ಚಿತ್ರದುರ್ಗ : ಕನ್ನಡ ಭಾಷೆಗೆ 125 ಅಂಕಗಳನ್ನು ನಿಗಧಿಪಡಿಸಿರುವುದನ್ನು ನೂರು ಅಂಕಕ್ಕೆ ಇಳಿಸುವ ನಿರ್ಧಾರವನ್ನು ಸರ್ಕಾರಕೈಬಿಟ್ಟು ಯಥಾಸ್ಥಿತಿ ಮುಂದುವರೆಸುವಂತೆ ಕರುನಾಡ ವಿಜಯಸೇನೆಯಿಂದ ಜಿಲ್ಲಾಧಿಕಾರಿ ಮೂಲಕ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಯಿತು.ಗೋಕಾಕ್ ಚಳುವಳಿಯ ಫಲವಾಗಿ ಕನ್ನಡ ಭಾಷೆಗೆ ನೂರ ಇಪ್ಪತ್ತೈದು ಅಂಕಗಳನ್ನು ಅಂದಿನ ಮುಖ್ಯಮಂತ್ರಿ ಗುಂಡೂರಾವ್ನೇತೃತ್ವ ಸರ್ಕಾರ ತೀರ್ಮಾನಿಸಿದ್ದು, ಡಾ.ರಾಜ್‍ಕುಮಾರ್ ಮುಂದಾಳತ್ವದಲ್ಲಿ ನಡೆದ ಚಳುವಳಿಗೆ ಸಿಕ್ಕ ಗೌರವ. ಕನ್ನಡ ಸೇರಿದಂತೆಪ್ರಥಮ ಭಾಷೆಗಳಿಗೆ 125 ಅಂಕಗಳನ್ನು ನಿಗಧಿಪಡಿಸಿದ್ದನ್ನು ಯಾವುದೇ ಕಾರಣಕ್ಕು 100ಕ್ಕೆ ಕಡಿತಗೊಳಿಸಬಾರದು. ಇದೊಂದುಮಾತೃ ಭಾಷೆಯ ಸ್ಥಾನಮಾನ ಕುಗ್ಗಿಸುವ ಕೆಲಸ. ಶಿಕ್ಷಣ ಸಚಿವರು ಕೂಡಲೆ ತಮ್ಮ ನಿರ್ಧಾರ ಹಿಂದಕ್ಕೆ ಪಡೆಯುವಂತೆ ಕರುನಾಡವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಆಗ್ರಹಿಸಿದರು.ಕರುನಾಡ ವಿಜಯಸೇನೆ ರಾಜ್ಯ ಸಮಿತಿಯ ನಿಸಾರ್ ಅಹಮದ್, ಪ್ರಧಾನ ಕಾರ್ಯದರ್ಶಿ ಗೋಪಿನಾಥ್, ಕಾರ್ಮಿಕ ಘಟಕದಹರೀಶ್‍ಕುಮಾರ್, ನಗರಾಧ್ಯಕ್ಷ ಅವಿನಾಶ್ ಈ ಸಂದರ್ಭದಲ್ಲಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



