ಭೋಪಾಲ್ ಪೊಲೀಸ್ ಪೇದೆಯೊಬ್ಬ ಸತತ 12 ವರ್ಷಗಳ ಕಾಲ ಒಂದೂ ದಿನವೂ ಕೆಲಸ ಮಾಡದೆ ಇದ್ದ ರೂ ಬರೋಬ್ಬರಿ 35 ಲಕ್ಷ ರು. ಸಂಬಳ ಪಡೆದ ವಿಚಿತ್ರ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.ಅಭಿಷೇಕ್ ಎಂಬುವರು 2011 -12ನೇ ಸಾಲಿನಲ್ಲಿ ಭೋಪಾಲ್ ನಲ್ಲಿ ಕಾನ್ಸ್‌ಟೆಬಲ್ ಆಗಿ ಆಯ್ಕೆ ಯಾಗಿದ್ದರು. ಆದರೆ ಸೇವೆ ಸೇರ್ಪಡೆಗೆ ವಿಳಂಬ ಮಾಡಿದ್ದರು. ಹೀಗಾಗಿ ಅವರನ್ನು ಪ್ರತ್ಯೇಕವಾಗಿ ತರಬೇತಿಗೆಂದು ಕಳುಹಿಸಲಾಗಿತ್ತು. ಆದರೆ ತರಬೇತಿಗೆ ಬದಲು ಅಭಿಷೇಕ್ ತಮ್ಮ ಜಿಲ್ಲೆ ವಿಧಿಶಾಕ್ಕೆ ಮರಳಿದ್ದರು. ಬಳಿಕ ತಮ್ಮ ಗೈರಿನ ಕುರಿತು ಇಲಾಖೆಗೆ ಮಾಹಿತಿ ನೀಡುವ ಕೆಲಸವ ನ್ನಾಗಲೀ, ದೀರ್ಘಾವಧಿರಜೆಗೆ ಅನುಮತಿಯನ್ನೂ ಕೇಳಿರಲಿಲ್ಲ. ಕೆಲ ವರ್ಷಗಳ ಬಳಿಕ ತಮಗೆ ಅನಾರೋಗ್ಯ ಕಾಣಿಸಿಕೊಂಡಿದ್ದರಿಂದ ಗೈರಾಗಿದ್ದಾಗಿ ಇಲಾಖೆಗೆ ಮಾಹಿತಿರವಾನಿಸಿದ್ದರು. ಈ ಕುರಿತು ಯಾವುದೇ ಪರಿಶೀಲನೆ ಮಾಡದೇ ಸ್ವೀಕರಿಸಲಾಗಿತ್ತು. ಮಾಹಿತಿಹೀಗೆ ಕಳೆದ 12 ವರ್ಷಗಳಿಂದ ಪ್ರತಿ ತಿಂಗಳೂ ಅವರ ಖಾತೆಗೆ ವೇತನ ಜಮೆಯಾಗಿದೆ. ಆದರೆ 2023ರಲ್ಲಿ ಪೊಲೀಸ್ ಇಲಾಖೆಯ ದಾಖಲೆ ಮರುಪರಿಶೀಲನೆ ವೇಳೆ ಅಭಿಷೇಕ್ ಸೇವೆಗೆ ಸುದೀರ್ಘ ಗೈರಾಗಿರುವ ವಿಷಯ ಬೆಳಕಿಗೆ ಬಂದಿದೆ. ಇಲಾಖೆಯಿಂದ ನೋಟಿಸ್ ನೀಡಿದ ಬಳಿಕ ಅಭಿಷೇಕ್ ತಮ್ಮ ತಪ್ಪು ಒಪ್ಪಿಕೊಂಡಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



