ಹೊಸಪೇಟೆ : ಬಡವರ ಹಣ ತಿನ್ನುವಂತ ಕಾಲ ನನಗೆ ಇನ್ನು ಬಂದಿಲ್ಲ. ನಾನು ಮನೆ ಕೊಡುವ ವೇಳೆ ಹಣ ಪಡೆದಿದ್ದೇನೆ ಎಂದು ಸಾಬೀತಾದ್ರೆ ನೂರಕ್ಕೆ ನೂರರಷ್ಟು ರಾಜೀನಾಮೆ ನೀಡುತ್ತೇನೆ ಎಂಬ ಸಚಿವ ಜಮೀರ್ ಅಹ್ಮದ್ ಹೇಳಿಕೆಗೆ ವಿಜಯನಗರ ಹಂಪಿ ವಿವಿಯಲ್ಲಿ ಶಾಸಕ ಬಿ ಆರ್ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.
ವಸತಿ ಸಚಿವರು ಏನು ಹೇಳಿದ್ದಾರೋ ನನಗೆ ಗೊತ್ತಿಲ್ಲ. ಜಮೀರ್ ಏನು ಹೇಳಿದ್ದಾರೆ ಎನ್ನುವುದನ್ನು ನೋಡಿಕೊಂಡು ಮಾತಾಡ್ತೀನಿ. ನಾಳೆ ಸಿಎಂ, ಡಿಸಿಎಂ ನನ್ನ ಕರೆದಿದ್ದಾರೆ. ಅವರನ್ನು ಭೇಟಿ ಮಾಡುತ್ತೇನೆ. ಈ ಬಗ್ಗೆ ಜಮೀರ್ ಅವರು ನನ್ನ ಜೊತೆ ಮಾತನಾಡಿಲ್ಲ. ಯಾವ ಪಂಚಾಯಿತಿಯಲ್ಲಿ ಅವ್ಯವಹಾರ ಆಗಿದೆ ಎಂದು ಡಿಟೇಲ್ ಆಗಿ ಹೇಳಿದ್ದೇನೆ. ನಾನು ಕೇಳಿದ್ದು ಎರಡು ಸಾವಿರ ಮನೆ ಅಲ್ಲ, ಆರು ಸಾವಿರ ಮನೆ ಕೇಳಿದ್ದೇನೆ ಅಂತ ಹೇಳಿದ್ರು. ಇದೇ ವೇಳೆ ಮಾತಾಡಿ, ಮಾಗಡಿ ಶಾಸಕ ಬಾಲಕೃಷ್ಣ ಡಿಕೆ ಬ್ರದರ್ಸ್ ಆಶೀರ್ವಾದದಿಂದ ನನಗೆ ಅನುದಾನ ಸಿಗ್ತಾ ಇದೆ ಅಂತ ಹೇಳಿದ್ದಾರೆ. ನನಗೆ ಯಾರ ಆಶೀರ್ವಾದವೂ ಇಲ್ಲ, ಕೃಪಾಕಟಾಕ್ಷವೂ ಇಲ್ಲ. ಬಾಲಕೃಷ್ಣ ಅವರ ಕೇಸ್ ಬೇರೆ,ನನ್ನ ಕೇಸ್ ಬೇರೆ ಎಂದು ಶಾಸಕ ಬಿ ಆರ್ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



