ಕನ್ನಡದ ಸೂಪರ್ ಹಿಟ್ ನಿರ್ದೇಶಕ ಪ್ರಶಾಂತ್ ನೀಲ್ ಟಾಲಿವುಡ್ ನಲ್ಲಿ ಬ್ಯುಸಿ ಆಗಿರೋದು ಗೊತ್ತೇಯಿದೆ. ಈಗಾಗಲೇ ಸಲಾರ್ ಸಿನಿಮಾ ಬಳಿಕ ಡ್ರ್ಯಾಗನ್ ಸಿನಿಮಾ ನಿರ್ದೇಶನ ಮಾಡ್ತಿದ್ದಾರೆ. ಮುಂದೆ ಸಲಾರ್ -2 ಮಾಡಬೇಕಿದೆ. ಆ ಬಳಿಕ ಅಲ್ಲು ಅರ್ಜುನ್ ಜೊತೆ ಸಿನಿಮಾ ಮಾಡುವುದು ಖಚಿತ ಎಂಬ ಮಾಹಿತಿ ಟಾಲಿವುಡ್ ನಿಂದ ಕೇಳಿ ಬರುತ್ತಿದೆ.ಸಲಾರ್ ಸಿನಿಮಾ ಬೆನ್ನಲ್ಲೇ ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್‌ನಲ್ಲಿ ಮತ್ತೊಂದು ಸಿನಿಮಾ ಬರುತ್ತದೆ ಎನ್ನಲಾಗಿತ್ತು. ಇದೇ ಸಿನಿಮಾ ಈಗ ಅಲ್ಲು ಅರ್ಜುನ್ ಪಾಲಾಗುತ್ತಿದೆ. ಈ ಬಗ್ಗೆ ಸ್ವತಃ ನಿರ್ಮಾಪಕ ದಿಲ್ ರಾಜು ಮಾಹಿತಿ ನೀಡಿದ್ದಾರೆ. ದೊಡ್ಡ ದೊಡ್ಡ ಸಿನಿಮಾಗಳನ್ನು ತಮ್ಮ ಬ್ಯಾನರ್‌ನಲ್ಲಿ ಅವರು ನಿರ್ಮಾಣ ಮಾಡುತ್ತಿದ್ದಾರೆ. ಮುಂದೆ ಮತ್ತಷ್ಟು ಬಿಗ್ ಬಜೆಟ್ ಚಿತ್ರಗಳಿಗೆ ಪ್ಲ್ಯಾನ್ ಮಾಡುತ್ತಿದ್ದಾರೆ.
KGF ಸರಣಿಯಿಂದ ಪ್ರಶಾಂತ್ ನೀಲ್ ಕ್ರೇಜ್ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದೆ. ‘ಸಲಾರ್’ ಸಿನಿಮಾ ಕೂಡ ಹಿಟ್ ಆಗಿ ಮತ್ತಷ್ಟು ನೇಮು ಫೇಮು ತಂದುಕೊಟ್ಟಿದೆ. ನೀಲ್ ಮೇಕಿಂಗ್ ಸ್ಟೈಲ್ ಮಾಸ್ ಪ್ರೇಕ್ಷಕರಿಗೆ ಇಷ್ಟವಾಗಿದೆ. ಮುಖ್ಯವಾಗಿ ಸ್ಕ್ರೀನ್ ಎಲೆವೇಶನ್ ಸೀನ್ಸ್ ಹೈಲೆಟ್ ಆಗುತ್ತಿದೆ. ಇನ್ನು ‘ಪುಷ್ಪ’ ಸರಣಿ ಸಿನಿಮಾಗಳಲ್ಲಿ ನಟಿಸಿ ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗೆದ್ದಿದ್ದಾರೆ. ಇವರಿಬ್ಬರು ಸೇರಿ ಒಟ್ಟಿಗೆ ಸಿನಿಮಾ ಮಾಡಿದರೆ ಬಾಕ್ಸಾಫೀಸ್ ಶೇಕ್ ಆಗುವುದು ಗ್ಯಾರಂಟಿ ಅನ್ನೋದು ಸಿನಿ ರಸಿಕರ ಮಾತು.ಸದ್ಯ ದಿಲ್ ರಾಜು ‘ತಮ್ಮುಡು’ ಎಂಬ ಸಿನಿಮಾ ನಿರ್ಮಿಸಿದ್ದಾರೆ. ಚಿತ್ರದ ಪ್ರಚಾರ ಕಾರ್ಯಗಳು ಭರದಿಂದ ಸಾಗುತ್ತಿದೆ. ಇದೇ ವೇಳೆ ತಮ್ಮ ಮುಂದಿನ ಸಿನಿಮಾಗಳ ಬಗ್ಗೆ ದಿಲ್ ರಾಜು ಮಾತನಾಡಿದ್ದಾರೆ. ಪ್ರಶಾಂತ್ ನೀಲ್ ಹಾಗೂ ಅಲ್ಲು ಅರ್ಜುನ್ ಕಾಂಬಿನೇಷನ್‌ನಲ್ಲಿ ರವಣಂ ಎಂಬ ಸಿನಿಮಾ ಬರುವುದು ಖಚಿತ ಎಂದಿದ್ದಾರೆ. ಈ ಹಿಂದೆ ಪ್ರಶಾಂತ್ ಹಾಗೂ ಪ್ರಭಾಸ್ ಕಾಂಬಿನೇಷನ್‌ನಲ್ಲಿ ‘ರವಣಂ’ ಎಂಬ ಸಿನಿಮಾ ಮಾಡುವುದಾಗಿ ದಿಲ್ ರಾಜು ಹೇಳಿದ್ದರು. ಈಗ ಹೀರೊ ಬದಲಾಗುತ್ತಿದ್ದಾರೆ.
ನಿರ್ಮಾಪಕರ ಮಾತು ಕೇಳಿ ಪ್ರಭಾಸ್ ಅಭಿಮಾನಿಗಳು ಬೇಸರಗೊಂಡಿದ್ಧಾರೆ. ‘ರಾವಣಂ’ ಚಿತ್ರದಲ್ಲಿ ತಮ್ಮ ನೆಚ್ಚಿನ ನಟ ನಟಿಸಬೇಕಿತ್ತು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಅಲ್ಲು ಅರ್ಜುನ್ ಅಭಿಮಾನಿಗಳಂತೂ ಈ ಸುದ್ದಿ ಕೇಳಿ ಖುಷಿಯಾಗಿದ್ದಾರೆ. ಟೈಟಲ್‌ನಿಂದಲೇ ಸಿನಿಮಾ ಕುತೂಹಲ ಮೂಡಿಸುತ್ತಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ಮಾಪಕ ದಿಲ್ ರಾಜು “ಪ್ರಶಾಂತ್ ನೀಲ್ ಹಾಗೂ ಅಲ್ಲು ಅರ್ಜುನ್ ಕಾಂಬಿನೇಷನ್‌ನಲ್ಲಿ ‘ರವಣಂ’ ಎಂಬ ಚಿತ್ರವನ್ನು ನಮ್ಮ ಬ್ಯಾನರ್‌ನಲ್ಲಿ ಮಾಡ್ತಿದ್ದೀವಿ. ಆದರೆ ಅದಕ್ಕೆ ಇನ್ನಷ್ಟು ಸಮಯ ಬೇಕು. ಪ್ರಶಾಂತ್ ನೀಲ್ ಸದ್ಯ 2 ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಜ್ಯೂ. NTR ಜೊತೆ ಒಂದು ಸಿನಿಮಾ ಮಾಡ್ತಿದ್ದಾರೆ, ಬಳಿಕ ‘ಸಲಾರ್-2’ ಮಾಡಬೇಕಿದೆ. ಆ ಬಳಿಕವೇ ‘ರವಣಂ’ ಸಿನಿಮಾ ಶುರು” ಎಂದು ಮಾಹಿತಿ ನೀಡಿದ್ದಾರೆ.ಅತ್ತ ಅಲ್ಲು ಅರ್ಜುನ್ ಹೊಸ ಸಿನಿಮಾ ಆರಂಭಿಸಿದ್ದಾರೆ. ಅಟ್ಲಿ ನಿರ್ದೇಶನದ ಚಿತ್ರದಲ್ಲಿ ಬನ್ನಿ ನಟಿಸಬೇಕಿದೆ. ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ತೆರೆಗೆ ಬರಲಿದೆ. ಚಿತ್ರಕ್ಕೆ ದೀಪಿಕಾ ಪಡುಕೋಣೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಪ್ರಭಾಸ್ ಬೇರೆ ಸಿನಿಮಾಗಳನ್ನು ಒಪ್ಪಿಕೊಂಡಿರುವುದರಿಂದ ‘ರವಣಂ’ ಸಿನಿಮಾ ಸ್ಟೈಲಿಶ್ ಸ್ಟಾರ್ ಪಾಲಾಗಿದೆ.ಸದ್ಯ ಪ್ರಭಾಸ್ ನಟನೆಯ ‘ರಾಜಾಸಾಬ್’ ಬಿಡುಗಡೆಗೆ ಸಜ್ಜಾಗುತ್ತಿದೆ. ನಂತರ ‘ಫೌಜಿ’ ಸಿನಿಮಾ ಚಿತ್ರೀಕರಣ ನಡೀತಿದೆ. ಆ ನಂತರ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ 3 ಸಿನಿಮಾಗಳಲ್ಲಿ ನಟಿಸಬೇಕಿದೆ. ಅದರಲ್ಲಿ ‘ಸಲಾರ್’ ಕೂಡ ಒಂದು. ಇನ್ನು ನಾಗ್ ಅಶ್ವಿನ್ ನಿರ್ದೇಶನದ ‘ಕಲ್ಕಿ 2898 AD’ ಚಿತ್ರದ ಸೀಕ್ವೆಲ್‌ನಲ್ಲಿ ಕೂಡ ನಟಿಸಬೇಕಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



