ಬೆಂಗಳೂರು: ಬಿಗ್ ಬಾಸ್ ಕನ್ನಡ ಅಭಿಮಾನಿಗಳಿಗೆ ಸುದೀಪ್ ಕೊನೆಗೂ ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಸೀಸನ್ 11ರ ಮುಕ್ತಾಯದ ವೇಳೆಗೆ ಅನಿವಾರ್ಯ ಕಾರಣಗಳಿಂದ ಇನ್ನುಮುಂದೆ ನಿರೂಪಣೆ ಮಾಡುವುದಿಲ್ಲ ಎಂದು ಹೇಳಿ ಶಾಕ್ ನೀಡಿದ್ದ ಸುದೀಪ್ ಇದೀಗ ಮನಸ್ಸು ಬದಲಾಯಿಸಿದ್ದಾರೆ. ಸೀಸನ್ 12ರ ಕುರಿತು ಮಾಹಿತಿ ನೀಡಲು ನಿನ್ನೆ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸೀಸನ್ ಮಾತ್ರವಲ್ಲ ಮುಂದಿನ 4 ಅವಧಿಯನ್ನೂ ತಾವೇ ನಿರೂಪಿಸುವುದಾಗಿ ತಿಳಿಸಿದ್ದಾರೆ.
ಆ ಮೂಲಕ ಅಭಿಮಾನಿಗಳಿಗೆ ಸರ್‌ಪ್ರೈಸ್ ಗಿಫ್ಟ್ ನೀಡಿದ್ದಾರೆ.ಹೌದು, ಸೀಸನ್ 12 ಮಾತ್ರವಲ್ಲ 15 ಸೀಸನ್‌ವರೆಗೂ ಕಿಚ್ಚ ಸುದೀಪ್ ನಿರೂಪಣೆ ಮಾಡುವುದು ಪಕ್ಕಾ ಆಗಿದೆ. ಈ ಬಗ್ಗೆ ಅವರೇ ಮಾಹಿತಿ ನೀಡಿದ್ದಾರೆ. ಮುಂದಿನ 4 ಬಿಗ್ ಬಾಸ್ ಸೀಸನ್‌ಗಳನ್ನು ಹೋಸ್ಟ್ ಮಾಡುವ ಒಪ್ಪಂದಕ್ಕೆ ಸಹಿ ಹಾಕಿದ್ದಾಗಿ ತಿಳಿಸಿದ್ದಾರೆ. ಇನ್ನು ನಾನು ನನ್ನ ತಾಯಿ ಕಳೆದುಕೊಂಡ ಬಳಿಕ ಬಾರಿ ನೋವಿನಲ್ಲಿ ಇದ್ದೆ. ಜೊತೆಗೆ ಎರಡೇ ವಾರಕ್ಕೆ ಬಿಗ್ಬಾಸ್ ವೇದಿಕೆ ಹತ್ತಿ ನಿರೂಪಣೆ ಮಾಡಿದ್ದೆ. ಆಗ ಕೊಂಚ ಮನಸಿಗೆ ಬೇಸರ ಆಗಿತ್ತು.
ಆದ್ರೆ ನಮ್ಮ ತಾಯಿಗೆ ಬಿಗ್ಬಾಸ್ ಅಂದ್ರೆ ತುಂಬಾ ಇಷ್ಟ. ಅವರ ಇಷ್ಟ ಹಾಗೂ ನನ್ನ ಮನೆಯವರ ಒತ್ತಾಯದ ಮೇರೆಗೆ ನಾನು ಬಿಗ್ಬಾಸ್ ನಿರೂಪಣೆ ಮಾಡಲು ಒಪ್ಪಿದ್ದೇನೆ ಎಂದರು. ಇನ್ನು ಶೋಗೆ ವಿವಾದಿತರನ್ನು ಕರೆಸಬೇಡಿ ಎಂದು ಹೇಳುವುದಿಲ್ಲ. ಆದ್ರೆ ಕರೆಸಿದ ಮೇಲೆ ನಿಮಗೆ ಒಂದು ಕ್ಲಾರಿಟಿ ಇರಬೇಕು ಎಂದು ಸಲಹೆ ನೀಡಿದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



