ಹೊಳಲ್ಕೆರೆ : ಮಳೆ ನೀರು ವ್ಯರ್ಥವಾಗಿ ಹರಿದು ಹೋಗಲು ಬಿಡದೆ ಕೋಟ್ಯಾಂತರ ರೂ.ಗಳ ವೆಚ್ಚದಲ್ಲಿ ತಾಲ್ಲೂಕಿನಾದ್ಯಂತ
ಚೆಕ್‍ಡ್ಯಾಂಗಳನ್ನು ಕಟ್ಟಿಸಿದ್ದೇನೆಂದು ಶಾಸಕಡಾ.ಎಂ.ಚಂದ್ರಪ್ಪ ಹೇಳಿದರು.ಚನ್ನಪಟ್ಟಣ ಗ್ರಾಮದಲ್ಲಿ 2 ಕೋಟಿ ರೂ.ವೆಚ್ಚದಲ್ಲಿ 2 ಕೆರೆಗಳ ಅಭಿವೃದ್ದಿ ಕಾಮಗಾರಿಗೆ ಭಾನುವಾರ ಭೂಮಿ ಪೂಜೆ ನೆರವೇರಿಸಿಮಾತನಾಡಿದರು.ಕಾಟಯ್ಯನಹಟ್ಟಿ ಕೆರೆಗೆ ನೀರು ತುಂಬಿಸಲು ಎತ್ತರವಾದ ಡ್ಯಾಮ್ ಕಟ್ಟಿಸಿದ್ದೇನೆ. ಬೋರ್‍ವೆಲ್‍ಗಳನ್ನು ಕೊರೆದಾಕ್ಷಣ ನೀರುಬರುವುದಿಲ್ಲ. ಚೆಕ್‍ಡ್ಯಾಂಗಳನ್ನು ಕಟ್ಟಿಸಿ ಮಳೆ ನೀರನ್ನು ತಡೆದರೆ ಬೋರ್‍ಗಳಲ್ಲಿ ನೀರಿನ ಮಟ್ಟ ಹೆಚ್ಚುತ್ತದೆ. ಒಂದು ಹನಿ ನೀರನ್ನುಸೂಳೆಕೆರೆಗೆ ಹೋಗಲು ಬಿಡುವುದಿಲ್ಲ. ಹಣ ಕೊಟ್ಟರೆ ಬಂಗಾರ, ಏನೆಲ್ಲಾ ಸಿಗುತ್ತದೆ. ಆದರೆ ವಿದ್ಯುತ್, ನೀರು ಸಿಗುವುದಿಲ್ಲ.
ಪ್ರತಿಗ್ರಾಮಗಳಲ್ಲಿ ಕೆರೆಗಳ ಅಭಿವೃದ್ದಿಪಡಿಸಿದ್ದೇನೆ. ರೈತರ ಕಷ್ಟ ಏನೆಂಬುದು ಗೊತ್ತಿದೆ. ಸ್ವಾಥಪರ ರಾಜಕಾರಣಿಯಾದವನಿಗೆ ಯಾರಕಷ್ಟವೂ ಗೊತ್ತಾಗುವುದಿಲ್ಲ. ಟಾರ್ ರಸ್ತೆ ತೆಗೆದು ಸಿ.ಸಿ.ರಸ್ತೆ ಮಾಡಿಸಿದ್ದೇನೆ. ತಾಲ್ಲೂಕಿನಾದ್ಯಂತ ಹದಿನೇಳು ಕಡೆ ವಿದ್ಯುತ್ ಪವರ್ಸ್ಟೇಷನ್ ಕಟ್ಟಿಸಿದ್ದೇನೆ. ಚಿಕ್ಕಜಾಜೂರಿನ ಕೋಟೆಹಾಳ್ ಸಮೀಪ ಐದುನೂರು ಕೋಟಿ ರೂ.ವೆಚ್ಚದಲ್ಲಿ ಹದಿಮೂರುವರೆ ಎಕರೆಜಾಗದಲ್ಲಿ ವಿದ್ಯುತ್ ಪವರ್ ಸ್ಟೇಷನ್ ನಿರ್ಮಾಣವಾಗಲಿದೆ. ಜೋಗ್‍ಫಾಲ್ಸ್‍ನಿಂದ ಇಲ್ಲಿಗೆ ನೇರವಾಗಿ ವಿದ್ಯುತ್ ಪೂರೈಕೆಯಾಗಲಿದೆಎಂದರು.
ಬ್ರಿಟೀಷರ ಕಾಲ ಹಳೆಯ ಶಾಲೆಗಳನ್ನು ಕೆಡವಿ ಹೊಸ ಶಾಲೆಗಳನ್ನು ಕಟ್ಟಿಸಿದ್ದೇನೆ. ಪಿ.ಯು.ಕಾಲೇಜು, ಡಿಗ್ರಿ ಕಾಲೇಜು, ಸ್ಟೇಡಿಯಂ,ಈಜುಕೊಳ, ಬಸ್‍ನಿಲ್ದಾಣ, ಹೈಟೆಕ್ ಆಸ್ಪತ್ರೆ ಕಟ್ಟಿಸಿದ್ದೇನೆ. ಮತದಾರರ ಋಣ ತೀರಿಸಬೇಕೆಂಬ ಜ್ಞಾನವಿಟ್ಟುಕೊಂಡು ಎಲ್ಲಿ ಏನುಅಭಿವೃದ್ದಿ ಕೆಲಸ ಕೈಗೊಂಡರೆ ಜನರಿಗೆ ಒಳ್ಳೆಯದಾಗುತ್ತದೆ ಎನ್ನುವ ಆಲೋಚನೆ ನನ್ನದು. ಚುನಾವಣೆಯಲ್ಲಿ ಮತ ಚಲಾಯಿಸುವಾಗಯಾರು ನಮ್ಮ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡುತ್ತಾರೆನ್ನುವ ಎಚ್ಚರಿಕೆಯಿಟ್ಟುಕೊಂಡು ಮತ ನೀಡಿ ಎಂದು ಜನತೆಯಲ್ಲಿ ಶಾಸಕಡಾ.ಎಂ.ಚಂದ್ರಪ್ಪ ಮನವಿ ಮಾಡಿದರು.
ಕಾಂಗ್ರೆಸ್ ಮುಖಂಡ ತಿಪ್ಪೇಸ್ವಾಮಿ ಮಾತನಾಡಿ ಶಾಸಕ ಡಾ.ಎಂ.ಚಂದ್ರಪ್ಪನವರು ತಾಲ್ಲೂಕಿನ ಏಳಿಗೆಗೆ ಹಗಲಿರುಳು
ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದಾರೆ. ಗುಣಮಟ್ಟದ ಸಿ.ಸಿ.ರಸ್ತೆ, ಕೆರೆ ಕಟ್ಟೆಗಳು, ಚೆಕ್‍ಡ್ಯಾಂಗಳ ನಿರ್ಮಾಣ ಮಾಡಿ ಹೈಟೆಕ್
ಆಸ್ಪತ್ರೆಗಳನ್ನು ಕಟ್ಟಿಸಿದ್ದಾರೆ. ರಾಜ್ಯದಲ್ಲಿ ಯಾವ ಶಾಸಕರು ಇಷ್ಟೊಂದು ಅಭಿವೃದ್ದಿಪಡಿಸಿಲ್ಲ. ಹಾಗಾಗಿ ಹೊಳಲ್ಕೆರೆ ಶಾಸಕ
ಡಾ.ಎಂ.ಚಂದ್ರಪ್ಪನವರು ಇತರೆ ಶಾಸಕರುಗಳಿಗೆ ಮಾದರಿ ಎಂದು ಗುಣಗಾನ ಮಾಡಿದರು.ಸ ರೈತರ ತೋಟಗಳು ಒಣಗಬಾರದೆಂದು ವಿದ್ಯುತ್ ಪವರ್ ಸ್ಟೇಷನ್‍ಗಳನ್ನು ಕಟ್ಟಿಸಿ ಕರೆಂಟ್ ಪೂರೈಸುತ್ತಿದ್ದಾರೆ. ಮುಂದಿನದಿನಗಳಲ್ಲಿ
ಇನ್ನು ಹೆಚ್ಚಿನ ಅಭಿವೃದ್ದಿಪಡಿಸಲಿ ಎಂದು ಶಾಸಕರಲ್ಲಿ ಮನವಿ ಮಾಡಿದರು.
ಅಗ್ರಹಾರ ಗ್ರಾಮ ಪಂಚಾಯಿತಿ ಸದಸ್ಯೆ ರೂಪ ಸುರೇಶ್ ಮಾತನಾಡುತ್ತ ಅಭಿವೃದ್ದಿಯ ಹರಿಕಾರ, ರಸ್ತೆ ರಾಜ ಎಂಬ ಬಿರುದು
ಪಡೆದಿರುವ ಶಾಸಕ ಡಾ.ಎಂ.ಚಂದ್ರಪ್ಪನವರು ಹೊಳಲ್ಕೆರೆ ತಾಲ್ಲೂಕಿಗೆ ಸಿಕ್ಕಿರುವುದು ನಮ್ಮೆಲ್ಲರ ಪುಣ್ಯ. ರಾಜ್ಯದಲ್ಲಿ ಕಾಂಗ್ರೆಸ್ಸರ್ಕಾರ ಅಧಿಕಾರದಲ್ಲಿದ್ದರು ವಿರೋಧ ಪಕ್ಷದಲ್ಲಿರುವ ಶಾಸಕರು ಕೋಟ್ಯಾಂತರ ರೂ.ಗಳ ಅನುದಾನ ತಂದು ಕ್ಷೇತ್ರದಲ್ಲಿ ಅಭಿವೃದ್ದಿಕಾಮಗಾರಿಗಳನ್ನು ಕೈಗೊಳ್ಳುತ್ತಿದ್ದಾರೆ. ಚಾಣಾಕ್ಷ, ಬುದ್ದಿವಂತ ಶಾಸಕರಾಗಿರುವ ಡಾ.ಎಂ.ಚಂದ್ರಪ್ಪನವರು ಕೆರೆಕಟ್ಟೆಗಳು, ಚೆಕ್ಡ್ಯಾಂಗಳನ್ನು ಕಟ್ಟಿಸಿದ್ದಾರೆಂದು ಹರ್ಷ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಓಂಕಾರ್, ಶಿವಕುಮಾರ್, ಕೃಷ್ಣಮೂರ್ತಿ, ಆನಂದಪ್ಪ, ಜಗದೀಶ್, ದಯಾನಂದ್, ಪ್ರವೀಣ್,ಉಮೇಶ್, ಪ್ರಾಣೇಶ್, ತಿಪ್ಪೇಸ್ವಾಮಿ ಹಾಗೂ ಗ್ರಾಮದ ಮುಖಂಡರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



