ಚಿತ್ರದುರ್ಗ: ಹಳ್ಳಿಗಳಲ್ಲಿ ಸ್ಮಾರ್ಟ್ ಮೀಟರ್ ಅಳವಡಿಸಲು ಸರ್ಕಾರ ತೀರ್ಮಾನಿಸಿದ್ದು ಈ ಸಂಬಂಧ ಎಇಇ ರವರನ್ನು ವಿಚಾರಿಸಿದರೆ ಏನು ಸಮಸ್ಯೆ ಇಲ್ಲ ಅಳವಡಿಸಿಕೊಳ್ಳಿ ಎಂದು ಹೇಳುತ್ತಿದ್ದಾರೆ. 200 ಯೂನಿಟ್ ಉಚಿತ ವಿದ್ಯುತ್ ನೀಡುವುದಾಗಿ ಘೋಷಿಸಿದ್ದ ಸರ್ಕಾರಗ್ರಾಹಕರನ್ನು ಲೂಟಿ ಮಾಡುತ್ತಿದೆ. ಖಾಸಗೀಕರಣ ಉದ್ದೇಶವನ್ನು ಇಟ್ಟುಕೊಂಡು ಸ್ಮಾರ್ಟ್ ಮೀಟರ್ ಅಳವಡಿಕೆಗೆಮುಂದಾಗಿದೆ. ಕೂಡಲೇ ಸ್ಮಾರ್ಟ್ ಮೀಟರ್ ಅಳವಡಿಕೆಯ ತೀರ್ಮಾನವನ್ನು ರಾಜ್ಯ ಸರ್ಕಾರ ಹಿಂದಕ್ಕೆ ಪಡೆಯದೇ ಇದ್ದರೆಜಿಲ್ಲಾಧಿಕಾರಿಗಳ ಮೂಲಕ ಸ್ಮಾರ್ಟ್ ಮೀಟರ್‍ಗಳನ್ನು ಸರ್ಕಾರಕ್ಕೆ ವಾಪಸ್ ಕೊಡುತ್ತೇವೆ ಎಂದು ಸರ್ಕಾರಕ್ಕೆ ರೈತ ಸಂಘ ಎಚ್ಚರಿಸಿದೆ.ಚಿತ್ರದುರ್ಗ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಈಚಘಟ್ಟದ ಸಿದ್ದವೀರಪ್ಪ, ಕೇರಳ ಮತ್ತು ತೆಲಂಗಾಣರಾಜ್ಯಗಳಲ್ಲಿ 900 ರೂ ಗೆ ಮೀಟರ್ ಸಿಗುತ್ತೆ.. ಆದರೆ ರಾಜ್ಯದಲ್ಲಿ 10 ಸಾವಿರ ರೂಗಳಿಗೆ ಮೀಟರ್ ಅಳವಡಿಸುವುದು ಏಕೆ…?ಸರ್ಕಾರವನ್ನು ಪ್ರಶ್ನಿಸಿದ ಅವರು, ಜಿಲ್ಲೆಗೆ ಭದ್ರಾ ನೀರು ಹರಿಸಲು 1997 ರಿಂದ ಹೋರಾಟ ಆರಂಭಿಸಿದ್ದೇವೆ ಆದರೆ ತುಂಗಭದ್ರಾದಿಂದ ಭದ್ರಾಯವರೆಗೆ ಕೆಲಸ ಮುಗಿದಿಲ್ಲ.ನಾಮಕಾವಸ್ಥೆಗೆ ಸರ್ಕಾರ ದಿನ ಕಳೆಯುತ್ತಿದೆ.. ಶೀಘ್ರವಾಗಿ ಯೋಜನೆಯನ್ನುಪೂರ್ಣಗೊಳಿಸಿ ರೈತರ ಜಮೀನಿಗೆ ನೀರು ಹರಿಸಬೇಕು. ಎಂದು ಆಗ್ರಹಿಸಿ ಜಿಲ್ಲೆಯ ಅಂತರಿಕ ವಿಚಾರಗಳನ್ನು ಸರಿಪಡಿಸಲುಜಿಲ್ಲೆಯ ಎಲ್ಲಾ ರೈತ ಸಂಘಗಳ 10 ಹಿರಿಯ ಮುಖಂಡರಗಳ ಸಮನ್ವಯ ಸಮಿತಿಯನ್ನು ರಚಿಸಿ ವಸ್ತುನಿಷ್ಠ ಚಳುವಳಿಗೆಸಿದ್ಧರಾಗಿದ್ದೇವೆ ಎಂದರು.
ರಾಜ್ಯ ಸರ್ಕಾರ ರೈತರಿಗೆ ಕಾರ್ಮಿಕರಿಗೆ ಭದ್ರತೆ ನೀಡಿಲ್ಲ. ಉದ್ಯಮಿಗಳ ಪರವಾಗಿ ಬಂಡವಾಳ ಷಾಹಿಗಳ ಪರವಾಗಿ ಸರ್ಕಾರ ಕೆಲಸಮಾಡುತ್ತಿದೆ.ರೈತರು ಬೆಳೆದ ಬೆಳೆಗಳಿಗೆ ಯೋಗ್ಯ ಬೆಲೆ ಸಿಗುತ್ತಿಲ್ಲ.ರೈತರು ಸಂಕಷ್ಟದಲ್ಲಿದ್ದಾರೆ.ಬಡವರ ಭೂಮಿಯನ್ನು ಕಿತ್ತುಕೊಳ್ಳಲುಅವಕಾಶ ಕೊಡುವುದಿಲ್ಲ.ಸರ್ಕಾರ ಸ್ವಾಮಿನಾಥನ್ ವರದಿ ಜಾರಿ ಮಾಡಲು ವಿಫಲವಾಗಿದೆ ಎಂದು ಸರ್ಕಾರವನ್ನು ದೂರಿದರು.ರೈತ ಮುಖಂಡರಾದ ಕೆ.ಪಿ ಭೂತಯ್ಯ ಮಾತನಾಡಿ, ಜಿಲ್ಲೆಯಲ್ಲಿ ಭಿನ್ನಾಭಿಪ್ರಾಯಗಳಿಂದ ರೈತ ಸಂಘಗಳು ಹೋಳಾಗಿವೆ.ಅದಕ್ಕಾಗಿಸರ್ಕಾರ ಎದುರುತ್ತಿಲ್ಲ.ಸ್ಮಾರ್ಟ್ ಮೀಟರ್ ಅಳವಡಿಕೆ ಮೂಲಕ ರೈತರಿಗೆ ಅನ್ಯಾಯ ಮಾಡುತ್ತಿದೆ.ರೈತರಿಗೆ ಎಲ್ಲಿಯಾದರೂಅನ್ಯಾಯ ಆದರೆ ಸಮನ್ವಯ ಸಮಿತಿಯ ಗಮನಕ್ಕೆ ತನ್ನಿ. ಜಿಲ್ಲಾಧಿ ಕಾರಿಗಳ ಮೂಲಕ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಯಿಸಿರೈತರಿಗೆ ನ್ಯಾಯ ದೊರಕಿಸುತ್ತೇವೆ ಎಂದು ತಿಳಿಸಿದರು.
ರೆಡ್ಡಿ ವೀರಣ್ಣ, ಕೊಟ್ರಬಸಪ್ಪ, ಕೆ.ಟಿ.ತಿಪ್ಪೇಸ್ವಾಮಿ ಧನಂಜಯ, ಮಲ್ಲಿಕಾರ್ಜನ, ಅಖಂಡ ಕರ್ನಾಟಕದ ಸಿದ್ದಪ್ಪ, ಸೇರಿದಂತೆ ವಿವಿಧತಾಲ್ಲೂಕು ಅಧ್ಯಕ್ಷರು ಭಾಗವಹಿಸಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



