ನೆಲಮಂಗಲ: ಬಡತನ, ಪತಿಯ ಕುಡಿತದ ಚಟದಿಂದ ಕುಟುಂಬ ನಿರ್ವಹಣೆ, ಮಗುವಿನ ಆರೈಕೆ ಕಷ್ಟವಾಗಿ ಹೆತ್ತ ತಾಯಿಯೇ ಒಂದೂವರೆ ತಿಂಗಳ ಮಗುವನ್ನು ನೀರು ಕಾಯಿಸುವ ಹಂಡೆಯಲ್ಲಿ ಮುಳುಗಿಸಿ ಹತ್ಯೆ ಮಾಡಿದ ಹೃದಯವಿದ್ರಾವಕ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ನಡೆದಿದೆ. ವಿಶ್ವೇಶ್ವರಪುರದ ರೇಣುಕಾನಗರ ನಿವಾಸಿ ರಾಧಾಳನ್ನು ಬಂಧಿಸಲಾಗಿದೆ. ಒಂದೇ ಬಡಾವಣೆಯ ಪವನ್ ಕುಮಾರ್ ಹಾಗೂ ರಾಧಾ ಸ್ನೇಹ ಬೆಳೆದಿದ್ದು, ಬಳಿಕ, ವಿವಾಹವಾಗಿದ್ದರು. ಭಾನುವಾರ ಸಂಜೆ ಪತಿ ಪವನ್, ಕೆಲಸ ಮುಗಿಸಿ, ಮದ್ಯ ಸೇ ಮಾಡಿ ಮನೆಗೆ ಬಂದಿದ್ದ. ಮನೆ ಮುಂಭಾಗದ ಸ್ನೇಹಿತರ ಆಟೋದಲ್ಲಿ ಮಲಗಿದ್ದ. ಇದರಿಂದ ಬೇಸತ್ತ ಆಕೆ, ಸೋಮವಾರ ಬೆಳಗ್ಗೆ 4:30ರ ವೇಳೆ ಮಗುವನ್ನು ನೀರು ಕಾಯಿಸುವ ಹಂಡೆಯಲ್ಲಿ ಮುಳುಗಿಸಿದ್ದಾಳೆ. ಬಳಿಕ ಮಗುವಿಲ್ಲ. ಯಾರೋ ಇಬ್ಬರು ಬಂದು, ಮಗುವನ್ನು ಅಪಹರಿಸಿಕೊಂಡು ಹೋಗಿದ್ದಾರೆ ಎಂದು ನಾಟಕವಾಡಿದ್ದಾಳೆ. ಬಳಿಕ, ಪೊಲೀಸರು ಬಂದು, ಹುಡುಕಾಟ ನಡೆಸಿದಾಗ ಮಗುವಿನ ಪತ್ತೆಯಾಗಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



