಯಕ್ಷೆ ಪಲ್ಲವಿ, ನಿಗಮದ ಅಧಿಕಾರಿಗಳಾದ ಚಂದ್ರನಾಯ್ಕ, ಶಿವಸ್ವಾಮಿ, ಭೋವಿ ಸಮಾಜದ ಜಿಲ್ಲಾಧ್ಯಕ್ಷರುಗಳಾದ ವಿಜಯಪುರ ರಾಮು ಹೊಸಪೇಟೆ, ಬಾಗಲಕೋಟೆ ಹುಲ್ಲಪ್ಪ ಹಳ್ಳೂರು, ದಾವಣಗೆರೆ ಜಯಣ್ಣ, ಗದಗ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಬಳ್ಳಾರಿ, ಬಾಗೇಪಲ್ಲಿ ಕೃಷ್ಣಪ್ಪ, ಮಂಡ್ಯ ಗುರಪ್ಪ, ಮೈಸೂರು ನಾಗರಾಜಪ್ಪ, ಕೊಪ್ಪಳ ಸತ್ಯಪ್ಪ, ರಾಯಚೂರು ನಾರಾಯಣ, ಕೋಲಾರ ಮಾಲೂರಿನ ಲೋಕೇಶ, ಟಿ ಶೇಖರಪ್ಪ, ಒಸಿಸಿಐ ಜಯಶಂಕರ ಬಂಜಾರ, ನೆಲಮಂಗಲ ಚೌಡಪ್ಪ, ಸಮುದಾಯದ ಅನಂತ ನಾಯ್ಕ, ಕೊರಚ ಸಮಾಜದ ಆದರ್ಶ ಯಲ್ಲಪ್ಪ ಹಾಗೂ ರಾಜ್ಯದ ಮೂಲೆ ಮೂಲೆಗಳಿಂದ ಮುಖಂಡರು ಉಪಸ್ಥಿತಿಯಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







