ಗಜ ಪ್ರಸವದ ಸಲುವಾಗಿ ಜಾರ್ಖಂಡ್‌ನ ಹಝಾರಿಬಾಗ್ ರೈಲು ನಿಲ್ದಾಣದ ಬಳಿ ಗೂಡ್ಸ್ ರೈಲನ್ನು ಎರಡು ತಾಸು ನಿಲ್ಲಿಸಿದ ಘಟನೆ ನಡೆದಿದೆ. ನಿಲ್ದಾಣದ ಬಳಿಯ ರೈಲು ಹಳಿಯ ಮೇಲೆ ಆನೆಯೊಂದು ಮರಿಗೆ ಜನ್ಮ ನೀಡುತ್ತಿತ್ತು. ಇದನ್ನು ಕಂಡು ಆನೆಯ ಪ್ರಸವಕ್ಕೆ ಏನೂ ತೊಂದರೆಯಾಗದಿರಲಿ ಎಂದು ರೈಲನ್ನು ಎರಡು ತಾಸು ನಿಲ್ಲಿಸಲಾಗಿದೆ. ಕಳೆದ ವಾರ ಈ ಘಟನೆ ನಡೆದಿದ್ದು ಅಲ್ಲಿನ ಅರಣ್ಯಾಧಿಕಾರಿಗಳ ಕ್ರಮದಿಂದ ‘ಗಜ ಪ್ರಸವ ಸುಗಮವಾಗಿದೆ. ಗರ್ಭಿಣಿ ಆನೆಯ ಬಗ್ಗೆ ಅರಿವಿದ್ದ ಅರಣ್ಯ ಇಲಾಖೆ ಸಿಬ್ಬಂದಿ ರೈಲು ಹಳಿಯ ಮೇಲೆ ಜನ್ಮ ನೀಡುವುದನ್ನು ಕಂಡು ತಕ್ಷಣ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
“ಆನೆ ಪ್ರಸವದ ಬಗ್ಗೆ ತಿಳಿದು ನಾವು ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದೆವು. ಈ ಮಾರ್ಗದ ಎಲ್ಲ ರೈಲುಗಳನ್ನು ತಕ್ಷಣ ನಿಲ್ಲಿಸಲು ಮನವಿ ಮಾಡಿದೆವು,”ಎನ್ನುತ್ತಾರೆ ಅರಣ್ಯಾಧಿಕಾರಿ ನಿತೀಶ್ ಕುಮಾರ್. ಈ ಬಗ್ಗೆ ‘ಎಕ್ಸ್’ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಅವರು, “ಮಾನವ- ಪ್ರಾಣಿಗಳ ಸಂಘರ್ಷದ ನಡುವೆ ಇದೊಂದು ಜಾರ್ಖಂಡ್ ಸೂಕ್ಷ್ಮತೆಯಿಂದ ಮರಿಯಾನೆಗೆ ಸುಗಮವಾಗಿ ಜನ್ಮ ಅರಣ್ಯಾಧಿಕಾರಿಗಳ ಆನೆಯೊಂದು ನೀಡಿದೆ. ಹೆರಿಗೆ ನಂತರ ಎರಡು ತಾಯಿ ಮಗು ಆನೆಗಳು ನಡೆದು ಹೋದ ಪರಿ ಎರಡು ಅದ್ಭುತ,” ಎಂದು ವಿಡಿಯೊಗಳನ್ನು ಹಂಚಿಕೊಂಡಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



