ಚಿತ್ರದುರ್ಗ: ಕಾರ್ಮಿಕ ಕಲ್ಯಾಣ ಮಂಡಳಿಯು ಕಾರ್ಮಿಕರಿಗೆ ಉಪಯೋಗವಲ್ಲದಂತಹ ಯೋಜನೆಗಳನ್ನು ಜಾರಿ ಮಾಡಿ ಕಾರ್ಮಿಕರಿಗಾಗಿಮಂಡಳಿಯಲ್ಲಿ ಇದ್ದ ಹಣವನ್ನು ಲೂಟಿ ಮಾಡುತ್ತಿದೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಹಾಗೂ ಅಸಂಘಟಿತ ಕಾರ್ಮಿಕ ಸಂಘಗಳಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ವೈ.ಕುಮಾರ್ ಆರೋಪಿಸಿದ್ದಾರೆ.
ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆಬಂದಾಗಿನಿಂದಲೂ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಇದ್ದ ಹಣವನ್ನು ನೋಡಿ ಏನಾದರೂ ಮಾಡಿ ಲಪಟಾಯಿಸಬೇಕೆಂದುಕಾರ್ಮಿಕರಿಗೆ ಬೇಕಿಲ್ಲದ ವಿನಹ ಕಾರಣ ಯೋಜನೆಗಳನ್ನು ಜಾರಿ ಮಾಡಿ ಹಣವನ್ನು ಲಪಟಾಯಿಸುತ್ತಿದೆ. ಎಂದ ಅವರು ಸರ್ಕಾರಕ್ಕೆನಾವು ಆರೋಗ್ಯ ತಪಾಸಣೆ ಮಾಡಿ ಎಂದು ಕೇಳಿರಲಿಲ್ಲ.ಆದರೂ ಸಹ ಸರ್ಕಾರ ಅದರಲ್ಲೂ ಸಚಿವರಾದ ಸಂತೋಷ ಲಾಡ್ ರವರುತಮಗೆ ಬೇಕಾದವರಿಗೆ ಉಪಯೋಗ ಮಾಡಿಕೊಡುವ ಹಿನ್ನೆಲೆಯಲ್ಲಿ ಕಾರ್ಮಿಕರ ಹೆಸರಿನಲ್ಲಿ ಅವಶ್ಯಕತೆ ಇಲ್ಲದ ಯೋಜನೆಗಳನ್ನುಜಾರಿ ಮಾಡಿದ್ದಾರೆ.. ಅದರ ಅನುಷ್ಠಾನವೂ ಸಹ ಸರಿಯಾಗಿ ಮಾಡದೇ ಹಣವನ್ನು ಲಪಟಾಯಿಸಿದ್ದಾರೆ ಎಂದು ದೂರಿದರು.
ಕಾರ್ಮಿಕರಿಗೆ ಮಂಡಳಿ ವತಿಯಿಂದ ನೀಡಿದಂತಹ ಕಿಟ್ಗಳಲ್ಲಿ ಯಾವುದೇ ಉಪಯೋಗಕ್ಕೆ ಬಾರದ ವಸ್ತುಗಳನ್ನು ಹಾಕಿ ದುಪ್ಪಟ್ಟುಬೆಲೆಯಲ್ಲಿ ಟೆಂಡರ್ ಮೂಲಕ ಖರೀದಿಸಿ ನಮಗೆ ನೀಡಿದ್ದಾರೆ..ಈ ಕಿಟ್ ಖರೀದಿಯಲ್ಲಿಯೂ ಸಹ ಅವ್ಯವಹಾರ ನಡೆದಿದ್ದು 600 ರೂಬೆಲೆಬಾಳುವ ಕಿಟ್ಗಳನ್ನು 2500 ರೂಗಳಿಗೆ ಖರೀದಿಸಿದ್ದಾರೆ.ಇದಲ್ಲದೇ ಒಬ್ಬ ಕಾರ್ಮಿಕನಿಗೆ ತರಬೇತಿ ನೀಡುವ ನೆಪದಲ್ಲಿ ಲಕ್ಷಾಂತರರೂಗಳನ್ನು ಮಂಡಳಿ ವತಿಯಿಂದ ಬೇರೆಯವರಿಗೆ ನೀಡಲಾಗಿದೆ.ಈ ತರಭೇತಿಯಿಂದ ಕಾರ್ಮಿಕರಿಗೆ ಯಾವುದೇ ರೀತಿಯಾದಂತಹಲಾಭವಾಗಿಲ್ಲ ಎಂದು ತಿಳಿಸಿದರು.ಕಾರ್ಮಿಕ ಇಲಾಖೆಯಲ್ಲಿ ಟೆಂಡರ್ ಪಡೆದವರು ಅವರ ಕೆಲಸವನ್ನು ಮುಗಿಸಿ ಒಂದು ವಾರದಲ್ಲಿಯೇ ಇಲಾಖೆಯಿಂದ ಹಣವನ್ನುಪಡೆಯುತ್ತಿದ್ದಾರೆ.ಆದರೆ ಒಬ್ಬ ಕಾರ್ಮಿಕ ವಿಧವಾ ಭತ್ಯೆ, ಆರೋಗ್ಯ ಭತ್ಯೆ, ಪಿಂಚಣಿ, ವೈದ್ಯಕೀಯ ವೆಚ್ಚ, ಮದುವೆ ವೆಚ್ಚ ಹಾಗೂ ಶವಸಂಸ್ಕಾರದ ಹಣವನ್ನು ಪಡೆಯಲು ವರ್ಷಾನುಗಟ್ಟಲೆ ಕಾಯಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ಕಳೆದ ಎರಡು ವರ್ಷದಿಂದ
ಕಾರ್ಮಿಕ ಇಲಾಖೆಯ ಸಚಿವರಾಗಿರುವ ಸಂತೋಷ್ಲಾಡ್ ರವರು ಮಂಡಳಿಯ ಕೋಟ್ಯಾಂತರ ರೂ ಗಳನ್ನು ತಿಂದು ಹಾಕಿದ್ದಾರೆಎಂದು ಕುಮಾರ್ ಆರೋಪಿಸಿದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



