ಬೆಂಗಳೂರು: ಕನ್ನಡ ಬಿಗ್ ಬಾಸ್ ಸೀಸನ್ 12ರ ಬಗ್ಗೆ ಹಲವಾರು ಕುತೂಹಲಗಳಿವೆ. ಈ ಕುತೂಹಲಗಳಿಗೆ ಇಂದು ಅಂತಿಮವಾಗಿ ಉತ್ತರ ಸಿಗಲಿದೆ. ಯಾಕಂದ್ರೆ ಇಂದು ಕಲರ್ಸ್ ಕನ್ನಡ ಬಿಗ್ ಬಾಸ್ ಸೀಸನ್ 12ರ ಬಗ್ಗೆ ಬಿಗ್ ಬಾಸ್ ತಂಡ ಸುದ್ದಿಗೋಷ್ಠಿ ಕರೆದಿದೆ. ಇಂದು ಸಂಜೆ 4 ಗಂಟೆಗೆ ಬಿಗ್ ಬಾಸ್ ಪ್ರೆಸ್ ಮೀಟ್ ನಡೆಯಲಿದೆ ಎಂಬ ಮಾಹಿತಿ ಅಧಿಕೃತ ಮೂಲಗಳಿಂದ ಲಭಿಸಿದೆ.ಹೌದು…ಬಿಗ್ ಬಾಸ್ ಕನ್ನಡ ಸೀಸನ್ 11ರ ಫೀವರ್ ಮುಗಿಯುವ ಹೊತ್ತಿಗೆ ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 12ರ ಕುರಿತು ಬಿಗ್ ಅಪ್ಡೇಟ್ ಸಿಕ್ಕಿದೆ. ಸದ್ಯದಲ್ಲೇ ಬಿಗ್ಬಾಸ್ 12 ಸೀಸನ್ ಶುರುವಾಗಲಿದೆಯಂತೆ. ಈಗಾಗಲೇ ಈ ಬಾರಿ ದೊಡ್ಮನೆಯೊಳಗೆ ಯಾರು ಹೋಗುತ್ತಾರೆ ಎಂಬ ಚರ್ಚೆ ಕಾವೇರಿದೆ. ಇದಕ್ಕಿಂತ ಮುಖ್ಯವಾಗಿ ಈ ಬಾರಿ ಬಿಗ್ ಬಾಸ್ ನ ಯಾರು ನಿರೂಪಣೆ ಮಾಡುತ್ತಾರೆ ಎಂಬ ಬಗ್ಗೆ ಭಾರಿ ಕುತೂಹಲ ಸೃಷ್ಟಿಸಿದೆ. ಯಾಕೆಂದರೆ ಕಳೆದ ಸೀಸನ್ನ ಅಂತ್ಯದ ವೇಳೆಗ ಕಿಚ್ಚ ಸುದೀಪ್ ಅವರು ಇದು ನನ್ನ ಕೊನೆ ಆವೃತ್ತಿ ಎಂದು ಹೇಳಿ ಶಾಕ್ ಕೊಟ್ಟಿದ್ರು. ಇದರ ಮಧ್ಯೆ ಕಳೆದ ಕೆಲವು ವಾರಗಳಿಂದ ಸುದೀಪ್ ಅವರೇ ಈ ಬಾರಿ ಕೂಡ ನಿರೂಪಕರಾಗಿ ಬರಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಹೀಗೆ ಬಿಗ್ ಬಾಸ್ ಕನ್ನಡ ಸೀಸನ್ 12ರ ಬಗ್ಗೆ ಅನೇಕ ಗೊಂದಲಗಳಿವೆ. ಈ ಎಲ್ಲ ಪ್ರಶ್ನೆಗಳಿಗೆ ಇಂದು ಉತ್ತರ ಸಿಗಲಿದೆ. ಸದ್ಯ ಇಂದು ನಡೆಯುವುದು ಬಿಗ್ ಬಾಸ್ ಕನ್ನಡ ಸೀಸನ್ 12ರ ಪ್ರೆಸ್ ಮೀಟ್ ಆಗಿರುತ್ತಾ…? ಅಥವಾ ಒಟಿಟಿನಾ? ಅನ್ನೋದರ ಬಗ್ಗೆ ಖಚಿತ ಮಾಹಿತಿ ಇಲ್ಲ. ಜೊತೆಗೆ ಈ ಬಾರಿ ನಿರೂಪಣೆ ಯಾರು ಮಾಡ್ತಾರೆ? ಸುದೀಪ್ ಅವರೇ ನಿರೂಪಕರಾಗಿ ಮುಂದುವರೆಯುತ್ತಾರ..? ಅನ್ನೋದು ರಿವೀಲ್ ಆದರೂ ಆಗಬಹುದು.
ಮೂಲಗಳ ಪ್ರಕಾರ, ಬಿಗ್ ಬಾಸ್ ಕನ್ನಡ ಸೀಸನ್ 12 ಶುರುವಾಗುವ ಮುಂಚೆ ಒಟಿಟಿ ಸೀಸನ್ ಬರಬಹುದು ಎಂಬ ಸುದ್ದಿ ಹರಿದಾಡುತ್ತಿದೆ. ಇವುಗಳಿಗೆ ಸ್ಪಷ್ಟನೆ ನೀಡಲು ಇಂದು ಪತ್ರಿಕಾಗೋಷ್ಠಿ ಆಯೋಜಿಸಲಾಗಿದೆ ಎನ್ನಲಾಗಿದೆ. ಅಂದಹಾಗೆ ಈಗಾಗಲೇ ಒಂದು ಸೀಸನ್ ಒಟಿಟಿ ಪ್ರಸಾರ ಕಂಡಿದೆ. 2022 ರಲ್ಲಿ ನಡೆದ ಒಟಿಟಿಯಲ್ಲಿ ಟಾಪ್ ನಾಲ್ಕು ಪರ್ಫಾರ್ಮ್ಸ್ ನೇರವಾಗಿ ಕಿರುತೆರೆ ಬಿಗ್ ಬಾಸ್ಗೆ ಎಂಟ್ರಿ ಪಡೆದಿದ್ದರು. ಸಾಮಾನ್ಯವಾಗಿ ಸೆಪ್ಟೆಂಬರ್ ಅಂತ್ಯದಲ್ಲಿ ಬಿಗ್ ಬಾಸ್ ಶುರುವಾಗಿ ಜನವರಿ, ಫೆಬ್ರವರಿ ಒಳಗಡೆ ಬಿಗ್ ಬಾಸ್ ಅಂತ್ಯ ಆಗಿರುತ್ತದೆ. ಒಟಿಟಿ ಸೀಸನ್ ಈಗ ಶುರುವಾದರೆ, ಸೆಪ್ಟೆಂಬರ್‌ನಲ್ಲಿ ಟಿವಿ ಸೀಸನ್ ಕೂಡ ಆರಂಭ ಆಗಬಹುದು.
ಇನ್ನು ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿಗಳನ್ನು ಗುರುತಿಸುವುದು ಅವರನ್ನು ಅಂತಿಮಗೊಳಿಸುವುದು, ಪ್ರೋಮೋ ಕಂಟೆಂಟ್ ಅಂತಿಮಗೊಳಿಸುವುದು, ಬಿಗ್ ಬಾಸ್ ಸೆಟ್ ನಿರ್ಮಾಣ ಇತ್ಯಾದಿ ಕಾರ್ಯಗಳನ್ನು ಈಗಾಗಲೇ ಆಯೋಜಕರು ಆರಂಭ ಮಾಡಿದ್ದಾರಂತೆ. ಕೆಲ ವರದಿಗಳ ಪ್ರಕಾರ, ಈ ಬಾರಿ ಬಿಗ್ ಬಾಸ್ ಮನೆ ಸೇರಲಿರುವ ಸಂಭಾವ್ಯ ಪಟ್ಟಿ ಈಗಾಗಲೇ ತಯಾರಾಗಿದೆ ಅನ್ನೋದು ಸದ್ಯದ ಖಚಿತ ಮಾಹಿತಿ. ಆದರೆ ಅದರಲ್ಲಿ ಫಿಲ್ಟರ್ ಮಾಡಿ ಫೈನಲ್ ಮಾಡುವ ಕಾರ್ಯಗಳು ನಡೆಯುತ್ತಿವೆ ಎನ್ನಲಾಗುತ್ತಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



