*ತಂದೆಯನ್ನು ಮನೆಯಿಂದ ಹೊರದಬ್ಬಿದ ಮಕ್ಕಳು*
ಚಿತ್ರದುರ್ಗ: ಆಸ್ತಿ ಹಂಚಿಕೆಯ ವಿಚಾರದಲ್ಲಿ ವ್ಯತ್ಯಾಸವಾದ ಹಿನ್ನಲೆ ವಯಸ್ಸಾದ ತಂದೆಯನ್ನು ಮನೆಯಿಂದ ಹೊರಹಾಕಿ ಅಮಾನವೀಯತೆ ಮೆರೆದ ಘಟನೆ ಚಿತ್ರದುರ್ಗದ ಚೋಳಗುಡ್ಡದಲ್ಲಿ ನಡೆದಿದೆ. ಮಾಡನಾಯಕನಹಳ್ಳಿ ಮೂಲದ 85 ವರ್ಷದ ಬಸಪ್ಪ ಹಾಗೂ ಮಕ್ಕಳ ಮಧ್ಯೆ ಜಮೀನು ಹಂಚಿಕೆ ವಿಚಾರವಾಗಿ ಮನಸ್ತಾಪ ಉಂಟಾಗಿತ್ತು. ಇದರಿಂದ ಕೋಪಗೊಂಡ ಇಬ್ಬರು ಗಂಡು ಮಕ್ಕಳು ಬಸಪ್ಪನನ್ನು ಮನೆಯಿಂದ ಹೊರಹಾಕಿದ್ದಾರೆ.
ಮನೆಯಿಂದ ಹೊರಬಿದ್ದ ಬಸಪನನ್ನು ಸ್ಥಳೀಯರು ಚಿತ್ರದುರ್ಗ ನಿರಾಶ್ರಿತರ ಕೇಂದ್ರಕ್ಕೆ ಸೇರಿಸಿ ಬಳಿಕ ಘಟನೆಯ ಬಗ್ಗೆ ಸ್ಥಳೀಯರು ಜಿಲ್ಲಾಡಳಿತದ ಗಮನಕ್ಕೆ ತಂದ ಹಿನ್ನಲೆ ಎಸಿ ಮೆಹಬೂಬ್ ಜಿಲಾನ್, ಅಂಗವಿಕಲ ಕಲ್ಯಾಣ ಅಧಿಕಾರಿ ವೈಶಾಲಿ ನಿರಾಶ್ರಿತರ ಕೇಂದ್ರಕ್ಕೆ ಭೇಟಿ ಬಸಪ್ಪನನ್ನು ತನ್ನ ಮಗನ ಮನೆಗೆ ವಾಪಸ್ ಕರೆತಂದಿದ್ದು, ಮತ್ತೊಮ್ಮೆ ಇಂತಹ ಘಟನೆ ಮರುಕಳಿಸಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



