ಚಿತ್ರದುರ್ಗ: ಮೇದೆಹಳ್ಳಿ ಗ್ರಾಮಕ್ಕೆ ಕಳ್ಳರ ಗ್ಯಾಂಗ್ ಎಂಟ್ರಿ ಕೊಟ್ಟಿದ್ದು ಸಿಸಿ ಟಿವಿಯಲ್ಲಿ ದೃಶ್ಯ ಸೆರೆಯಾಗಿದೆ.ಮಂಗಳವಾರ ಬೆಳಗಿನ ಜಾವ 5.17 ರ ಸಮಯದಲ್ಲಿ ಗ್ರಾಮಕ್ಕೆ ಕಳ್ಳರ ಗ್ಯಾಂಗ್ ಎಂಟ್ರಿ ಕೊಟ್ಟಿದ್ದಾರೆ. ಐದು ಮಂದಿ ಕಳ್ಳರು ಗ್ರಾಮಸ್ಥರನ್ನು ಕಂಡು ಸ್ಥಳದಿಂದ ಕಾಲು ಕಿತ್ತು ಓಡಿದ್ದಾರೆ. ಕೈನಲ್ಲಿ ಮಚ್ಚು ಹಿಡಿದ ಕಳ್ಳರು ಕಳ್ಳತನಕ್ಕೆ ಹೊಂಚು ಹಾಕಿ ಓಡಾಟ ನಡೆಸಿದ್ದು ಈ ವೇಳೆ ಕೆಲ ಗ್ರಾಮಸ್ಥರು ಕಳ್ಳರ ಚಲ ಚಲನವಲನವನ್ನ ಗಮನಿಸಿದರು, ಮನೆಯ ಲೈಟ್ಗಳನ್ನ ಆನ್ ಮಾಡಿದ್ ತಕ್ಷಣವೇ ಕಳ್ಳರು ಓಡಿ ಹೋಗಿದ್ದು ಈ ಒಂದು ದೃಶ್ಯಗಳು ಅಲ್ಲೆ ಮನೆಯೊಂದರಲ್ಲಿ ಅಳವಡಿಸಿದ್ದ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು ಕಳ್ಳರ ಎಂಟ್ರಿಯಿಂದಾಗಿ ಗ್ರಾಮಸ್ಥರು ಭಯದಲ್ಲಿ ವಾಸಿಸುವಂಥಾಗಿದೆ.
ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು ಗ್ರಾಮಕ್ಕೆ ಬಂದ ಚಿತ್ರದುರ್ಗದ ಗ್ರಾಮಾಂತರ ಠಾಣಾ ಪೊಲೀಸರು ಸಿಸಿ ಟಿವಿ ಪರಿಶೀಲನೆ ನಡೆಸಿದ್ದು ಕಳ್ಳರ ಪತ್ತೆಗಾಗಿ ಬಲೆ ಬೀಸಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



