ಇಂದಿರಾಗಾಂಧಿರವರು ಅಧಿಕಾರಕ್ಕಾಗಿ ಸಂವಿಧಾನವನ್ನು ಅಮಾನತ್ತಿನಲ್ಲಿಟ್ಟು ಮಧ್ಯೆ ರಾತ್ರಿಯಲ್ಲಿ ರಾಷ್ಟ್ರಪತಿ ಗಳಿಂದ ಸಹಿ ಮಾಡಿಸಿ ತುರ್ತು ಪರಿಸ್ಥಿತಿ ಹೇರಿದರು.ಇದರ ಪರಿಣಾಮ ಇಡೀ ದೇಶವೇ ಬಂದಿಖಾನೆ ಯಾಯಿತು.. ಎಲ್ಲಾ ರಾಜಕೀಯ ಮುಖಂಡರುಗಳು ಜೈಲು ಸೇರಿದರು. ತುರ್ತು ಪರಿಸ್ಥಿತಿ ಹೇರಿದ್ದರ ಪರಿಣಾಮ 93 ಸಾವಿರ ಜನ ಜೈಲಿನಲ್ಲಿ ಇಲ್ಲಿರುವಂತಾಯಿತು ಎಂದು ವಿಧಾನ ಪರಿಷತ್ತಿನ ಮಾಜಿ ಸದಸ್ಯರಾದ ಡಾ. ಶಿವಯೋಗಿ ಸ್ವಾಮಿ ತಿಳಿಸಿದರು.ಚಿತ್ರದುರ್ಗ ನಗರದ ಜಿಲ್ಲಾ ಕ್ರೀಡಾ ಭವನದಲ್ಲಿ ಸೋಮವಾರ ನಡೆದ ಸಿಟಿಜನ್ಸ್ ಫಾರ್ ಸೋಶಿಯಲ್ ಜಸ್ಟೀಸ್ ಚಿತ್ರದುರ್ಗ ಹಾಗೂ ಭಾರತೀಯ ಜನತಾ ಪಾರ್ಟಿ ಸಂಯುಕ್ತಾಶ್ರಯದಲ್ಲಿ ನಡೆದ ತುರ್ತು ಪರಿಸ್ಥಿತಿ ಹೇರಿದ ಕಾಗ್ರೇಸ್ ಕರಾಳ ಇತಿಹಾಸಕ್ಕೆ 50 ವರ್ಷ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನವೆಂಬರ್ 26ನ್ನು ನರೇಂದ್ರ ಮೋದಿರವರು ಸಂವಿಧಾನ ಎಂದು ಘೋಷಣೆ
ಮಾಡಿದರು..
ಹಾಗೆಯೇ ಜೂನ್25ನ್ನು ಸಂವಿಧಾನ ಹತ್ಯೆ ದಿನ ಎಂದು ಘೋಷಣೆ ಮಾಡಬೇಕು.ಅನುರಾಗ ಠಾಕೂರ್‍ರವರುಕಾಂಗ್ರೆಸ್ ನವರು ಸಂವಿಧಾನವನ್ನು ಬಗ್ಗಲಲ್ಲಿ ಇಟ್ಟುಕೊಂಡು ಓಡಾಡುತ್ತೀರಿ ಅದರಲ್ಲಿ ಎಷ್ಟು ಪುಟಗಳಿವೆ ಎಂದು ಹೇಳಿಕೇಳಿದ್ದಸರಿಯಾಗಿದೆ.ಇತಿಹಾಸವನ್ನು ಗಮನದಲ್ಲಿಟ್ಟುಕೊಳ್ಳುವುದು ಅತ್ಯಂತ ಮುಖ್ಯವಾಗಿದೆ.. ತುರ್ತು ಪರಿಸ್ಥಿತಿಯಕಹಿ ಘಟನೆಯನ್ನುಮೆಲುಕು ಹಾಕುವುದು ಅಷ್ಟೇ ಮುಖ್ಯವಾಗಿದೆ.ಪರಮೇಶ್ವರ್ ರವರು ಹೇಳುತ್ತಾರೆ ತುರ್ತು ಪರಿಸ್ಥಿತಿ ಹೇರಿ 50 ವರ್ಷ ಕಳೆದಿವೆ ಅದನ್ನುಬಿಜೆಪಿಯವರು ಹೀಗೇಕೆ ನೆನಪು ಮಾಡಿಕೊಳ್ಳುತ್ತಾರೆ ಎಂದು. ಕಾಂಗ್ರೆಸ್ ಪಕ್ಷದವರು ದೇಶಕ್ಕೆ ಸ್ವತಂತ್ರ ತಂದು ಕೊಟ್ಟಿದ್ದು ನಾವುಒಂದು ಹೇಳುತ್ತಾರೆ.. ಸ್ವಾತಂತ್ರ ಬಂದು 75 ವರ್ಷ ಕಳೆದಿವೆ ಆದರೆ ಅವರು ಏಕೆ ನೆನಪು ಮಾಡಿಕೊಳ್ಳುತ್ತಾರೆ..?
1971 ರ ಮಧ್ಯಂತರ ಚುನಾವಣೆಯಲ್ಲಿ ಸಂದರ್ಭದಲ್ಲಿ ಅಕ್ರಮ
1971 ರ ಮಧ್ಯಂತರ ಚುನಾವಣೆಯಲ್ಲಿ ಸಂದರ್ಭದಲ್ಲಿ ಅಕ್ರಮ ಮಾಡಿದ್ದಾರೆ ಎಂದು ಅಲಹಾಬಾದ್ ಹೈಕೋರ್ಟ್ ನಲ್ಲಿ ಪಿಟಿಷನ್ಹಾಕಿದ್ದರ ಮೇರೆಗೆ ವಿಚಾರಣೆ ನಡೆದು 1975 ಜೂನ್-12 ರಂದು ಅಲಹಾಬಾದ್ ಹೈಕೋರ್ಟ್ ಇಂದಿರಾಗಾಂಧಿ ರವರು ಅಕ್ರಮಎಸಗಿದ್ದಾರೆ ಎಂದು ತೀರ್ಪು ನೀಡಿರುತ್ತದೆ. ಇಂದಿರಾಗಾಂಧಿರವರು ಪ್ರಧಾನಮಂತ್ರಿಯಾಗಿ ಮುಂದುವರಿಯುವಂತಿಲ್ಲ.. ಹಾಗೆಯೇಆರು ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂದು ತೀರ್ಪು ನೀಡಿರುತ್ತದೆ. ಅದರೂ ಸಹಾ ಇಂದಿರಾಗಾಂಧಿರವರುಅಧಿಕಾರಕ್ಕಾಗಿ ಸಂವಿಧಾನವನ್ನು ಅಮಾನತ್ತಿನಲ್ಲಿಟ್ಟು ಮಧ್ಯೆ ರಾತ್ರಿಯಲ್ಲಿ ರಾಷ್ಟ್ರಪತಿ ಗಳಿಂದ ಸಹಿ ಮಾಡಿಸಿ ತುರ್ತುಪರಿಸ್ಥಿತಿ
ಹೇರಿದರು ಎಂದರು.
ಕಾರ್ಯಗಾರವನ್ನು ಉದ್ಘಾಟಿಸಿ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಚಿತ್ರದುರ್ಗದ ಸಂಸದರಾದ ಗೋವಿಂದ ಎಂ
ಕಾರಜೋಳರವರು ಮಾತನಾಡಿ, 1975ರ ಜೂನ್-12 ರಂದು ಅಲಹಾಬಾದ್ ಹೈಕೋರ್ಟ್ ಇಂದಿರಾ ಗಾಂಧಿಯವರು
ಪ್ರಧಾನಮಂತ್ರಿಯಾಗಿ ಮುಂದುವರೆಯಲು ಅನರ್ಹ ಎಂದು ತೀರ್ಪು ನೀಡಿದ್ದರ ಹಿನ್ನೆಲೆಯಲ್ಲಿ ಸಂವಿಧಾನವನ್ನು ಅಮಾನತ್ತಿನಲ್ಲಿಟ್ಟುತುರ್ತು ಪರಿಸ್ಥಿತಿಯನ್ನು ಏರಿದರು.ನ್ಯಾಯಾಲಯದಲ್ಲಿ ಯಾವುದೇ ಪ್ರಶ್ನೆ ಮಾಡದೇ ಇರುವಪರಿಸ್ಥಿತಿಯನ್ನು, ಸಂವಿಧಾನವನ್ನುವಿರೂಪಗೊಳಿಸಿದ ಶ್ರೇಯಸ್ಸು ಇಂದಿರಾ ಗಾಂಧಿ ಅವರಿಗೆ ಸಲ್ಲುತ್ತದೆ.ಮೂಲ ಸಂವಿಧಾನದಲ್ಲಿ ಸಮಾಜವಾದ ಜಾತ್ಯಾತೀತ ಎಂಬ
ಪದಗಳನ್ನು ಅಂಬೇಡ್ಕರ್‍ರವರು ಸೇರಿಸಿರಲಿಲ್ಲ. ಸಮಾಜವಾದ, ಜಾತ್ಯಾತೀತ ಎಂಬ ಪದಗಳನ್ನು ಸೇರಿಸಿದ್ದು ಕಾಂಗ್ರೆಸ್
ನವರು.ಆರ್ ಎಸ್ ಎಸ್ ನ ಪ್ರಮುಖರಾದ ದತ್ತಾತ್ರೇಯ ಹೊಂಬಾಳೆ ರವರು ಸಮಾಜವಾದ, ಜಾತ್ಯಾತೀತ ಪದಗಳನ್ನು
ಸಂವಿಧಾನದಿಂದ ತೆಗೆಯುವಂತೆ ಹೇಳಿರುವುದಿಲ್ಲ ಬದಲಾಗಿ ಈ ಪದಗಳ ಅವಶ್ಯಕತೆ ಬಗ್ಗೆ ಪರಿಶೀಲನೆ ನಡೆಸಿ ಎಂದು
ಹೇಳಿರುತ್ತಾರೆ..ಆದರೆ ಇದನ್ನು ಕಾಂಗ್ರೆಸ್ ನವರು ತಿರುಚಿ ಹೇಳಿದ್ದಾರೆ ಎಂದರು.
ಭಾರತದ ಸಂವಿಧಾನವನ್ನು ಅತಿ ಹೆಚ್ಚು ಭಾರಿ ತಿದ್ದುಪಡಿ ಮಾಡಿರುವುದು ಕಾಂಗ್ರೆಸ್ ನವರು.. ಕಾಂಗ್ರೆಸ್ ಪಕ್ಷದವರು 96 ಬಾರಿತಿದ್ದುಪಡಿ ಮಾಡಿದ್ದಾರೆ.ದಲಿತರಿಗೆ ಮೀಸಲಾತಿ ಕೊಡುವ ಸಲುವಾಗಿ ಅಟಲ್ ಬಿಹಾರಿ ವಾಜಪೇಯಿರವರು ಸಂವಿಧಾನ ತಿದ್ದುಪಡಿಮಾಡಿದ್ದರು..ದಲಿತರಿಗೆ 10 ವರ್ಷದ ನಂತರ ಮೀಸಲಾತಿಯನ್ನು ಮುಂದುವರಿಸುವ ಸಲುವಾಗಿ ನರೇಂದ್ರ ಮೋದಿಯವರುಸಂವಿಧಾನವನ್ನು ಮಾಡಿದ್ದರು.ದೀನ ದಲಿತರ ಉತ್ತರಕ್ಕಾಗಿ ಸಂವಿಧಾನ ತಿದ್ದುಪಡಿ ಮಾಡಿದ್ದು ಬಿಜೆಪಿ.ಆದರೆ ಇಂದಿರಾಗಾಂಧಿಕುಟುಂಬದವರು ಅಧಿಕಾರ ಉಳಿಸಿಕೊಳ್ಳುವುದಕ್ಕೆ ಸಂವಿಧಾನ ತಿದ್ದುಪಡಿ ಮಾಡಿದ್ದಾರೆ ಎಂದು ಗೋವಿಂದ ಕಾರಜೋಳ ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ತಿಪ್ಪಾರೆಡ್ಡಿ, ಎಸ್.ಕೆ.ಬಸವರಾಜನ್, ವಿಧಾನಪರಿಷತ್ ಸದಸ್ಯರಾದ ನವೀನ್,
ಜಿಲ್ಲಾಧ್ಯಕ್ಷರಾದ ಕೆ.ಟಿ. ಕುಮಾರಸ್ವಾಮಿ, ನಿಕಟಪೂರ್ವ ಜಿಲ್ಲಾಧ್ಯಕ್ಷರಾದ ಮುರಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಂಪತ್ಕುಮಾರ್, ರಾಮದಾಸ್., ಸುರೇಶ್, ಹಾಗೂ ಕಾರ್ಯಕರ್ತರು ಮುಖಂಡರು ಉಪಸ್ಥಿತರಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



