ಚಿತ್ರದುರ್ಗ: ಕ್ರೀಡಾ ಪಟುಗಳಿಗೆ ಪ್ರೋತ್ಸಾಹ ನೀಡಿ, ಕ್ರೀಡೆಯನ್ನು ಬೆಳಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಮಾದಾರಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳು ತಿಳಿಸಿದರು.ಚಿತ್ರದುರ್ಗ ಸ್ಪೋರ್ಟ್ಸ್ ಕ್ಲಬ್, ಕರ್ನಾಟಕ ಅಮೆಚೂರ್ ಕಬಡ್ಡಿ ಅಸೋಸಿಯೇಷನ್, ಬೆಂಗಳೂರು ಹಾಗೂ ಚಿತ್ರದುರ್ಗ ಜಿಲ್ಲಾಅಮೆಚೂರ್ ಕಬಡ್ಡಿ ಅಸೋಸಿಯೇಷನ್ ವತಿಯಿಂದ ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ 25 ವರ್ಷದೊಳಗಿನ ರಾಜ್ಯ ಮಟ್ಟದ ಪುರುಷರ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ-2025ರ ಪ್ರೀಮಿಯರ್ ಲೀಗ್ ಸೀಜನ್-4 ರ
ಉದ್ಘಾಟನಾ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಚಿತ್ರದುರ್ಗ ನಗರ ಕ್ರೀಡೆಗೆ ಯಾವತ್ತು ಸಹ
ಪ್ರೋತ್ಸಾಹವನ್ನು ನೀಡುತ್ತಾ ಬಂದಿದೆ ಇದರ ಫಲವಾಗಿ ಇಲ್ಲಿ ಹಲವಾರು ರೀತಿಯ ಕ್ರೀಡೆಗಳು ನಡೆಯುತ್ತಿರುತ್ತವೆ, ಈಗಾಗಲೇ ಇದೇಮೈದಾನದಲ್ಲಿ ವಾಲಿಬಾಲ್, ಕ್ರೀಕೆಟ್, ಹಾಕಿ, ಕಬಡ್ಡಿಯಂತಹ ಕ್ರೀಡೆಗಳು ನಡೆಯುತ್ತಿವೆ, ಇದನ್ನು ಯುವ ಜನಾಂಗ ನೋಡಿ ಕಲಿಯವಕಾರ್ಯವನ್ನು ಮಾಡುತ್ತಿದೆ ಎಂದರು.
ಚಿತ್ರದುರ್ಗದಲ್ಲಿ ವಿವಿಧ ಕ್ರೀಡೆಗಳ ಹಲವರು ಕ್ರೀಡಾಪಟುಗಳು ಇದ್ದಾರೆ ಅವರನ್ನು ಗುರುತಿಸಿ ಪ್ರೋತ್ಸಾಹ ಮಾಡುವ ಕಾರ್ಯ
ಚಿತ್ರದುರ್ಗದ ನಾಗರೀಕರಾದ ನಮ್ಮೆಲ್ಲರ ಮೇಲಿದೆ ಕ್ರೀಡಾ ಪಟುವಿಗೆ ಪ್ರೋತ್ಸಾಹ ನೀಡಿದಾಗ ಅತ ಉತ್ತಮ ಕ್ರೀಡಾಪಟುವಾಗಲುಸಾಧ್ಯವಿದೆ. ನಮ್ಮ ನಗರದಲ್ಲಿ ಇಂತಹ ಕ್ರೀಡಾಕೂಟಗಳು ಆಗಾಗ ನಡೆಯುವುದರಿಂದ ಇದನ್ನು ನೋಡಲು ಬರುವವರಗೆ ತಾವುಸಹಾ ಕ್ರೀಡಾಪಟುವಾಗಬೇಕೆಂದು ಅನಿಸುತ್ತದೆ. ಸತತವಾಗಿ ಅಭ್ಯಾಸವನ್ನು ಮಾಡಿದಾಗ ಮಾತ್ರ ಉತ್ತಮವಾದಕ್ರೀಡಾಪಟುವಾಗಲು ಸಾಧ್ಯವಿದೆ. ಎಂದ ಶ್ರೀಗಳು, ದಸರಾ ಸಮಯದಲ್ಲಿ ಶ್ರೀಮಠದಿಂದ ಶಾಲಾ-ಕಾಲೇಜಿನ ಮಕ್ಕಳಿಗಾಗಿ ಜಮುರಕಪ್ ಹೆಸರಿನಲ್ಲಿ ಹಲವಾರು ಕ್ರೀಡೆಗಳನ್ನು ಏರ್ಪಾಡು ಮಾಡುವುದರ ಮೂಲಕ ಕ್ರೀಡೆಗೆ ಪ್ರೋತ್ಸಾಹವನ್ನು ನೀಡಲಾಗಿದೆ ಎಂದರು.
ಕ್ರೀಡೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಯಾವುದೇ ಜಾತಿ ಧರ್ಮ ಭೇಧ ಇಲ್ಲದೆ ತಂಡವನ್ನು ಗೆಲ್ಲಿಸುವವ ಗುರಿಯನ್ನು ಮಾತ್ರಹೊಂದಿರುತ್ತಾರೆ. ಕ್ರೀಡೆಯಲ್ಲಿ ತೊಡಗಿದ ವ್ಯಕ್ತಿ ಸೂಕ್ತವಾದ ಸಮಯದಲ್ಲಿ ಸೂಕ್ತವಾದ ನಿರ್ಧಾರವನ್ನು ತೆಗೆದುಕೊಳ್ಳಲುಮುಂದಾಗುತ್ತಾನೆ. ಇದರಿಂದ ಅವರನ್ನು ವಿವಿಧ ಕಂಪನಿಗಳು ಉನ್ನತವಾದ ದೀಢೀರ್ ನಿರ್ಧಾರವನ್ನು ತೆಗೆದುಕೊಳ್ಳುವಂತ ಕೆಲಸಕ್ಕೆನೇಮಿಸಿಕೊಳ್ಳುತ್ತಾರೆ ಪಾಠದ ಜೊತೆಗೆ ಕ್ರೀಡೆಗೂ ಸಹಾ ಅದ್ಯತೆಯನ್ನು ನೀಡಬೇಕಿದೆ ಇದರಿಂದ ಮಾನಸಿಕ ಹಾಗೂ ದೈಹಿಕವಾಗಿಸದೃಢರಾಗಲು ಸಾಧ್ಯವಿದೆ ಎಂದು ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳು ತಿಳಿಸಿದರು.ನಗರಾಭೀವೃದ್ದಿ ಪ್ರಾಧಿಕಾರ ಹಾಗೂ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಎಂ.ಕೆ.ತಾಜ್‍ಪೀರ್ ಮಾತನಾಡಿ, ಕ್ರೀಡೆಯನ್ನುಒಂದುದಿನ ಮಾತ್ರ ಆಡಿ ಬಿಡುವುದು ಸರಿಯಲ್ಲಿ ನಿರಂತರವಾಗಿ ಅಭ್ಯಾಸವನ್ನು ಮಾಡುವುದರ ಮೂಲಕ ಈ ರೀತಿಯಾದ ಪಂದ್ಯಾವಳಿಯಲ್ಲಿಭಾಗವಹಿಸಿದಾಗ ಗೆಲುವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿ, ಶಾಲಾ-ಕಾಲೇಜುಗಳಲ್ಲಿ ಕ್ರೀಡೆಯನ್ನು ಮರೆತ್ತಿದ್ದಾರೆ ಅಲ್ಲಿನ ವಿದ್ಯಾರ್ಥಿಗಳು ಶಾಲೆಯ, ಕಾಲೇಜಿನ ಕ್ರೀಡಾ ಕೂಟ ಇದ್ದಾಗ ಮಾತ್ರ ಆಟವನ್ನು ಆಡುತ್ತಾರೆ ಆದರೆ ನಿರಂತರವಾಗಿ ತಮ್ಮನ್ನುತಾವು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕಿದೆ. ಈ ಮೈದಾನದಲ್ಲಿನಿರಂತರವಾಗಿ ಕ್ರೀಡೆಯಲ್ಲಿ ಅಭ್ಯಾಸವನ್ನು ಮಾಡುವುದುನಡೆಯಬೇಕಿದೆ, ಕ್ರೀಡಾ ಪಟುಗಳಿಗೆ ಅನುಕೂಲಕ್ಕಾಗಿ ಈ ಮೈದಾನದಲ್ಲಿ ಸಿಮೆಂಟಿನ ಕುರ್ಚಿಗಳನ್ನು ಪ್ರಾಧಿಕಾರದವತಿಯಿಂದಮಾಡಿಸಲಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಪತ್ರಕರ್ತರಾದ ಟಿ.ಕೆ.ಬಸವರಾಜು ವಹಿಸಿದ್ದರು. ಈ ಸಂದರ್ಭದಲ್ಲಿ ರಾಜ್ಯ ಸಭೆಯ ಮಾಜಿಸದಸ್ಯರಾದ ಹೆಚ್.ಹನುಮಂತಪ್ಪ, ತಾ.ಪಂ.ಮಾಜಿ ಸದಸ್ಯರಾದ ಸುರೇಶ್ ನಾಯ್ಕ್, ನಾಗರಾಜ್, ಕಂದಾಯ ಅಧಿಕಾರಿಮಂಜುನಾಥ್, ಎಸ್.ಬಿ.ಐ.ನ ಡಿವಿಜಲ್ ಮ್ಯಾನೇಜರ್ ವೀರಯ್ಯ, ಶಿವಲಿಂಗಪ್ಪ, ಮಧು ಶ್ರೀನಿವಾಸ್ ಪರಶುರಾಮ್, 7 ಸ್ಟಾರ್ಬಳ್ಳಾರಿ ತಂಡದ ಮಾಲಿಕರಾದ ಆಗ್ರಹಾರ ಗೋವಿಂದ, ಕೆಳಗೋಟೆ ಕಿಂಗ್ ಮಾಲಿಕರಾದ ದೇವರಾಜ್, ಎಸ್.ಬಿ.ಐ. ಲೈಫ್‍ನಚಂದ್ರಶೇಖರ್, ಸರ್ಕಲ್ ಅಡ್ಡದ ಪ್ರಜ್ವಲ್, ರಾಯರಸೇನೆಯ ಮಧು-ಶ್ರೀನಿವಾಸ್ ಹಾಗೂ ಚಿತ್ರದುರ್ಗ ಸ್ಪೋಟ್ಸ್ ಕ್ಲಬ್‍ನನಾಗಭೂಷಣ್ ಭಾಗವಹಿಸಿದ್ದರು.ಉದ್ಘಾಟನೆಯ ಲೀಗ್ ಪಂದ್ಯಾವಳಿಯಲ್ಲಿ ಚಿತ್ರದುರ್ಗ ಸ್ಪೋಟ್ಸ್ ಕ್ಲಬ್ ತಂಡ (25) ರಾಯರಸೇನೆಯ (24) ವಿರುದ್ದ 01ಅಂಕಗಳನ್ನುಗಳಿಸಿದೆ, ಕೆಳಗೋಟೆ ಕಿಂಗ್ ತಂಡ (38) ಅಂಕಗಳಿಗೆ 7 ಸ್ಟಾರ್ ಬಳ್ಳಾರಿ (24) ಅಂಕಗಳನ್ನು ಗಳಿಸಿದೆ, ಸರ್ಕಲ್ ಅಡ್ಡತಂಡವೂ (22) ಅಂಕಗಳನ್ನು ಗಳಿಸಿದರೆ ಎಸ್.ಬಿ.ಐ. ಲೈಫ್ 28 ಅಂಕಗಳನ್ನು ಗಳಿಸಿದೆ. ಗಂಗಾಧರ್ ಪ್ರಾರ್ಥಿಸಿದರೆ, ಮುರುಗೇಶ್ಸ್ವಾಗತಿಸಿದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



