ಚಿತ್ರದುರ್ಗ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬಡವರ ಪರವಾಗಿದೀನ ದಲಿತರ ಪರವಾಗಿ ಇರುವಂತಹ ಯಾವುದೇಅಭಿವೃದ್ಧಿ ಕಾರ್ಯಗಳನ್ನು ಜಾರಿಗೆ ತಂದಿಲ್ಲ. ಬಗರ್ ಹುಕುಂ ಕೊಡುವದರಿಂದ ಆ ಕುಟುಂಬಗಳಿಗೆ ಶಾಶ್ವತ ಆಸ್ತಿಯಾಗಲಿದೆಆದ್ದರಿಂದ ಆದಷ್ಟು ಬೇಗ ಮಾಡಬೇಕೆಂದು ಸರ್ಕಾರಕ್ಕೆ ಸಂಸದರಾದ ಗೋವಿಂದ ಕಾರಜೋಳ ಆಗ್ರಹಿಸಿದ್ದಾರೆ.ಚಿತ್ರದುರ್ಗ ಜಿಲ್ಲೆಯಲ್ಲಿ ಸುಮಾರು40 ಸಾವಿರಕ್ಕೂ ಹೆಚ್ಚು ಜನ ಬಡವರು ಸುಮಾರು ವರ್ಷಗಳಿಂದ ಸರ್ಕಾರಿ ಜಮೀನನ್ನು ಅನಧಿಕೃತವಾಗಿ ಸಾಗುವಳಿ ಮಾಡುತ್ತಾಬಂದಿದ್ದಾರೆ. ಬಡವರು ಅದರ ಮೇಲೆ ಹೊಟ್ಟೆತುಂಬಿಸಿಕೊಳ್ಳುತ್ತಿದ್ದಾರೆ.. ಸರ್ಕಾರ ಬಗರ್ ಹುಕ್ಕುಂ ಜಮೀನನ್ನು ಆಯಾಯ ರೈತರಿಗೆಮಂಜೂರು ಮಾಡಿಕೊಡಲಿಕ್ಕೆ ತಾಲ್ಲೂಕು ಮಟ್ಟದಲ್ಲಿ ವಿಧಾನಸಭಾ ಕ್ಷೇತ್ರದ ಶಾಸಕರನ್ನು ಅಧ್ಯಕ್ಷರನ್ನಾಗಿ ಮಾಡಿ ಆದೇಶಮಾಡಿದೆ.
ಇವತ್ತಿಗೂ ಕೂಡ ಚಿತ್ರದುರ್ಗ ಜಿಲ್ಲೆಯಲ್ಲಿ 2 ವರ್ಷದಿಂದ ಯಾವ ಶಾಸಕರು ಕೂಡ ಬಗರ್ ಹುಕ್ಕುಂ ಚೀಟಿ ವಿಚಾರವಾಗಿ
ಸಭೆಯನ್ನು ಮಾಡಿಲ್ಲ.. ಅಂತ ಜನ ಬರುತ್ತಿದ್ದಾರೆ.ಕೂಡಲೇ ಬಗರ್ ಹುಕ್ಕುಂ ಕಮಿಟಿ ಮೀಟಿಂಗ್ ಮಾಡಿ.. ಬಡವರಿಗೆ ನ್ಯಾಯ
ಒದಗಿಸಿಕೊಡಿ ಎಂದು ಮನವಿ ಮಾಡಿದರು.ಸಿಗಂದೂರು ಸೇತುವೆ ಉದ್ಘಾಟನೆ ವಿಚಾರವಾಗಿ ಮುಖ್ಯಮಂತ್ರಿಗಳಿಗೆ ಆಹ್ವಾನ ಕೊಡದೇ ಬಿಜೆಪಿ ರಾಜಕಾರಣ ಮಾಡುತ್ತಿದೆ ಎಂಬಡಿ.ಕೆ ಶಿವಕುಮಾರ್ ರವರಿಗೆ ಹೇಳಿಕೆಗೆ ಪ್ರತಿಕ್ರಿಯಿಸಿ ಸಂಸದರು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಪೈಕಿ 140 ಕ್ಷೇತ್ರಗಳಲ್ಲಿಕಾಂಗ್ರೆಸ್ ಶಾಸಕರು ಸಚಿವರು ಇರುವ ಸ್ಥಳಗಳಲ್ಲಿ ಪ್ರೋಟೋಕಾಲ್ ಮೆಂಟೈನ್ ಮಾಡುವುದಿಲ್ಲ, ನಮ್ಮ ಜಿಲ್ಲೆಯಲ್ಲಿಯೇ 198ಕಾರ್ಯಕ್ರಮಗಳನ್ನು ಮಾಡಿದ್ದಾರೆ.. ಅದರಲ್ಲಿ ಹಲವಾರು ಕಾರ್ಯಕ್ರಮಗಳಿಗೆ ನನ್ನನ್ನು ಕರೆಯದೇ ಮಾಡಿದ್ದಾರೆ ಇದರ ಬಗ್ಗೆ ನಾನುಜಿಲ್ಲಾಧಿಕಾರಿಗಳಿಗೆ.. ಸಂಬಂಧಪಟ್ಟ ಅಧಿಕಾರಿಗಳಿಗೆ ಮತ್ತು ಚೀಫ್ ಸೆಕ್ರೆಟರಿಗೆ ಪತ್ರ ಬರೆಯುತ್ತೇನೆ ಎಂದರು.
ಪ್ರೋಟಾಕಾಲ್ ಮೆಂಟೈನ್ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿ
ಸರ್ಕಾರದಲ್ಲಿ ಅದರದೇ ಆದಂತಹಕಾನೂನುಗಳಿವೆ. ಮುಖ್ಯಮಂತ್ರಿಗಳಿಗೆ ಆಹ್ವಾನ ಕೊಟ್ಟಿಲ್ಲ ಅಂತ ಹೇಳುವ ವಿಷಯ ಇದು ಅಲ್ಲ. ಶಿವಮೊಗ್ಗ ಜಿಲ್ಲೆಯಲ್ಲಿ ಬರುವಂತಹಶಾಸಕರುಗಳಿಗೆ, ಸಂಸದರಿಗೆ. ವಿಧಾನ ಪರಿಷತ್ತಿನ ಸದಸ್ಯರಿಗೆ ಆಹ್ವಾನ ಕೊಟ್ಟಿದ್ದಾರೆ. ಪ್ರೊಟೋಕಲ್ ಇರುವುದೇ ಅಷ್ಟೇ ಎಂದ ಸಂಸದರು, ಯಾವ ಸಂದರ್ಭದಲ್ಲಿ ಕಂಪಲ್ಸರಿ ಬರುತ್ತದೆ ಎಂದರೆ ಮುಖ್ಯಮಂತ್ರಿಗಳನ್ನು ಕರೆಯಬೇಕು. ಮುಖ್ಯಮಂತ್ರಿಗಳುಅಧ್ಯಕ್ಷತೆಯನ್ನು ವಹಿಸಬೇಕು ಎನ್ನುವ ಸಂದರ್ಭ ಪ್ರಧಾನ ಮಂತ್ರಿಗಳು ಭಾಗವಹಿಸುವ ಸಂದರ್ಭದಲ್ಲಿ ಬರುತ್ತದೆ.ಆದರೆ ಈಮುಖ್ಯಮಂತ್ರಿಗಳು ಈ ವಿಚಾರವಾಗಿ ರಾಜಕಾರಣ ಮಾಡುತ್ತಿದ್ದಾರೆ ಮುಖ್ಯಮಂತ್ರಿಗಳಿಗೆ ಅಭಿವೃದ್ಧಿಗಿಂತ ರಾಜ್ಯಕಾರಣಮುಖ್ಯವಾಗಿದೆ ಎಂದು ಗೋವಿಂದ ಕಾರಜೋಳ ಮುಖ್ಯಮಂತ್ರಿಗಳ ಮೇಲೆ ಕಿಡಿ ಕಾರಿದರು.ಸುಮಾರು 500 ಕೋಟಿ ವೆಚ್ಚ ಮಾಡಿ ಸಿಗಂದೂರು ಸೇತುವೆ ನಿರ್ಮಾಣ ಮಾಡಿದ್ದೇವೆ ಇದರಿಂದ ನೂರು ಕಿಲೋಮೀಟರ್
ಸುತ್ತಿಕೊಂಡು ಬರುವುದು ತಪ್ಪಿದೆ.. ಇದನ್ನು ಕೇಂದ್ರ ಸಚಿವರಾದ ನಿತಿನ್ ಗಡ್ಕರಿರವರು ಉದ್ಘಾಟನೆ ಮಾಡಿದ್ದಾರೆ. ಇದು ಒಂದುರಾಜ್ಯಕ್ಕೆ ಆಸ್ತಿಯಾಯಿತು.. ಇದನ್ನು ನೋಡಿ ಸಂತೋಷ ಪಡಬೇಕು.. ಅದನ್ನು ಬಿಟ್ಟು ಮುಖ್ಯಮಂತ್ರಿಗಳು ವಿಧಾನಸೌಧದಲ್ಲಿ ಕೂತುಪತ್ರ ಬರೆಯುತ್ತಾರೆ ಎಂದು ಸಂಸದರು ವ್ಯಂಗವಾಡಿದರ
ಕಾಂಗ್ರೆಸ್ ನ 55 ಜನ ಶಾಸಕರನ್ನು ಟಾರ್ಗೆಟ್
ಕಾಂಗ್ರೆಸ್ ನ 55 ಜನ ಶಾಸಕರನ್ನು ಟಾರ್ಗೆಟ್ ಮಾಡಿದ್ದಾರೆ.. ಈಡಿ ದಾಳಿ ಮಾಡಿಸುವ ಪ್ಲಾನ್‍ನ್ನು ಬಿಜೆಪಿ ಮಾಡುತ್ತಿದೆ ಎಂಬ
ಆರೋಪಕ್ಕೆ ಪ್ರತಿಕ್ರಿಯಿಸಿ ಮಾರಾಟಕ್ಕೆ ಸಿದ್ಧ ಇದ್ದೇವೆ.ಯಾರು ಖರೀದಿ ಮಾಡೋರು ಬಂದು ಖರೀದಿ ಮಾಡಿ ಎಂತ ಕೇಳುತ್ತಿದ್ದಾರೆ 55ಮಂದಿಯ ಪಟ್ಟಿಯನ್ನು ಹುನಗುಂದ ಶಾಸಕರನ್ನೇ ಕೇಳಬೇಕು ಪಟ್ಟಿಯನ್ನು ಅವರು ರಿಲೀಸ್ ಮಾಡಲಿ ಹುನಗುಂದ ಶಾಸಕರನ್ನುಆಗ್ರಹ ಮಾಡುತ್ತೇನೆ ನಾನು ಅದೇ ಜಿಲ್ಲೆಯವನು ಆ 55 ಜನರ ಪಟ್ಟಿಯನ್ನು ರಿಲೀಸ್ ಮಾಡಬೇಕೆಂದು ಎಂದ ಅವರು ನೀವು ಖರೀದಿಮಾಡಲಿಕ್ಕೆ ರೆಡಿ ಇದ್ದೀರಾ ಎಂಬುದಕ್ಕೆ ಪ್ರತಿಕ್ರಿಯಿಸಿ ಸಾರ್ವಜನಿಕ ಜೀವನದಲ್ಲಿ ಯೋಗ್ಯ ಇರುವಂತಹ.ಸಮಾಜ ಸೇವೆಮಾಡುವಂತಹ. ಸಾಮಾಜಿಕ ಕಳಕಳಿ ಕಾಳಜಿ ಇರುವಂತಹ ಕುರಿಗಳಿದ್ದರೆ ಖಂಡಿತ ಖರೀದಿ ಮಾಡುತ್ತೇವೆ ಎಂದು ಸಂಸದಕಾರಜೋಳ ತಿಳಿಸಿದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



