ನವದೆಹಲಿ: ಕೊಲೆ ಪ್ರಕರಣದಲ್ಲಿ ದೋಷಿಯಾಗಿ ಯೆಮೆನ್ನಲ್ಲಿ ಮರಣದಂಡನೆಗೆ ಗುರಿಯಾಗಿರುವ ಕೇರಳದ ಪಾಲಕ್ಕಾಡ್ ಮೂಲದ ನರ್ಸ್ ನಿಮಿಷಾ ಪ್ರಿಯಾ ಅವರನ್ನು ಜು.16ರಂದು ನೇಣಿಗೇರಿಸಲು ಯೆಮೆನ್ನ ಸರ್ಕಾರ ನಿರ್ಧರಿಸಿದೆ.ಯೆಮೆನ್ ದೇಶದ ತಲಾಲ್ ಅಬ್ಬೋ ಮೆಹದಿ ಎನ್ನುವನರ ಕೊಲೆ ಪ್ರಕರಣದಲ್ಲಿ ನಿಮಿಷಾಗೆ ಗಲ್ಲು ಶಿಕ್ಷೆಯಾಗಿತ್ತು. ಅವರನ್ನು ಪಾರು ಮಾಡಲು ಸಾಮಾಜಿಕ ಕಾರ್ಯಕರ್ತ ಸ್ಯಾಮ್ಯುಯೆಲ್ ಜೆರೋಮ್ ಬಾಸ್ಕರನ್ ಎನ್ನುವವರು ಸರ್ಕಾರ ಮತ್ತು ತಲಾಲ್ ಕುಟುಂಬದ ಜತೆಗೆ ಮಾತುತೆ ನಡೆಸಿದ್ದರೂ ಫಲ ನೀಡಿರಲಿಲ್ಲ. ಈ ನಡುವೆಯೇ ಗಲ್ಲಿಗೆ ದಿನಾಂಕ ನಿಗದಿಯಾಗಿದೆ. 59ಪ್ರಕರಣ ಹಿನ್ನೆಲೆ: ಕೇರಳದ ಪಾಲಕ್ಕಾಡ್ನ ನಿಮಿಷಾ 2011ರಿಂದಯೆಮೆನ್ನಲ್ಲಿ ನರ್ಸ್ ಆಗಿದ್ದರು. ತಲಾಲ್ ಜೊತೆಗೆ ಸೇರಿ ಕ್ಲಿನಿಕ್ ಆರಂಭಿಸಿದ್ದಲು. ಆದರೆ ಇಬ್ಬರ ನಡುವೆ ಮೈಮನಸ್ಸು ಮೂಡಿತು. ಅಲ್ಲದೇ ಆಕೆಯ ಪಾಸ್ಪೊಂಟ್ಸ್ ೯ಗಳನ್ನು ಕೂಡ ವಸದಲ್ಲಿರಿಸಿಕೊಂಡಿದ್ದನು. ಮುನಿಸು ಕೊಲೆ ಹಂತಕ್ಕೆ ಹೋಗಿ 2017ರಲ್ಲಿ ನಿಮಿಷಾ ತಲಾಲ್ರ ಹತ್ಯೆ ಮಾಡಿದ್ದರು. ಹೈಕೋರ್ಟ್ 2020ರಲ್ಲಿ ಗಲ್ಲು ವಿಧಿಸಿತ್ತು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



