Close Menu
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
What's Hot

ನಿತ್ಯ ಭವಿಷ್ಯ – 04/04/2026 (ಶನಿವಾರ)

ನಿಧನ ವಾರ್ತೆ ಐ.ಎಂ.ಚಂದ್ರಶೇಖರಯ್ಯ

ಏಕನಾಥೇಶ್ವರಿ, ಬರಗೇರಮ್ಮ ದೇವಿ ವೈಭವದ ಮೆರವಣಿಗೆ

Facebook X (Twitter) Instagram
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
Facebook X (Twitter) Instagram
Times Of Bayaluseeme
  • ಮುಖಪುಟ
  • ಕ್ರೀಡೆ
  • ಕ್ರೈಂ
  • ಜಿಲ್ಲಾ ಸುದ್ದಿ
  • ರಾಜಕೀಯ
  • ರಾಜ್ಯ
  • ಸಿನಿಮಾ
Subscribe
Times Of Bayaluseeme
Home»ಜಿಲ್ಲಾ ಸುದ್ದಿ»ಚಿತ್ರದುರ್ಗ»ಶಿವಲಿಂಗಪ್ಪ ಕೊಲೆ ಪ್ರಕರಣ; ಹಂತಕರ ಬಂಧನಕ್ಕೆ ಆಗ್ರಹ
ಚಿತ್ರದುರ್ಗ

ಶಿವಲಿಂಗಪ್ಪ ಕೊಲೆ ಪ್ರಕರಣ; ಹಂತಕರ ಬಂಧನಕ್ಕೆ ಆಗ್ರಹ

ಮೃತ್ಯುಂಜಯಾಚಾರ್ ಬಿBy ಮೃತ್ಯುಂಜಯಾಚಾರ್ ಬಿApril 3, 2026Updated:April 3, 2026No Comments3 Mins Read
Share WhatsApp Facebook Twitter Threads Telegram
Follow Us
Facebook Instagram
Share
WhatsApp Twitter Facebook Telegram

ಶಿವಲಿಂಗಪ್ಪ ಕೊಲೆ ಪ್ರಕರಣ; ಹಂತಕರ ಬಂಧನಕ್ಕೆ ಆಗ್ರಹ

ಚಿತ್ರದುರ್ಗ : ಸಣ್ಣ ಸಮಾಜದಲ್ಲಿ ದೊಡ್ಡದಾಗಿ ಬೆಳೆದಿದ್ದ ಬಿ.ಶಿವಲಿಂಗಪ್ಪನ ಏಳಿಗೆಯನ್ನು ಸಹಿಸದೆ ಬರ್ಬರವಾಗಿ ಹತ್ಯೆಗೈದಿದ್ದು, ವೇಗವಾಗಿ ತನಿಖೆ ನಡೆಸಿ ಹಂತಕರನ್ನು ಬಂಧಿಸಿ ಉಗ್ರ ಶಿಕ್ಷೆಗೊಳಪಡಿಸುವಂತೆ ಜಿಲ್ಲಾ ಮಡಿವಾಳರ ಸಂಘದ ಗೌರವಾಧ್ಯಕ್ಷ ಡಾ.ವಿ.ಬಸವರಾಜ್ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದರು.

 

ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಾನವೀಯ ಗುಣ, ಸಮಾಜದ ಬಗ್ಗೆ ಕಳಕಳಿಯಿಟ್ಟುಕೊಂಡಿದ್ದ ಬಿ.ಶಿವಲಿಂಗಪ್ಪನವರ ಸಾವು ಕುಟುಂಬಕ್ಕಷ್ಟೆ ಅಲ್ಲ ಮಡಿವಾಳ ಸಮಾಜಕ್ಕೆ ಅತೀವ ನೋವುಂಟು ಮಾಡಿದೆ. ಇಂತಹ ಹೀನಾಯ ಕೃತ್ಯಗಳು ನಿಲ್ಲಬೇಕಾದರೆ ಕೊಲೆಗಡುಕರಿಗೆ ಶಿಕ್ಷೆಯಾಗಬೇಕು. ಮಡಿವಾಳ ಜನಾಂಗ ಸಣ್ಣ ಸಮಾಜ. ದುಃಖತಪ್ತ ಕುಟುಂಬಕ್ಕೆ ನ್ಯಾಯ ಸಿಗಬೇಕು. ಅಲ್ಲಿಯವರೆಗೂ ನಾವುಗಳು ಹೋರಾಟಕ್ಕೆ ಸಿದ್ದರಿದ್ದೇವೆ. ತಪ್ಪಿತಸ್ಥರನ್ನು ಬಂಧಿಸುವಂತೆ ಸೋಮವಾರದವರೆಗೂ ಗಡುವು ನೀಡುತ್ತೇವೆ. ನಂತರ ಜಿಲ್ಲಾಧಿಕಾರಿ ಕಚೇರಿ ಎದುರು ದೊಡ್ಡ ಪ್ರತಿಭಟನೆ ನಡೆಸುತ್ತೇವೆಂದು ಹೇಳಿದರು.

 

ಸಮಾಜಕ್ಕೆ ಬದುಕನ್ನು ಮುಡುಪಾಗಿಟ್ಟಿದ್ದ ಬಿ.ಶಿವಲಿಂಗಪ್ಪನವರು ಕಷ್ಟದಲ್ಲಿದ್ದವರಿಗೆ ಸದಾ ಮಿಡಿಯುತ್ತಿದ್ದರು. ಒಮ್ಮೆ ಅವರ ನಿವಾಸದಲ್ಲಿ ಬುದ್ದ, ಧಮ್ಮ ಸಂವಾದವನ್ನು ಇಟ್ಟುಕೊಂಡಿದ್ದರು. ಅದನ್ನು ನೋಡಿದಾಗ ನಮಗೆ ಇವರಲ್ಲಿ ಎಂತಹ ಜಾತ್ಯತೀತ ಗುಣವಿದೆ ಅನ್ನಿಸಿತು. ವ್ಯಾಪಾರ ವ್ಯವಹಾರದಲ್ಲಿ ಬಹಳ ವೇಗವಾಗಿ ಬೆಳೆದ ಇವರ ಶ್ರೇಯಸ್ಸನ್ನು ಕಂಡು ಸಹಿಸಲಾಗದವರು ಹತ್ಯೆಗೆ ಕೈಹಾಕಿರಬಹುದೆಂಬ ಅನುಮಾನವಿದೆ. ಪೊಲೀಸರ ನ್ಯಾಯಯುತ ತನಿಖೆಯಿಂದ ಸತ್ಯಾಂಶ ಹೊರ ಬರಬೇಕೆಂದು

ಡಾ.ವಿ.ಬಸವರಾಜ್ ಆಗ್ರಹಿಸಿದರು.

 

ಸಾಮಾಜಿಕ ಸಂಘರ್ಷ ಸಮಿತಿಯ ಪ್ರೊ.ಸಿ.ಕೆ.ಮಹೇಶ್ ಮಾತನಾಡಿ ಯಾವುದೇ ಒಂದು ಉದ್ಯಮದಲ್ಲಿ ವಿರೋಧಿಗಳು, ಶತ್ರುಗಳು ಹುಟ್ಟುಕೊಳ್ಳುವುದು ಸಹಜ. ಕೆಳಹಂತದವರು ಮೇಲೆ ಬಂದಾಗ ಇಂತಹ ಕೃತ್ಯಗಳು ನಡೆಯುತ್ತಿರುತ್ತವೆ. ಅದೇ ಮೇಲ್ವರ್ಗದಲ್ಲಿ ಯಾರಾದರೂ ಉನ್ನತ ಮಟ್ಟಕ್ಕೆ ಹೋದಾಗ ಹತ್ಯೆಗಳಾಗುವುದು ಕಡಿಮೆ. ಬಿ.ಶಿವಲಿಂಗಪ್ಪನವರ ಹತ್ಯೆ ಮಡಿವಾಳ ಸಮಾಜ ಹಾಗೂ ಕುಟುಂಬದವರಲ್ಲಿ ಭಯ ಮೂಡಿಸಿದೆ. ಹತ್ಯೆಯ ಕುರಿತು ನಕಾರಾತ್ಮಕ ಮಾತುಗಳು ಅಲ್ಲಲ್ಲಿ ಕೇಳಿ ಬರುತ್ತವೆ. ಅದಕ್ಕೆ ನೀವುಗಳ್ಯಾರು ಕಿವಿಗೊಡಬೇಡಿ. ಚಿಕ್ಕವರಿಂದ ಹಿಡಿದು ದೊಡ್ಡವರತನಕ ಎಲ್ಲರನ್ನು ಗೌರವಿಸುವ ಗುಣವಿಟ್ಟುಕೊಂಡಿದ್ದ ಶಿವಲಿಂಗಪ್ಪನವರ ಹತ್ಯೆ ಹಿಂದೆ ಯಾರ ಕೈವಾಡವಿದೆ ಎನ್ನುವುದನ್ನು ಪೊಲೀಸರು ಪತ್ತೆ ಹಚ್ಚುವಂತೆ ಮನವಿ ಮಾಡಿದರು.

 

ಮಡಿವಾಳರ ಸಂಘದ ಜಿಲ್ಲಾಧ್ಯಕ್ಷ ಬಿ.ರಾಮಜ್ಜ ಮಾತನಾಡುತ್ತ ಮೆದೆಹಳ್ಳಿ ರಸ್ತೆಯಲ್ಲಿ ಫರ್ಟಿಲೈಸರ್ ಅಂಗಡಿಯಿಟ್ಟುಕೊಂಡು ಹಳ್ಳಿಯ ರೈತರಿಗೆ ಸದಾ ಸ್ಪಂದಿಸುತ್ತಿದ್ದ

ಬಿ.ಶಿವಲಿಂಗಪ್ಪನವರ ಸಾವು ನಮ್ಮನ್ನೆಲ್ಲಾ ಚಿಂತೆಗೀಡು ಮಾಡಿದೆ. ಆತನಲ್ಲಿದ್ದ ಅನ್ಯೋನ್ಯತೆಯ ಗುಣವನ್ನು ಸಹಿಸದವರಿಂದ ಈ ಕೃತ್ಯ ನಡೆದಿರಬಹುದೆಂಬ ಶಂಕೆಯಿದೆ. ಕೇವಲ ಮಡಿವಾಳ ಸಮಾಜಕ್ಕಷ್ಟೆ ಅಲ್ಲ. ಬೇರೆ ಎಲ್ಲಾ ಜಾತಿ ಧರ್ಮದವರೊಡನೆ ಸಹೋದರತ್ವವಿಟ್ಟುಕೊಂಡಿದ್ದರೆಂದು ಗುಣಗಾನ ಮಾಡಿದರು.

 

ಹತ್ಯೆಕೋರರನ್ನು ಶೀಘ್ರವೇ ಬಂಧಿಸಿ ದುಃಖತಪ್ತ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ಇಲ್ಲವಾದಲ್ಲಿ ಹೋರಾಟಕ್ಕೆ ಇಳಿಯಬೇಕಾಗುತ್ತದೆಂದು ಎಚ್ಚರಿಸಿದರು.

 

ಮಾದಿಗ ಸಾಂಸ್ಕೃತಿಕ ಸಂಘದ ಪ್ರಧಾನ ಕಾರ್ಯದರ್ಶಿ ಹಿರೇಹಳ್ಳಿ ಮಲ್ಲಿಕಾರ್ಜುನ್ ಮಾತನಾಡಿ ತಪ್ಪು ಮಾಡಿದವರಿಗೆ ಶಿಕ್ಷೆ ನೀಡಲು ಕಾನೂನಿದೆ. ಆದರೆ ಬಿ.ಶಿವಲಿಂಗಪ್ಪನವರ ಹತ್ಯೆಯಾಗಿರುವುದು ನಾಗರೀಕ ಸಮಾಜಕ್ಕೆ ಭಯ ಮೂಡಿಸಿದೆ. ಪೊಲೀಸರು ನಿಸ್ಪಕ್ಷಪಾತ ತನಿಖೆ ನಡೆಸಿ ಹತ್ಯೆಕೋರರನ್ನು ಬಂಧಿಸಿ ಉಗ್ರ ಶಿಕ್ಷೆಗೆ ಗುರಿಪಡಿಸಬೇಕೆಂದು ಒತ್ತಾಯಿಸಿದರು.

 

ಮಡಿವಾಳ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಆರ್.ಮಂಜುನಾಥ್, ಮೊಳಕಾಲ್ಮುರು ತಾಲ್ಲೂಕು ಅಧ್ಯಕ್ಷ ವಿರುಪಾಕ್ಷಪ್ಪ, ಲೋಕೇಶ್ವರಪ್ಪ ಶ್ರೀರಾಂಪುರ, ಹೊಸದುರ್ಗ ತಾಲ್ಲೂಕು ಅಧ್ಯಕ್ಷ ರಾಮಕೃಷ್ಣ, ಹೊಳಲ್ಕೆರೆ ತಾಲ್ಲೂಕು ಅಧ್ಯಕ್ಷ ದ್ರುವಕುಮಾರ್, ಉಪಾಧ್ಯಕ್ಷ ಬಸವರಾಜ್, ಚಳ್ಳಕೆರೆ ತಾಲ್ಲೂಕು ಅಧ್ಯಕ್ಷ ನಾಗಣ್ಣ, ಮಂಜುನಾಥ್, ಟಿ.ರುದ್ರಮುನಿ, ರಮೇಶ್, ಮಹಿಳಾ ಘಟಕದ ಅಧ್ಯಕ್ಷೆ ರಂಗಮ್ಮ, ಪ್ರಕಾಶ್ ಎಸ್.ಜೆ.ಎಂ.ಐ.ಟಿ. ರಮೇಶ್ ಜಗಳೂರು, ಸಾಮಾಜಿಕ ಸಂಘರ್ಷ ಸಮಿತಿಯ ಟಿ.ರಾಮು, ರಾಮುಗೋಸಾಯಿ, ಸಿ.ಎ.ಚಿಕ್ಕಣ್ಣ, ಸುಧಾಕರ್ ಇನ್ನು ಅನೇಕರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

 

++++

 

 

 

ಮಡಿವಾಳರ ಸಂಘ, ಸಾಮಾಜಿಕ ಸಂಘರ್ಷ ಸಮಿತಿ ಪ್ರತಿಭಟನೆ

 

 

ಚಿತ್ರದುರ್ಗ : ಮಡಿವಾಳ ಸಮಾಜದ ಬಿ.ಶಿವಲಿಂಗಪ್ಪನವರನ್ನು ಭೀಕರವಾಗಿ ಹತ್ಯೆಗೈದಿರುವುದನ್ನು ಖಂಡಿಸಿ ಜಿಲ್ಲಾ ಮಡಿವಾಳರ ಸಂಘ ಹಾಗೂ ಸಾಮಾಜಿಕ ಸಂಘರ್ಷ ಸಮಿತಿಯಿಂದ ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿ ಹೆಚ್ಚುವರಿ ರಕ್ಷಣಾಧಿಕಾರಿ ಡಾ.ಆರ್.ಶಿವಕುಮಾರ್ ಗೆ ಮನವಿ ಸಲ್ಲಿಸಲಾಯಿತು.

 

ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ರಕ್ಷಣಾಧಿಕಾರಿ ಕಚೇರಿಗೆ ತೆರಳಿದ ಪ್ರತಿಭಟನಾಕಾರರು ದಾರಿಯುದ್ದಕ್ಕೂ ಹತ್ಯೆಕೋರರ ವಿರುದ್ದ ಧಿಕ್ಕಾರಗಳನ್ನು ಕೂಗಿದರು.

ಮಡಿವಾಳ ಜನಾಂಗಕ್ಕೆ ಸೇರಿದ ಬಿ.ಶಿವಲಿಂಗಪ್ಪನವರು ರಾಜಕಾರಣ ಹಾಗೂ ಉದ್ಯಮದಲ್ಲಿ ವೇಗವಾಗಿ ಬೆಳೆಯುತ್ತಿರುವುದನ್ನು ಕಂಡು ಸಹಿಸದವರಿಂದ ಹತ್ಯೆಯಾಗಿರಬಹುದೆಂಬ ಅನುಮಾನವಿದ್ದು, ತನಿಖೆ ನಡೆಸಿ ಶೀಘ್ರವೇ ಹಂತಕರನ್ನು ಬಂಧಿಸಿ ಕಠಿಣ ಶಿಕ್ಷೆಗೊಳಪಡಿಸಿದಾಗ ದುಃಖತಪ್ತ ಕುಟುಂಬಕ್ಕೆ ನ್ಯಾಯ ಒದಗಿಸಿದಂತಾಗುತ್ತದೆಂದು ಪ್ರತಿಭಟನೆಯ ಮುಂದಾಳತ್ವ ವಹಿಸಿದ್ದ ಜಿಲ್ಲಾ ಮಡಿವಾಳರ ಸಂಘದ ಗೌರವಾಧ್ಯಕ್ಷ ಡಾ.ವಿ.ಬಸವರಾಜ್ ಹೆಚ್ಚುವರಿ ರಕ್ಷಣಾಧಿಕಾರಿಯವರನ್ನು ಒತ್ತಾಯಿಸಿದರು.

 

ಮನವಿ ಸ್ವೀಕರಿಸಿದ ಹೆಚ್ಚುವರಿ ರಕ್ಷಣಾಧಿಕಾರಿ ಡಾ.ಆರ್.ಶಿವಕುಮಾರ್, ಮೃತದೇಹ ಪತ್ತೆಯಾದ ಜಾಗಕ್ಕೆ ಜಿಲ್ಲಾ ರಕ್ಷಣಾಧಿಕಾರಿ, ನಾನು ಮತ್ತು ಡಿವೈಎಸ್ಪಿ. ಭೇಟಿ ನೀಡಿದೇವೆ. ಹಂತಕರ ಪತ್ತೆಗೆ ತಂಡ ರಚಿಸಿದ್ದು, ಆದಷ್ಟು ಬೇಗನೆ ಹತ್ಯೆಕೋರರನ್ನು ಬಂಧಿಸಿ ಅವರ ಕುಟುಂಬಕ್ಕೆ ನ್ಯಾಯ ಒದಗಿಸುವ ಭರವಸೆ ನೀಡಿದರು.

Follow on Facebook Follow on Instagram
Share. Facebook Twitter WhatsApp Telegram
Previous Articleಕೇಂದ್ರ ಸರ್ಕಾರದ ಯೋಜನೆ ಹೆಸರಲ್ಲಿ ಮನೆ ಕಳ್ಳತನ; ಖಾಕಿ ಬಲೆಗೆ ಅಂತರ ರಾಜ್ಯ ಕಳ್ಳರು 
Next Article ಏಕನಾಥೇಶ್ವರಿ, ಬರಗೇರಮ್ಮ ದೇವಿ ವೈಭವದ ಮೆರವಣಿಗೆ
ಮೃತ್ಯುಂಜಯಾಚಾರ್ ಬಿ
  • Website

ಮೃತ್ಯುಂಜಯಾಚಾರ್ ಬಿ ಉಪ ಸಂಪಾದಕರು, ಟೈಮ್ಸ್ ಆಫ್ ಬಯಲುಸೀಮೆ ಮೃತ್ಯುಂಜಯಾಚಾರ್ ಬಿ ಅವರು 'ಟೈಮ್ಸ್ ಆಫ್ ಬಯಲುಸೀಮೆ' (timesofbayaluseeme.com) ಕನ್ನಡ ಸುದ್ದಿ ಪೋರ್ಟಲ್‌ನಲ್ಲಿ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಆಳವಾದ ಆಸಕ್ತಿ ಹೊಂದಿರುವ ಇವರು, ನಿಖರವಾದ ಸುದ್ದಿ ವಿಶ್ಲೇಷಣೆ ಮತ್ತು ಜನಪರ ವರದಿಗಳನ್ನು ನೀಡುವಲ್ಲಿ ಸದಾ ಕಾರ್ಯಪ್ರವೃತ್ತರಾಗಿದ್ದಾರೆ. ಪ್ರಚಲಿತ ವಿದ್ಯಮಾನಗಳು ಹಾಗೂ ಪ್ರಾದೇಶಿಕ ಸುದ್ದಿಗಳ ಬಗ್ಗೆ ಇವರು ವಿಶೇಷ ಗಮನಹರಿಸುತ್ತಾರೆ.

Related Posts

ಏಕನಾಥೇಶ್ವರಿ, ಬರಗೇರಮ್ಮ ದೇವಿ ವೈಭವದ ಮೆರವಣಿಗೆ

April 3, 2026

ಗರ್ಭಕಂಠದ ಕ್ಯಾನ್ಸರ್ ತಡೆಗೆ ‘ಹೆಚ್‍ಪಿವಿ’ ಲಸಿಕೆ ಶ್ರೀರಕ್ಷೆ

April 3, 2026

ಮುರುಘಾ ಮಠದಲ್ಲಿ ಅಕ್ಕಮಹಾದೇವಿ ಶರಣೋತ್ಸವ; ಸ್ತ್ರೀಕುಲದ ಅಸ್ಮಿತೆ ಅಕ್ಕ

April 3, 2026
Add A Comment
Leave A Reply Cancel Reply

Advertisement
Latest Posts

ನಿತ್ಯ ಭವಿಷ್ಯ – 04/04/2026 (ಶನಿವಾರ)

ನಿಧನ ವಾರ್ತೆ ಐ.ಎಂ.ಚಂದ್ರಶೇಖರಯ್ಯ

ಏಕನಾಥೇಶ್ವರಿ, ಬರಗೇರಮ್ಮ ದೇವಿ ವೈಭವದ ಮೆರವಣಿಗೆ

ಶಿವಲಿಂಗಪ್ಪ ಕೊಲೆ ಪ್ರಕರಣ; ಹಂತಕರ ಬಂಧನಕ್ಕೆ ಆಗ್ರಹ

Trending Posts

Subscribe to News

Get the latest sports news from NewsSite about world, sports and politics.

Facebook X (Twitter) Pinterest Vimeo WhatsApp TikTok Instagram

News

  • World
  • US Politics
  • EU Politics
  • Business
  • Opinions
  • Connections
  • Science

Company

  • Information
  • Advertising
  • Classified Ads
  • Contact Info
  • Do Not Sell Data
  • GDPR Policy
  • Media Kits

Services

  • Subscriptions
  • Customer Support
  • Bulk Packages
  • Newsletters
  • Sponsored News
  • Work With Us

Subscribe to Updates

Get the latest creative news from FooBar about art, design and business.

© 2026 ThemeSphere. Designed by ThemeSphere.
  • Privacy Policy
  • Terms
  • Accessibility

Type above and press Enter to search. Press Esc to cancel.