ಚಿತ್ರದುರ್ಗ : ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಸ್ಪರ್ಧಿಸಿ ನೀವುಗಳು ನಾಯಕರಾಗಿ. ಸೋಲು-ಗೆಲುವಿಗಿಂತ
ಚುನಾವಣೆಯಲ್ಲಿ ಸ್ಪರ್ಧಿಸುವ ಧೈರ್ಯ ಮಾಡಿ ಎಂದು ಯೂತ್ ಕಾಂಗ್ರೆಸ್ ಅಧ್ಯಕ್ಷರು, ಪದಾಧಿಕಾರಿಗಳಿಗೆ ಕರ್ನಾಟಕ ಪ್ರದೇಶ ಯುವಕಾಂಗ್ರೆಸ್ ರಾಜ್ಯಾಧ್ಯಕ್ಷ ಮಂಜುನಾಥ್ಗೌಡ ಕರೆ ನೀಡಿದರು.ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯಿಂದ ಉಮಾಪತಿ ಕಲ್ಯಾಣ ಮಂಟಪದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಕಾರ್ಯಕಾರಿಣಿಸಭೆ ಉದ್ಘಾಟಿಸಿ ಮಾತನಾಡಿ,ರಾಹುಲ್ಗಾಂಧಿ ಯುವ ಜನಾಂಗಕ್ಕೆ ಪಕ್ಷದಲ್ಲಿ ಆದ್ಯತೆ ನೀಡಿದ್ದಾರೆ. ಬ್ಲಾಕ್, ಬೂತ್ ಮಟ್ಟದಲ್ಲಿ ಯುತ್ ಕಾಂಗ್ರೆಸ್ನ್ನುಸಂಘಟಿಸಿ.2028ರಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂದು ತಿಳಿಸಿದರು.
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನುಡಿದಂತೆ ನಡೆದಿದ್ದಾರೆ. ಉಚಿತ ಗ್ಯಾರೆಂಟಿಗಳಿಂದ 44 ಸಾವಿರ ಕೋಟಿ
ರೂ.ಬಡವರ ಮನೆಗಳಿಗೆ ತಲುಪಿದೆ. ಜಿಲ್ಲೆಯಲ್ಲಿ ನಾಲ್ಕು ಕೋಟಿ 36 ಲಕ್ಷ ರೂ.ಗಳನ್ನು ಶಕ್ತಿ ಯೋಜನೆಗೆ ನೀಡಿದೆ. ಬಿಜೆಪಿ ಮತ್ತುRSS ಅಂಬೇಡ್ಕರ್, ಸಂವಿಧಾನ, ಗಾಂಧಿಯನ್ನು ದೂರವಿಡುವ ಕೆಲಸ ಮಾಡುತ್ತಿರುವುದನ್ನು ಯೂತ್ ಕಾಂಗ್ರೆಸ್
ಸಹಿಸುವುದಿಲ್ಲ. ಕಾಂಗ್ರೆಸ್ ದೇಶ ಕಟ್ಟುವ ಕೆಲಸ ಮಾಡುತ್ತಿದೆ. ನಾಯಕರುಗಳಿಗೆ ಯುವ ಕಾಂಗ್ರೆಸ್ ಬುನಾದಿ ಎಂದು ಹೇಳಿದರು.ಜಾತಿ ಧರ್ಮಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿರುವ ಬಿಜೆಪಿ. ಸಾಮರಸ್ಯವನ್ನು ಕೆಡಿಸುತ್ತಿದೆ. ಇದರ ವಿರುದ್ದ ಯುವಕಾಂಗ್ರೆಸ್ ಜನತೆಯಲ್ಲಿ ಜಾಗೃತಿ ಮೂಡಿಸುವಂತೆ ಮನವಿ ಮಾಡಿದರು.ಕರ್ನಾಟಕ ಉಸ್ತುವಾರಿ ಹಿಮಾಚಲ ಪ್ರದೇಶದ ನಿಗಮ್ ಭಂಡಾರಿ ಮಾತನಾಡಿ ರಾಹುಲ್ಗಾಂಧಿ ಯೂತ್ಸ್ಗಳಿಗೆ ಅಧಿಕಾರನೀಡಿದ್ದಾರೆ.
ಕಾಂಗ್ರೆಸ್ ಪಕ್ಷದ ವಿಚಾರ, ತತ್ವ ಸಿದ್ದಾಂತಗಳನ್ನು ಯೂತ್ ಕಾಂಗ್ರೆಸ್ ಕಾರ್ಯಕರ್ತರು ಪ್ರತಿ ಮನೆ ಮನೆಗೆ ತಲುಪಿಸಿಶೋಷಿತರು, ರೈತರು, ಮಹಿಳೆಯರ ಪರವಾಗಿ ನಿಲ್ಲಬೇಕು. ದೇಶದ ಪ್ರಧಾನಿ ನರೇಂದ್ರಮೋದಿ ವರ್ಷಕ್ಕೆ ಎರಡು ಕೋಟಿ ಉದ್ಯೋಗನೀಡುವುದಾಗಿ ಯುವ ಸಮೂಹವನ್ನು ನಂಬಿಸಿ ವಂಚಿಸಿದ್ದಾರೆ. ಕೊಟ್ಟ ಭರವಸೆ ಯಾವುದು ಈಡೇರಿಲ್ಲ. ಕಾಂಗ್ರೆಸ್ ಪಕ್ಷಕೊಟ್ಟಮಾತನ್ನು ಉಳಿಸಿಕೊಂಡು ಐದು ಉಚಿತ ಗ್ಯಾರೆಂಟಿಗಳನ್ನು ನೀಡಿದೆ. ಕೇಂದ್ರ ಬಿಜೆಪಿ. ಸರ್ಕಾರದ ತಪ್ಪು ನಿರ್ಧಾರಗಳನ್ನು ಜನರಿಗೆಮನವರಿಕೆ ಮಾಡಿ ಜಾಗೃತಿಗೊಳಿಸಿ ಎಂದರು.ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕಾರೆಹಳ್ಳಿ ಉಲ್ಲಾಸ್ ಮಾತನಾಡುತ್ತ ರಾಹುಲ್ಗಾಂಧಿ ಪಕ್ಷದಲ್ಲಿ ಯುವಕರಿಗೆ ಪ್ರಾಧಾನ್ಯತೆನೀಡಿದ್ದಾರೆ. ಒಂದು ಲಕ್ಷಕ್ಕೂ ಹೆಚ್ಚು ಸದಸ್ಯರು ನೊಂದಣಿಯಾಗಿದ್ದಾರೆ. ಪ್ರತಿ ಬೂತ್ನಲ್ಲಿಯೂ ಯುವ ಕಾಂಗ್ರೆಸ್ ಶಾಖೆ ತೆರೆದು ಪಕ್ಷಸಂಘಟಿಸಿ ಮುಂಬರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಪಕ್ಷವನ್ನು
ಗೆಲ್ಲಿಸುವುದಾಗಿ ಭರವಸೆ ನೀಡಿದರು.
ಯೂತ್ ಕಾಂಗ್ರೆಸ್ನಲ್ಲಿ ಅಸಮಾಧಾನಗೊಂಡಿರುವವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲೆಯಲ್ಲಿ ಯುವ ಕಾಂಗ್ರೆಸ್
ಬಲಪಡಿಸುತ್ತೇವೆ. ನಿಗಮ ಮಂಡಳಿಗಳ ನೇಮಕದಲ್ಲಿ ಯುವ ಕಾಂಗ್ರೆಸ್ನ್ನು ಪರಿಗಣಿಸುವಂತೆ ರಾಜ್ಯಾಧ್ಯಕ್ಷ
ಮಂಜುನಾಥ್ಗೌಡರವರಲ್ಲಿ ವಿನಂತಿಸಿದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್ಪೀರ್ ಮಾತನಾಡಿ ಕಾಂಗ್ರೆಸ್ ಪಕ್ಷದ ಸಾಧನೆಗೆ ಬಿಜೆಪಿ.ಯಿಂದ ಚ್ಯುತಿ ಬರುತ್ತಿದೆ.ಸಂವಿಧಾನವನ್ನು ಬದಲಾಯಿಸಲು ಹೊರಟಿದ್ದಾರೆ. ರಾಹುಲ್ಗಾಂಧಿ ಭಾರತ್ ಜೋಡೋ ಯಾತ್ರೆಯಲ್ಲಿ ನಾಲ್ಕು ಸಾವಿರ ಕಿ.ಮೀ.ಪಾದಯಾತ್ರೆ ನಡೆಸಿ ಯುವಕರಲ್ಲಿ ಉತ್ಸಾಹ ತುಂಬಿದ್ದಾರೆ. ಉಚಿತ ಗ್ಯಾರೆಂಟಿಗಳಿಂದ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿಐದರಲ್ಲಿ ಪಕ್ಷ ಗೆದ್ದಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಮಾಜಿ ಶಾಸಕ ಎ.ವಿ.ಉಮಾಪತಿ ಮಾತನಾಡುತ್ತ ರಾಜೀವ್ಗಾಂಧಿ ಯುವ ಕಾಂಗ್ರೆಸ್ನಿಂದ ಬೆಳೆದು ದೇಶದ ಪ್ರಧಾನಿಯಾದರು.ಯೂತ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಂಜುನಾಥಗೌಡ ಚುನಾವಣೆಯಲ್ಲಿ ಐದು ಸಾವಿರ ಮತಗಳ ಅಂತರದಿಂದ ಗೆದ್ದಿದ್ದಾರೆ.
ಕಾಂಗ್ರೆಸ್ದೇಶದ ಶಕ್ತಿ. ಚುನಾವಣೆಯಲ್ಲಿ ಮನೆ ಮನೆಗೆ ಹೋಗಿ ಜನರನ್ನು ಕರೆ ತಂದು ಮತ ಹಾಕಿಸುವ ಕೆಲಸ ಮಾಡುವವರು ಯುವಕರು.ಇಂದಿರಾಗಾಂಧಿ ಪಕ್ಷಕ್ಕೆ ಶಕ್ತಿ ತುಂಬಿದ್ದಾರೆ. ಐದು ಉಚಿತ ಗ್ಯಾರೆಂಟಿಗಳಿಂದ ಬಡವರು ಬದುಕು ಕಟ್ಟಿಕೊಂಡಿದ್ದಾರೆಂದು ಹೇಳಿದರು.ವೈಶಾಖ್ ಯಾದವ್, ಸಂದೀಪ್, ಉಸ್ತುವಾರಿ ನಜ್ಮ, ಬಾಹುಬಲಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಿ.ಎನ್.ಮೈಲಾರಪ್ಪ,ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎನ್.ಡಿ.ಕುಮಾರ್, ಗ್ಯಾರೆಂಟಿ ಅನುಷ್ಟಾನಗಳ ಸಮಿತಿ ಅಧ್ಯಕ್ಷ ಆರ್.ಶಿವಣ್ಣ,ಡಾ.ದಾದಾಪೀರ್ ಸೇರಿದಂತೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರು, ಬೂತ್ ಅಧ್ಯಕ್ಷರುಗಳು ವೇದಿಕೆಯಲ್ಲಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



