ದಾವಣಗೆರೆ ಬಿಜೆಪಿಯೊಳಗಿನ ರೆಬೆಲ್ಸ್ ನಾಯಕರು ಬೆಳಗಾವಿ ಜಿಲ್ಲೆಯ ಗೋಕಾಕ್ ಬಳಿಕ ದಾವಣಗೆರೆಯಲ್ಲಿ ತಮ್ಮ ಒಗ್ಗಟ್ಟು ಪ್ರದರ್ಶನ ಮಾಡಿದ್ದು, ಈ ವೇಳೆ ಸಭೆ ನಡೆಸಿ ಪಕ್ಷದಲ್ಲಿನ ಪ್ರಸ್ತುತ ವಿದ್ಯಮಾನಗಳ ಕುರಿತು ಚರ್ಚೆ ನಡೆಸಿದ್ದಾರೆ.- ನಗರದಲ್ಲಿ ಹಮ್ಮಿಕೊಂಡಿದ್ದ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಅವರ 74ನೇ *ಜನ್ಮದಿನ ಸಮಾರಂಭದಲ್ಲಿ ಭಾಗವಹಿಸಲು ಆಗಮಿಸಿದ್ದ ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ಕುಮಾರ ಬಂಗಾರಪ್ಪ, ಮಾಜಿ ಸಂಸದ ಪ್ರತಾಪ್ ಸಿಂಹ, ಸಂಸದ ಬಿ.ವಿ.ನಾಯಕ್, ಶಾಸಕ ಬಿ.ಪಿ.ಹರೀಶ್ ಎಲ್ಲರೂ ಒಟ್ಟಾಗಿ ಸೇರಿ ದಾವಣಗೆರೆಯ ಹೋಟೆಲ್‌ವೊಂದರಲ್ಲಿ ಬೆಣ್ಣೆ ದೋಸೆ ಸವಿದರು.ಈ ಬಗ್ಗೆ ಮಾಜಿ ಶಾಸಕ ಎಲ್.ನಾಗೇಂದ್ರ ಮಾತನಾಡಿದ್ದು,
ದಾವಣಗೆರೆಯಲ್ಲಿಯಾವುದೇ ಭಿನ್ನಮತದ ಸಭೆ ನಡೆಸಿಲ್ಲ. ಮಾಜಿ ಸಂಸದರ ಜನ್ಮದಿನದ ಆಚರಣೆ ಮಾಡಲಾಗಿದೆ. ಇನ್ನು 10 ದಿನದೊಳಗೆ ರಾಜ್ಯದಲ್ಲಿ ಬಿಜೆಪಿ ಅಧ್ಯಕ್ಷರ ಘೋಷಣೆ ಆಗುತ್ತದೆ ಎಂದಿದ್ದಾರೆ.ಬಿಎಸ್‌ವೈ ಸಿಎಂ ಆಗಲು ಸಿದ್ದೇಶ್ವರ್ ಕಾರಣ- ಲಿಂಬಾವಳಿ: ನಗರದಲ್ಲಿ ಜಿ.ಎಂ. ಸಿದ್ದೇಶ್ವರ ಅಭಿಮಾನಿ ಬಳಗದಿಂದ ನಡೆದ ಸಿದ್ದೇಶ್ವರ್ ಅವರ 74ನೇ ಜನ್ಮದಿನ ಸಮಾರಂಭದಲ್ಲಿ ಮಾತನಾಡಿದ ಮಾಜಿ ಸಚಿವ ಲಿಂಬಾವಳಿ, ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಬಾಗಿಲನ್ನು ಬಡಿದಿದ್ದ ಬಿ.ಎಸ್ ಯಡಿಯೂರಪ್ಪ ಮಾಡುವ ಜವಾಬ್ದಾರಿ ಪಡೆದ ಜಿ.ಎಂ. ಸಿದ್ದೇಶ್ವರ್ ಅವರು ಅವರು ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ನಮ್ಮ ಪಕ್ಷವನ್ನು ಬಿಟ್ಟುಹೋದ ಯಡಿಯೂರಪ್ಪ ಅವರು ಮತ್ತೆ ಯಾಕೆ ಬಂದರೋ ಗೊತ್ತಾಗಿಲ್ಲ ಎಂದರು.
ಬಿಎಸ್ ವೈ ಸಿಎಂ ಆಗಲು ಸಿದ್ದೇಶ್ವರ್ ಕಾರಣ- ಲಿಂಬಾವಳಿ:
ನಗರದಲ್ಲಿ ಜಿ.ಎಂ.ಸಿದ್ದೇಶ್ವರ, ಅಭಿಮಾನಿ ಬಳಗದಿಂದ ನಡೆದ ಸಿದ್ದೇಶ್ವರ್ ಅವರ 74ನೇ ಜನ್ಮದಿನ ಸಮಾರಂಭದಲ್ಲಿ ಮಾತನಾಡಿದ ಮಾಜಿ ಸಚಿವ ಲಿಂಬಾವಳಿ, ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಬಾಗಿಲನ್ನು ಬಡಿದಿದ್ದ ಬಿ.ಎಸ್ .ಯಡಿಯೂರಪ್ಪ ಅವರನ್ನು ಸಿಎಂ ಮಾಡುವ ಜವಾಬ್ದಾರಿ ಪಡೆದ ಜಿ.ಎಂ. ಸಿದ್ದೇಶ್ವರ್ ಅವರು ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



