ಚಿತ್ರದುರ್ಗ: ನಗರದ ಚಳ್ಳಕೆರೆ ಗೇಟ್ ಸಮೀಪದ ನಾರಾಯಣಪ್ಪ ಲೇಔಟ್ ನ 6ನೇ ಕ್ರಾಸ್‍ನಲ್ಲಿನ ಸಿದ್ದೇಶ್ವರ ಜ್ಯುವೆಲರ್ಸ್ ಕವಿತಾ ವಿರೇಶ್ಸಮೃದ್ದಿ ಸದನದ ಮನೆಯಲ್ಲಿ ನಿನ್ನೆ ರಾತ್ರಿ ವಿಶೇಷವಾದ ಬ್ರಹ್ಮಕಮಲದ ಹೂವುಗಳು ಆರಳಿವೆ.
ಸುಮಾರು 14 ಬ್ರಹ್ಮಕಮಲ ಹೂವು ಏಕಕಾಲಕ್ಕೆ ಅರಳಿ ನಿಂತಿವೆ. ಬ್ರಹ್ಮಕಮಲ ಹೆಸರೇ ಹೇಳುವಂತೆ ಹಿಂದೂ ಪುರಾಣಗಳಲ್ಲಿ
ಕಂಡುಬರುವ ತ್ರಿಮೂರ್ತಿಗಳಲ್ಲಿ ಒಬ್ಬನಾಗಿರುವ ಬ್ರಹ್ಮನ ಹೆಸರಿನಲ್ಲಿರುವ ಅಪರೂಪದ ಪುಷ್ಪವಿದು. ಒಂದೂವರೆ ವರ್ಷದಲ್ಲಿ ಹೂ ಬಿಡುವುದು ಆರಂಭವಾಗುತ್ತದೆ.ಹೂವು ಬಿಡುವುದು ಸಾಮಾನ್ಯವಾಗಿ ಮಧ್ಯೆ ಮಾನ್ಸೂನ್ ಕಾಲದ ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲಿ. ಒಂದೇ ಒಂದು ಎಲೆಯಿಂದಗಿಡವಾಗಿ ಬೆಳೆಯುತ್ತಾ ತನ್ನ ಮೈತುಂಬೆಲ್ಲಾ ಹೂವುಗಳನ್ನು ಬಿಡುತ್ತದೆ. ಬ್ರಹ್ಮಕಮಲದ ಹೂವು ಅರಳುವ ಪ್ರಕ್ರಿಯೆಯೇ ಅತ್ಯಂತವಿಸ್ಮಯಕಾರಿಯಾದದ್ದು. ಈ ಹೂವನ್ನು ಬೆಳೆಸುವ ಎಲ್ಲರೂ ಅದು ಅರಳುವಾಗ ಕಾದುಕುಳಿತಿರುತ್ತಾರೆ. ಏಕೆಂದರೆ ಅರಳಿ ವಿಸ್ಮಯಮೂಡಿಸುವ ಈ ಹೂವಿನ ಆಯಸ್ಸು ತುಂಬಾ ಕಡಿಮೆ. ಸೂರ್ಯನ ಬೆಳಕಿನಲ್ಲಿ ಮೊಗ್ಗಾಗಿ ರಾತ್ರಿ ಚಂದಿರ ಬರುವುದನ್ನು ಕಾದುಸರಿಸುಮಾರು 10 ಗಂಟೆಗೆ ಅರಳಿ ಬೆಳಗಾಗುವ ಮುಂಚೆಯೇ ಮುದುಡಿ ಮುದ್ದೆಯಾಗಿರುತ್ತದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



