ಚಿತ್ರದುರ್ಗ ನಗರದ ಎಸ್.ಆರ್.ಬಿ.ಎಂ.ಎಸ್ ರೋಟರಿ ಬಾಲಭವನದಲ್ಲಿ ಬುಧವಾರ ಸಂಜೆ ವಾರದ ಸಭೆಯಲ್ಲಿ ರೋಟರಿ ಕ್ಲಬ್,ಚಿತ್ರದುರ್ಗ ಇನ್ನರ್ ವೀಲ್ ಕ್ಲಬ್ ಆಫ್ ಚಿತ್ರದುರ್ಗ ಪೋರ್ಟ್ ಇವರ ಸಂಯುಕ್ತಾಶ್ರಯದಲ್ಲಿ ವೈದ್ಯರ, ಲೆಕ್ಕ ಪರಿಶೋಧಕರ ಹಾಗೂಪತ್ರಿಕಾ ದಿನಾಚರಣೆಯ ಅಂಗವಾಗಿ ಅವರ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿದವರನ್ನು ಸನ್ಮಾನಿಸುವ ಕಾರ್ಯಕ್ರಮವನ್ನುಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಡಾ.ಅರವಿಂದ ಪಾಟೀಲ್ ಮಾತನಾಡಿ, ರೋಟರಿ ಸಂಸ್ಥೆ ದೊಡ್ಡ ಸೇವಾ ಸಂಸ್ಥೆಗಳಲ್ಲಿ ಒಂದಾಗಿದ್ದು,
ಸಮಾಜದ ಉನ್ನತಿಗಾಗಿ ಕಾರ್ಯಗಳನ್ನು ಸಂಸ್ಥೆಯ ಮುಖ್ಯ ಗುರಿಯಾಗಿದೆ ಸಂಸ್ಥೆಯು ಉತ್ತಮ ರೀತಿಯಲ್ಲಿ ಹೆಚ್ಚು ಹೆಚ್ಚು ಸೇವಾಕಾರ್ಯಗಳನ್ನು ಮಾಡಲಿ ಎಂದು ಆಶಿಸಿ ರೋಟರಿ ಸಂಸ್ಥೆಯು ಸಮಾಜದ ಅಭಿವೃದ್ಧಿಗಾಗಿ ಹಲವಾರು ಕಾರ್ಯಕ್ರಮಗಳನ್ನುಹಮ್ಮಿಕೊಂಡಿದ್ದು ಅವುಗಳಲ್ಲಿ ಪಲ್ಸ್ ಪೋಲಿಯೋ ನಿರ್ಮೂಲನೆ, ಅಂಧತ್ವ ನಿರ್ಮೂಲನೆ, ಆರೋಗ್ಯ ಸುಧಾರಣೆ, ಶಿಕ್ಷಣಕ್ಕೆ ಆದ್ಯತೆಹಾಗೂ ಸ್ವಚ್ಛ ಸಮಾಜ ನಿರ್ಮಾಣ ಮಾಡುವುದು ಆಗಿದೆ ಎಂದರು.
ಮತ್ತೋರ್ವ ವೈದ್ಯರಾದ ಡಾ,ತೇಜಸ್ವಿ ಮಾತನಾಡಿ, ರೋಟರಿ ಕ್ಲಬ್ ಪ್ರಪಂಚದಲ್ಲಿ ಸೇವಾ ಮನೋಭಾವದಿಂದ ಕಾರ್ಯವನ್ನುಮಾಡುತ್ತಿದೆ. ಜನರಿಗೆ ಉತ್ತಮವಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಬಡವರಿಗೆ ಸಹಾಯವನ್ನು ಮಾಡುತ್ತಿದೆ. ರೋಟರಿ ಕ್ಲಬ್ ಸಂಸ್ಥೆಯಿಂದ ಲಕ್ಷಾಂತರ ಜನತೆ ಉಪಯೋಗವನ್ನು ಪಡೆಯುತ್ತಿದ್ದಾರೆ. ಯಾವುದೇ ಸ್ವಾರ್ಥ ಇಲ್ಲದೆ ಸೇವೆಯನ್ನು ಮಾಡುವಉದ್ದೇಶದಿಂದ ಈ ಸಂಸ್ಥೆ ಸ್ಥಾಪನೆಯಾಗಿದೆ ಎಂದರು.
ಲೆಕ್ಕ ಪರಿಶೋಧಕರಾದ ಕುಮುದಿನಿ ಮಾತನಾಡಿ, ರೋಟರಿ ಸಂಸ್ಥೆಯ ಕಾರ್ಯವೈಖರಿಯಿಂದ ಬಡ ಜನರಿಗೆ ಉಪಯೋಗವಾಗಿದೆ,ಹಣ ಇಲ್ಲದೆ ಲಕ್ಷಾಂತರ ಜನತೆಗೆ ಈ ಸಂಸ್ಥೆ ಸಹಾಯವಾಗಿದೆ. ಆರೋಗ್ಯ, ಶಿಕ್ಷಣ, ಮಹಿಳೆಯರಿಗೆ ಈ ಸಂಸ್ಥೆ ನೆರವಾಗಿದೆ ಎಂದರು.ಕಾರ್ಯಕ್ರಮದಲ್ಲಿ ಡಾ.ಅರವಿಂದ ಪಾಟೀಲ್, ಡಾ,ತೇಜಸ್ವಿ, ಲೆಕ್ಕ ಪರಿಶೋಧಕರಾದ ಕುಮುದಿನಿ ಹಾಗೂ ಪತ್ರಕರ್ತರಾದಮುತ್ತುಸ್ವಾಮಿಯವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ರೋಟರಿ ಕ್ಲಬ್‍ನ ಅಧ್ಯಕ್ಷರಾದ ಭಾಗ್ಯಲಕ್ಷ್ಮೀ, ಕಾರ್ಯದರ್ಶಿಶುಭಾ ರಾಮಸ್ವಾಮಿ, ಇನ್ನರ್ ವೀಲ್ ಕ್ಲಬ್ ಆಫ್ ಚಿತ್ರದುರ್ಗ ಪೋರ್ಟ್‍ನ ಅಧ್ಯಕ್ಷರಾದ ಉಮಾ ರಮೇಶ್ ರೋಟೇರಿಯನ್‍ಗಳಾದಯೋಗೀಶ್ ಸಹ್ಯಾದ್ರಿ, ಮದುಪ್ರಸಾದ್, ವಿರೇಶ್, ಗಾಯತ್ರಿ ಶಿವರಾಂ, ಸೂರ್ಯ ಪ್ರಕಾಶ್, ವೀರಭದ್ರಸ್ವಾಮಿ, ಜಯಶ್ರೀ ಷಾ,ಮಾಧುರಿ, ಶಿವರಾಂ, ಮೈಲೇಶ್ ಕುಮಾರ್, , ಚಂದ್ರಮೋಹನ್, ವೆಂಕಟೇಶ್, ಮಧು ಕುಮಾರ್ ಭಾಗವಹಿಸಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



