ಸಂಗೀತ ಸಾಧಕ ತೋಟಪ್ಪ ಉತ್ತಂಗಿ ಅವರಿಗೆ“ಚಿನ್ಮೂಲಾದ್ರಿ ಗಾನ ಸಿರಿ” ಗೌರವ ಪುರಸ್ಕಾರ
ಚಿತ್ರದುರ್ಗ ಜೂನ್ 23,
ಯೋಗ ಮತ್ತು ಸಂಗೀತ ಇವು ಮನುಷ್ಯರ ಅನೇಕ ಸಮಸ್ಯೆಗಳಿಗೆ ಉತ್ತರ, ಪರಿಹಾರ ನೀಡಬಲ್ಲ ಮಾಧ್ಯಮಗಳಾಗಿವೆ ಎಂದು
ಚಿತ್ರದುರ್ಗ ಜಿಲ್ಲಾ ಯೋಗಾಸನ ಕ್ರೀಡಾ ಮತ್ತು ಸಾಂಸ್ಕøತಿಕ ಸಂಸ್ಥೆಯ ಅಧ್ಯಕ್ಷರು ಯೋಗಾಚಾರ್ಯರೂ ಆದ ಎಲ್.ಎಸ್.
ಚಿನ್ಮಯಾನಂದ ತಿಳಿಸಿದರು.
ಚಿತ್ರದುರ್ಗ ಜಿಲ್ಲಾ ಯೋಗಾಸನ ಕ್ರೀಡಾ ಮತ್ತು ಸಾಂಸ್ಕøತಿಕ ಸಂಘದ ವತಿಯಿಂದ ಮತಿತ್ತರ ಸಂಘ ಸಂಸ್ಥೆಗಳ ಪದಾಧಿಕಾರಿಗಳ
ಉಪಸ್ಥಿತಿಯಲ್ಲಿ ನಗರದ ಸಹ್ಯಾದ್ರಿ ಬಡಾವಣೆಯ ಯೋಗ ಬಂಧು ನಿಲಯದ ಮೇಲ್ಚಾವಣಿಯಲ್ಲಿ ಶನಿವಾರ ತೋಟಪ್ಪ
ಉತ್ತಂಗಿಯವರಿಗೆ ಹಮ್ಮಿಕೊಂಡಿದ್ದ ಚಿನ್ಮುಲಾದ್ರಿ ಗಾನಸಿರಿ” ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ
ಅವರು, ಭಾರತದ ಸಾಂಸ್ಕøತಿಕ ಕ್ಷೇತ್ರವನ್ನು ಆಧರಿಸಿ, ಅನುಸರಿಸಿ ಅನುಷ್ಠಾನಕ್ಕೆ ತರಬೇಕಿದೆ.
ಈ ಹಿನ್ನೆಲೆಯಲ್ಲಿ ಎರಡರ ಮಹತ್ವ
ಒಂದೇ ದಿನ ಬಂದಿರುವುದು ವಿಶೇಷವೇ ಆಗಿದೆ. ತೋಟಪ್ಪ ಉತ್ತಂಗಿ ಅವರು ಸಂಗೀತ ಕ್ಷೇತ್ರದಲ್ಲಿ ಅಗಾದ ಸಾಧನೆ ಮತ್ತು ಸೇವೆ
ಸಲ್ಲಿಸಿದ ಕಾರಣ ಅವರನ್ನ ಅಭಿನಂದಿಸುವ ಹಾಗೂ ಗೌರವಿಸುವ ಕೆಲಸ ಮಾಡಲಾಗಿದೆ. ಹಿಂದೆ ಗುರುವಿದ್ದಲ್ಲಿಗೆ ಶಿಷ್ಯಬಂದು
ವಿದ್ಯೆಕಲಿತುಕೊಳ್ಳುವ ವಾಡಿಕೆ ಇತ್ತು. ಕ್ರಮೇಣ ಇಂದು ಬದಲಾದ ಸನ್ನಿವೇಶದಲ್ಲಿ ಜನರ ಬಳಿಗೆ ಕೊಂಡೊಯ್ಯುವ ಪರಿಸ್ದಿದೆ.
ಒಟ್ಟಿನಲ್ಲಿ ನಾವು-ನೀವು ಸೇರಿ ಸುಸಂಸ್ಕøತ, ಸನ್ನಡತೆಯ ಆರೋಗ್ಯ ಪೂರ್ಣ ಸಮೃದ್ಧ ಸಮಾಜಕ್ಕೆ ನಮ್ಮ ಕೈಲಾದ ಸೇವೆ ಮಾಡುವಅಗತ್ಯವಿದೆ ಎಂದರು.
ಕನ್ನಡ ಸಂಸ್ಕøತಿ ಇಲಾಖೆ ಪ್ರಭಾರೆ ಸಹಾಯ ನಿರ್ದೇಶಕರಾದ ಬಿ.ಎಂ. ಗುರುನಾಥ ಅವರು ಮಾತನಾಡಿ ಯೋಗ ಒಂದು ವಿಜ್ಞಾನ.
ಅದನ್ನ ಅನೇಕರು ಉಳಿಸಿ ಬೆಳಸಿದ್ದಾರೆ. 5 ಸಾವಿರ ವರ್ಷಗಳ ಹಿಂದೆ ಬುದ್ದ ವಿಪಷನ ಧ್ಯಾನವನ್ನು ಪರಿಚಯಿಸುವ ಮೂಲಹೊಸ
ಆಯಾಮ ನೀಡಿದ. ಸಂಗೀತವು ನಮ್ಮ ಭಾರತದಲ್ಲಿ ಅಗಾಧವಾಗಿ ಬೆಳೆದಿದೆ. ದಾಸ, ವಚನ, ಜಾನಪದ ಇತರೆ ಸಾಹಿತ್ಯ ಪ್ರಕಾರಗಳ
ಮೂಲಕ ಜನರನ್ನ ಸಂಗೀತ ಮುಟ್ಟಿದೆ. ಕೇವಲ ಕೇಳಿ ಭಾವುಕರಾಗದೆ ಅದನ್ನ ಅನುಭವಿಸಬೇಕೆಂದು, ಅದು ಮುಂದಿನ ಪೀಳಿಗೆ
ಅನುಸರಿಸಲು ಸರಿಯಾದ ಕ್ರಮವನ್ನು ಹಾಕಿಕೊಡಬೇಕೆಂದರು.
ನಿವೃತ್ತ ಮುಖ್ಯ ಶಿಕ್ಷಕ ಹುರುಳಿ ಎಂ. ಬಸವರಾಜು ವಿಷಯ ಪ್ರಸ್ತಾಪ ನಿವೃತ್ತ ಮುಖ್ಯ ಶಿಕ್ಷಕ ಹುರುಳಿ ಎಂ. ಬಸವರಾಜು ವಿಷಯ ಪ್ರಸ್ತಾಪ ಮಾಡುತ್ತಾ ಪುರಾತನ ಕಲೆಗಳನ್ನು ಇಂದಿನವ ಅನುಸರಿಸಿಕೊಂಡು ಹೋಗುವ ಹೊಣೆಗಾರಿಕೆ ಹೊರಬೇಕಿದೆ. ಅದಕ್ಕೆ ಸರಿಯಾದ ಮಾರ್ಗದರ್ಶಕರ ಅಗತ್ಯವೂ ಇದೆ ಹಿಂದೆ ಶ್ರಮಾಧಾರಿತ ದುಡಿಮೆ ದೈಹಿಕಶ್ರಮ ಇತ್ತು. ಕಾಲ ಕ್ರಮೇಣ ನಾವು ಸುಲಭದ ಹಾದಿ ಕಂಡುಕೊಂಡು ಕಸರತ್ತು ಕಡಿಮೆಯಾದ ಪ್ರತಿ ಫಲವೋ ಎಂಬಂತೆ ಮನುಷ್ಯರಿಗೆ ಅನೇಕ ರೋಗಗಳು ಬಂದು ಈಗೀಗ ಯೋಗದ ಕಡೆ ಮುಖಮಾಡಿದ್ದಾರೆ. ಹಾಗೆಯೇ ಸಂಗೀವೂ ಪುರಾತನ ಕಲೆ. ವಿಶ್ವದಲ್ಲಿ ಹೆಸರುಮಾಡಿರುವ ಸಂಗೀತದ ಮೋಡಿಗೆ ಮನಸೋಲದವರೆ ಕಡಿಮೆ. ಆ ಕ್ಷೇತ್ರದಲ್ಲಿ ಅತಿರಥ ಮಹಾರಥರು ಆಗಿ ಹೋಗಿದ್ದಾರೆ. ಹಾಗೆಯೇ ಆ ಕ್ಷೇತ್ರಕ್ಕೆ ಅನುಪಮ ಸೇವೆಯನ್ನು ಸಲ್ಲಿಸಿದ್ದಾರೆ ಎಂದರು.
ಹಿನ್ನಲೆ ಗಾಯಕ, ಸಂಗೀತ ನಿರ್ದೇಶಕರು ಆದ ಗವಾಯಿ ಪಂಡಿತ್ ತೋಟಪ್ಪ ಉತ್ತಂಗಿ ಅವರು. ವಚನ ಭಾವಗೀತೆ, ಸಂಗೀತ
ಕ್ಷೇತ್ರಕ್ಕೆ ತಮ್ಮದೇ ಆದ ಈ ನಾಡಿಗೆ ಕಾಣ್ಕೆ ನೀಡಿದ ಪಂಡಿತ್ ಪಂಚಾಕ್ಷರ ಗವಾಯಿಗಳವರ ಮೇಲಿನ ಗೀತೆಗಳನ್ನು ಹಾಡುವುದರ
ಮೂಲಕ ವಿಶ್ವ ಸಂಗೀತ ದಿನಕ್ಕೆ ಮೆರಗು ತಂದುಕೊಟ್ಟರು. ಅವರ ಜತೆಗೆ ಹಾಡುಗಾರ್ತಿ ಕೋಕಿಲಾ ಎಂ.ಜೆ. ಪಕ್ಕವಾದ್ಯಗಳ ಸಾಥ್
ನೀಡಿದ ಅಭಿಷೇಕ್ ಹಾಗೂ ಶರಣ್ ಅವರುಗಳ ತಂಡ ಸುಶ್ರಾವ್ಯ ಗೀತೆಗಳನ್ನು ಹಾಡಿ ಶೋತೃಗಳ ಮನಗೆದ್ದರು.
ಈ ಸಂದರ್ಭದಲ್ಲಿ ವಿವಿಧ ಸಂಘ, ಸಂಸ್ಥೆ, ಸಂಘಟನಗಳ ಪದಾಧಿಕಾರಿಗಳಾದ ರಾಜಶೇಖರ್, ಬಸವರಾಜಕಟ್ಟಿ, ಬಿ.ಟಿ.ನಂದೀಶ್,
ಪರಶುರಾಮ್, ಕಾಂತರಾಜ್, ವೆಂಕಟೇಶ್, ಗಣೇಶಯ್ಯ, ವೀರೇಶ್, ರಂಗಸ್ವಾಮಿ, ಹೇಮಲತ, ವಿನಾಯಕ, ಅನುಸೂಯ, ರುಕ್ಮಿಣಿ,
ಸುರಯ್ಯ ಸೇರಿದಂತೆ ವ್ಯಪಾರಸ್ಥರು, ಯೋಗಾಸಕ್ತರು, ಸಂಗೀತ ಪ್ರೇಮಿಗಳು ಭಾಗವಹಿಸಿದ್ದರು.
ಕೋಕಿಲಾ ಎಂ.ಜೆ. ಪ್ರಾರ್ಥನೆ ಹಾಡಿದರು. ಟಿ.ವೀರಭದ್ರಸ್ವಾಮಿ ಸ್ವಾಗತಿಸಿದರು. ಶಿಕ್ಷಕಿ ವಿಮಲಾಕ್ಷಿ ಕಾರ್ಯಕ್ರಮ ನಿರ್ವಹಿಸಿದರು.
ಯೋಗ ತರಬೇತುದಾರ ಶಿಕ್ಷಕ ಎಂ.ಟಿ. ಮುರುಳಿ ಶರಣು ಸಮರ್ಪಣೆ ಮಾಡಿದರು. ಯೋಗ ಮತ್ತು ಸಂಗೀತದ ಮಹತ್ವ ಕುರಿತಾಗಿ
ಚಿಂತನೆ ಹಾಗೂ ಅವುಗಳಿಂದಾಗುವ ಪ್ರಭಾವ, ಪರಿಣಾಮಗಳನ್ನು ಚಿಂತನೆಗೆ ಹಚ್ಚುವ ಕಾರ್ಯಕ್ರಮ ನಡೆಯಿತು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



