ಚಿತ್ರದುರ್ಗ ಜೂ. 26
ಸುಮಾರು 4 ಲಕ್ಷಕ್ಕೂ ಹೆಚ್ಚು ಪರಿಶಿಷ್ಟ ಪಂಗಡಗಳ ಜನರು
ವಾಸಿಸುತ್ತಿರುವ ಚಿತ್ರದುರ್ಗ ಜಿಲ್ಲೆಗೆ ಹಾಲಿ ಇರುವ ಏಕಲವ್ಯ ವಸತಿ
ಶಾಲೆಯ ಜೊತೆಗೆ ಇನ್ನೊಂದು ಹೆಚ್ಚುವರಿ ಏಕಲವ್ಯ ವಸತಿ
ಶಾಲೆಯನ್ನು ಮಂಜೂರು ಮಾಡಲು ಕೇಂದ್ರ ಬುಡಕಟ್ಟು
ವ್ಯವಹಾರಗಳ ಸಚಿವರಿಗೆ ಶಿಫಾರಸ್ಸು ಮಾಡುವಂತೆ ಸಂಸದ
ಗೋವಿಂದ ಎಂ.ಕಾರಜೋಳ ರವರು ನಿನ್ನೆ ನವದೆಹಲಿಯಲ್ಲಿ
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ
ರಾಷ್ಟ್ರೀಯ ಬಿ.ಜೆ.ಪಿ.ಅಧ್ಯಕ್ಷರಾದ ಜೆ.ಪಿ.ನಡ್ಡಾರವರನ್ನು ಭೇಟಿ
ಮಾಡಿ ಮನವಿ ಸಲ್ಲಿಸಿದರು.
ಚಿತ್ರದುರ್ಗ ಜಿಲ್ಲೆಯಲ್ಲಿ ಸಾಕಷ್ಟು ಪರಿಶಿಷ್ಟ ಪಂಗಡಕ್ಕೆ ಸೇರಿದವರ
ಜನಸಂಖ್ಯೆಯಿದೆ, ಅದರಲ್ಲೂ ಚಳ್ಳಕೆರೆ ಹಾಗೂ ಮೊಳಕಾಲ್ಲೂರು
ತಾಲ್ಲೂಕುಗಳಲ್ಲಿ ಅತಿ ಹೆಚ್ಚು ಪರಿಶಿಷ್ಟ ವರ್ಗದ ಜನರು
ವಾಸಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಹಾಲಿ ಇರುವ ಏಕಲವ್ಯ ವಸತಿ ಶಾಲೆ
ಬೇಡಿಕೆಯನ್ನೂ ಪೂರೈಸಲಾಗುತ್ತಿಲ್ಲ, ಪರಿಶಿಷ್ಟ ವರ್ಗಗಳ
ಮಕ್ಕಳೂ ಕೂಡ ಗುಣಮಟ್ಟದ ಶಿಕ್ಷಣ ಪಡೆದು ಮುಖ್ಯವಾಹಿನಿಗೆ
ಬರಬೇಕು ಎನ್ನುವ ಆಶಯ ನನ್ನದಾಗಿದೆ ಎಂಬದನ್ನು ಸಚಿವರಿಗೆ
ಸಂಸದರು ಮನದಟ್ಟು ಮಾಡಿದ್ದಾರೆ. ಏಕಲವ್ಯ ವಸತಿ ಶಾಲೆಗೆ
ಅಗತ್ಯವಾಗಿರುವ 15 ಎಕರೆ ಜಮೀನನ್ನೂ ಸಹ ಗುರುತಿಸಲು
ಈಗಾಗಲೇ ಕ್ರಮಕೈಗೊಂಡಿರುವುದಾಗಿ ಪತ್ರದಲ್ಲಿ ಸಂಸದರು
ತಿಳಿಸಿದ್ದಾರೆ.
ಬಸವ ಸಂಸ್ಕೃತಿ ಅಭಿಯಾನ : ಮುರುಘಾ ಮಠದಲ್ಲಿ ಜೂನ್ 28 ರಾಜ್ಯ
ಮಟ್ಟದ ಪೂರ್ವಭಾವಿ ಸಭೆ
ಬಸವ ಸಂಸ್ಕೃತಿ ಅಭಿಯಾನದ ರಾಜ್ಯ ಮಟ್ಟದ ಪೂರ್ವಭಾವಿ
ಸಭೆಯನ್ನು ಇದೇ ತಿಂಗಳ 28ರಂದು ನಗರದಮುರುಘರಾಜೇಂದ್ರ ಬೃಹನ್ಮಠದಲ್ಲಿ ನಡೆಸಲು
ತೀರ್ಮಾನಿಸಲಾಗಿದೆ. ಈ ಮಹತ್ವದ ಸಭೆಗೆ ಪ್ರತಿ ಜಿಲ್ಲೆಗಳಿಂದ
ಮೂರು ಜನ ಪ್ರತಿನಿಧಿಗಳು ಬರಲಿದ್ದಾರೆ ಎಂದು ತಿಳಿದು ಬಂದಿದೆ.
ಈ ನಿಟ್ಟಿನಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ
ಪ್ರಧಾನ ಕಾರ್ಯದರ್ಶಿ ಶಿವಾನಂದ ಜಾಮದಾರ್ ಇತ್ತೀಚೆಗೆ ಶ್ರೀ
ಮಠಕ್ಕೆ ಭೇಟಿ ನೀಡಿ ಮಹಾಸಭಾದ ಜಿಲ್ಲಾ ಘಟಕದ ಪದಾಧಿಕಾರಿಗಳು
ಹಾಗೂ ಬೃಹನ್ಮಠದ ಆಡಳಿತ ಮಂಡಳಿಯ ಸದಸ್ಯರಾದ ಪೂಜ್ಯ ಡಾ.
ಬಸವಕುಮಾರ ಮಹಾಸ್ವಾಮಿಗಳವರ ಸಮ್ಮುಖದಲ್ಲಿ
ಸಮಾಲೋಚನೆ ನಡೆಸಿದರು.
ಪೂರ್ವಭಾವಿ ಸಭೆ
ಡಾ. ಬಸವಕುಮಾರ ಸ್ವಾಮೀಜಿ ಅವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿ
ಪೂರ್ವಭಾವಿ ಸಭೆಯನ್ನು ಯಶಸ್ವೀಯಾಗಿ ನಡೆಸಲು ಸಂಪೂರ್ಣ
ಸಹಕಾರ ನೀಡುವುದಾಗಿ ಹೇಳಿದರು. “ನಾವೆಲ್ಲ ಮಠಾಧೀಶರು
ಸೇರಿದಂತೆ ಎಲ್ಲರೂ ಭಾಗವಹಿಸಿದಾಗ ಅಭಿಯಾನವನ್ನು ಸಫಲವಾಗಿ
ನಡೆಸಿ ಬಸವ ತತ್ವವನ್ನು ಜನ ಮನಸಕ್ಕೆ ಮುಟ್ಟಿಸಲು
ಸಾದ್ಯವಾಗುತ್ತದೆಯೆಂದು,'' ಹೇಳಿದರು.
ಈ ಸಂದರ್ಭದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಚಿತ್ರದುರ್ಗ
ಜಿಲ್ಲಾ ಘಟಕದ ಅಧ್ಯಕ್ಷರಾದ ಶರಣರಾದ ಕೆಂಚವೀರಪ್ಪ,
ಉಪಾಧ್ಯಕ್ಷರಾರಾಗಿ ಶಿವಲಿಂಗಪ್ಪ, ಬಸವರಾಜ ಕಟ್ಟಿ, ಪ್ರಧಾನ
ಕಾರ್ಯದರ್ಶಿ ನಂದೀಶ ಜಿ. ಟಿ., ಲಿಂಗಾಯತ ಮುಖಂಡರಾದ ಎಸ್.
ಷಣ್ಮುಖಪ್ಪ ಸೇರಿದಂತೆ ಅನೇಕ ಪ್ರಮುಖರು ಹಾಗೂ
ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಸೆಪ್ಟೆಂಬರ 1ರಿಂದ ಲಿಂಗಾಯತ ಮಠಾಧೀಶರ ಒಕ್ಕೂಟ ಹಾಗೂ ನಾಡಿನ
ಎಲ್ಲಾ ಬಸವ ಸಂಘಟನೆಗಳ ಸಹಯೋಗದಲ್ಲಿ ಬಸವ ಸಂಸ್ಕೃತಿ
ಅಭಿಯಾನ ಬೀದರದಿಂದ ಬೆಂಗಳೂರವರೆಗೆ ನಡೆಯಲಿದೆ.
ಸೆಪ್ಟೆಂಬರ್ 16ಕ್ಕೆ ಚಿತ್ರದುರ್ಗಕ್ಕೆ ಅಭಿಯಾನ ಬರಲಿದೆ. ಜಾಗತಿಕ
ಲಿಂಗಾಯತ ಮಹಾ ಸಭಾದ ಮೂರನೇ ರಾಜ್ಯ ಮಟ್ಟದ ಕಾರ್ಯಕಾರಿ
ಸಮಿತಿಯ ಸಭೆಯೂ ಚಿತ್ರದುರ್ಗದಲ್ಲಿ ಸೆಪ್ಟೆಂಬರ್ 28
ನಡೆಯಲಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



