ಚಿತ್ರದುರ್ಗ : ಸಂಸ್ಥೆ ನಿಮಗೆ ವಹಿಸಿರುವ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿ ನಗು ನಗುತ ಜೀವಿಸಿ ಮತ್ತೊಬ್ಬರ ಬಗ್ಗೆ ಟೀಕೆಮಾಡುವುದನ್ನು ಬಿಟ್ಟು ಉತ್ತಮ ಆರೋಗ್ಯ ಕಾಪಾಡಿಕೊಳ್ಳಿ ಎಂದು ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಮುಖ್ಯ
ಕಾರ್ಯನಿರ್ವಹಣಾಧಿಕಾರಿ ಎಂ.ಸಿ.ರಘುಚಂದನ್ ಸಿಬ್ಬಂದಿಗಳಿಗೆ ಕರೆ ನೀಡಿದರು.ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾದ ಡಾ.ಅನಂತರಾಮು ಹಾಗೂ ಎಂ.ಎಂ. ಪ್ರೌಢಶಾಲೆ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ ವಯೋ ನಿವೃತ್ತಿ ಹೊಂದಿದ ಪಾಪಣ್ಣ
ಇವರುಗಳಿಗೆ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ದೇವರಾಜ್ ಅರಸ್ ಶಿಕ್ಷಣ ಸಂಸ್ಥೆ ಹೆಮ್ಮರವಾಗಿ ಬೆಳೆದು ನಿಂತಿದೆಯೆಂದರೆ ಅದಕ್ಕೆ ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯ ಕಾರಣ.
ದೇಹಕ್ಕೆ ವಯಸ್ಸಾಗಬಹುದು. ಆದರೆ ಮನಸ್ಸಿಗೆ ಎಂದಿಗೂ ವಯಸ್ಸಾಗುವುದಿಲ್ಲ. ವೃತ್ತಿಯಲ್ಲಿರುವವರು ನಿವೃತ್ತಿಯಾಗಲೇಬೇಕು. ಒಬ್ಬವ್ಯಕ್ತಿಯ ವ್ಯಕ್ತಿತ್ವವನ್ನು ಮನಸ್ಸಿನಿಂದ ಅಳೆಯಬೇಕು. ರೂಪ, ಧರಿಸಿರುವ ಬಟ್ಟೆಯಿಂದಲ್ಲ. ಮತ್ತೊಬ್ಬರ ಬಗ್ಗೆ ಎಂದಿಗೂ ಹಗುರುವಾಗಿಮಾತನಾಡಬೇಡಿ. ಕೆಟ್ಟ ಆಲೋಚನೆಯಿಂದ ದೂರವಿದ್ದು, ಸಧೃಢ ಆರೋಗ್ಯ ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದರು.ದಾವಣಗೆರೆ ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ಡಾ.ಹೆಚ್.ವಿ.ವಾಮದೇವಪ್ಪ ಮಾತನಾಡಿ ಗುರುವಿಗೆ ಮಹತ್ವದಾದಸ್ಥಾನವಿದೆ. ಮಕ್ಕಳ ಭವಿಷ್ಯ ಶಿಕ್ಷಕರುಗಳ ಮೇಲೆ ನಿಂತಿದೆ. ಬ್ರಿಟೀಷರಿಗೆ ಇಂಗ್ಲಿಷ್ ವ್ಯಾಕರಣ ಕಲಿಸಿದ್ದು, ಭಾರತೀಯ ಶಿಕ್ಷಕರು.ಅಂತಹ ಪಾಂಡಿತ್ಯ ನಮ್ಮ ಶಿಕ್ಷಕರುಗಳಲ್ಲಿದೆ. ಪ್ರಾಚೀನ ಕಾಲದಿಂದಲೂ ಗುರು-ಶಿಷ್ಯರ ಬಾಂಧವ್ಯ ನೋಡುತ್ತಿದ್ದೇವೆ.
ದ್ರೋಣಾಚಾರ್ಯರಿಗೆ ಶಿಷ್ಯ ಏಕಲವ್ಯ ಹೆಬ್ಬೆರಳನ್ನು ಕತ್ತರಿಸಿ ನೀಡಿದ ಉದಾಹರಣೆಯಿದೆ. ಯಾರು ಎಷ್ಟೆ ದೊಡ್ಡ ಸ್ಥಾನ
ಅಲಂಕರಿಸಿದರೂ ಅದರ ಹಿಂದೆ ಗುರುವಿನ ಮಾರ್ಗದರ್ಶನವಿರುತ್ತದೆ ಎಂದು ಹೇಳಿದರು.ಶಿಷ್ಯ ತನಗಿಂತ ಎತ್ತರಕ್ಕೆ ಬೆಳೆದಾಗ ಮಾತ್ರ ಗುರುವಿಗೆ ಖುಷಿಯಾಗುತ್ತದೆ. ಬಡತನವಿರುವ ಕಾರಣಕ್ಕಾಗಿ ಯಾವುದೇವಿದ್ಯಾರ್ಥಿಗಳನ್ನು ತಿರಸ್ಕರಿಸಬಾರದು. ಎಲ್ಲರಲ್ಲಿಯೂ ಒಂದಲ್ಲ ಒಂದು ರೀತಿಯ ಪ್ರತಿಭೆಯಿರುತ್ತದೆ. ಗುರುತಿಸಿ ಪ್ರೋತ್ಸಾಹಿಸುವ
ಜವಾಬ್ದಾರಿ ಶಿಕ್ಷಕರುಗಳ ಮೇಲಿದೆ ಎಂದರು.ದಾವಣಗೆರೆ ವಿಶ್ವವಿದ್ಯಾನಿಲಯದ ಶಿಕ್ಷಣ ನಿಕಾಯ ಮುಖ್ಯಸ್ಥ ಡಾ.ಕೆ.ವೆಂಕಟೇಶ್, ಕೆ.ರುದ್ರಮುನಿ, ಗೋವಿಂದರಾಜು,ನಾಗಭೂಷಣ್ಶೆಟ್ಟಿ, ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಎಲ್ಲಾ ಪ್ರಾಂಶುಪಾಲರುಗಳು, ಬೋಧಕ-ಬೋಧಕೇತರ ವರ್ಗದವರು ಮತ್ತು ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



