ಚಿತ್ರದುರ್ಗ: ಸಿಎಂ ಸಿದ್ದರಾಮಯ್ಯ ಅವರನ್ನು ಬೆಂಬಲಿಸುವುದು ಬಿಟ್ಟರೆ ಬೇರೆ ಆಯ್ಕೆಗಳು ಇಲ್ಲ ಎಂಬ ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿಕೆ ಅಸಹಾಯಕತೆ ಅಲ್ಲ ಅದು ಪಕ್ಷ ನಿಷ್ಠೆ ಎಂದು ಮಾಜಿ ಸಂಸದ ಡಿಕೆ ಸುರೇಶ್ ಹೇಳಿದ್ದಾರೆ. ಮಾಧ್ಯಮದವರ ಜೊತೆ ಮಾತನಾಡಿದ ಅವರು ಉಪ ಮುಖ್ಯಮಂತ್ರಿಗಳು ಪಕ್ಷಕ್ಕೆ ನಿಷ್ಠೆಯಿಂದ ಇದ್ದಾರೆ. ಅವರು ಹೈಕಮಾಂಡ್ ಹೇಗೆ ಹೇಳುತ್ತದೆ ಹಾಗೆ ಕೇಳುತ್ತಾರೆ. ಸಿದ್ದರಾಮಯ್ಯ ಸಿಎಂ ಆಗಿದ್ದಾರೆ ಆಗಲಿ. ಆಗಂತ ಯಾರು ಸಹ ಅಧಿಕಾರ ಬೇಡ ಅಂತೆಲ್ಲ ರಾಜಕೀಯ ಸನ್ಯಾಸಿಗಳು ಆಗಲ್ವಲ್ಲ ಎಂದು ಹೇಳಿದರು. ಇನ್ನು ಯಾರಿಗೆಲ್ಲ ಯೋಗ ಇದೆ ಅವರು ಸಿಎಂ ಆಗ್ತಾರೆ.
ಯಾಕೆ ಬಿಜೆಪಿಯಲ್ಲಿ ಸದಾನಂದ ಗೌಡ್ರು ಸಣ್ಣಪುಟ್ಟ ಅಧ್ಯಕ್ಷ ಸ್ಥಾನಕ್ಕೆ ಪರದಾಡುವಾಗ ಸಿಎಂ ಆಗಲಿಲ್ವೆ, ಬೊಮ್ಮಾಯಿ ಆಕಸ್ಮಿಕವಾಗಿ ಮುಖ್ಯಮಂತ್ರಿ ಪಟ್ಟ ಸಿಗಲಿಲ್ವೆ ಹಾಗೆ ಅವ್ರ ಯೋಗ ಬಂದಾಗ ಆಗ್ತಾರೆ.ಇತಿಹಾಸದಲ್ಲಿ ಎಂತೆಂತವರು ಸಿಎಂ ಆಗಿದ್ದಾರೆ.ಹಾಗೆ ಡಿಸಿಎಂ ಡಿಕೆ ಶಿವಕುಮಾರ್ ಸಹ ಸಿಎಂ ಆಗಬಹುದು. ಸಿದ್ದರಾಮಯ್ಯ, ಡಿಕೆಶಿ ಚೆನ್ನಾಗಿ ಇದ್ದಾರೆ, ಮುಂದೆಯೂ ಇರ್ತಾರೆ ಬೇರೆ ಪಕ್ಷದವರಿಗೆ ಮಾತ್ರ ಇವರಿಬ್ಬರು ಬೇರೆಯಾಗಿ ಕಾಣ್ತಾರೆ ಅಷ್ಟೇ. ನಮ್ಮ ಪಕ್ಷದಲ್ಲಿ ಒಗ್ಗಟ್ಟಿದೆ ಎಂದು ಹೇಳಿದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



